ಇಲ್ಕಲೇ (ಉತ್ತರ ಇಂಗ್ಲೆಂಡ್), ಜೂನ್ 25: ಇಲ್ಲಿ ನಡೆದ ಏಗಾನ್ ಎಟಿಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಆದಿಲ್ ಶಮಾಸ್ದಿನ್ (ಕೆನಡಾ) ಜೋಡಿ, ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದೆ.ಟಾಪ್ ಸೀಡ್ ಪೇಸ್ ಹಾಗೂ ಆದ್ದಿಲ್ ಅವರು ವೈಲ್ ಕಾರ್ಡ್ ಎಂಟ್ರಿ ಪಡೆದು ಫೈನಲ್ ಗೇರಿದ್ದ ಬ್ರಿಡಾನ್ ಕ್ಲೆನ್ ಹಾಗೂ ಜೋ ಸಲಿಸಬರಿ ವಿರುದ್ಧ ಜಯ ದಾಖಲಿಸಿದರು.ರೋಚಕವಾಗಿ ನಡೆದ ಪಂದ್ಯದಲ್ಲಿ ಪೇಸ್ ಹಾಗೂ ಆದಿಲ್ ಅವರು 2-6,6-2 ಹಾಗೂ 10-8 ಸೆಟ್ ಗಳಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡರು. 44 ವರ್ಷ ವಯಸ್ಸಿನ ಪೇಸ್ ಹಾಗೂ ಆದಿಲ್ ಮೊದಲ ಸೆಟ್ ಕಳೆದುಕೊಂಡರೂ ಎರಡನೇ ಹಾಗೂ ಮೂರನೇ ಸೆಟ್ ಗಳಲ್ಲಿ ರೋಚಕ ಆಟ ಪ್ರದರ್ಶಿಸಿ, ಪ್ರಶಸ್ತಿ ಗೆದ್ದರು.