ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್ ಪಂದ್ಯ ಸೋತ ಕೋಪದಲ್ಲಿ ಅಂಪೈರ್‌ ಮೇಲೆ ಹಲ್ಲೆ ಮಾಡಿದ ಅಲೆಕ್ಸಾಂಡರ್

Alexander

ಜರ್ಮನಿಯ ಟೆನಿಸ್ ತಾರೆ ಹಾಗೂ ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರು ಮೆಕ್ಸಿಕನ್ ಓಪನ್‌ನಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಡಬಲ್ಸ್ ಪಂದ್ಯದಲ್ಲಿ ಸೋಲನ್ನು ಸಹಿಸಲಾಗದೆ, ಅಂಪೈರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕುರ್ಚಿಗೆ ಬಲವಾಗಿ ಹೊಡೆದು ರಾಕೆಟ್ ಅನ್ನು ಒಡೆದು ಹಾಕಿದರು.

ಅಲೆಕ್ಸಾಂಡರ್ ವರ್ತನೆಯನ್ನ ಖಂಡಿಸಿದ ಸಂಘಟಕರು, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜ್ವೆರೆವ್ ಅವರನ್ನು ಪಂದ್ಯಾವಳಿಯಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಅವರು ಸಿಂಗಲ್ಸ್ ಕೂಡ ಆಡುವಂತಿಲ್ಲ.

ಮಂಗಳವಾರ ರಾತ್ರಿ ನಡೆದ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಜ್ವೆರೆವ್‌-ಮಾರ್ಸೆಲೊ ಮೆಲೊ (ಬ್ರೆಜಿಲ್‌) ಜೋಡಿ 2-6, 6-4, 6-10ರಲ್ಲಿ ಗ್ಲಾಸ್‌ಪೂಲ್‌ (ಬ್ರಿಟನ್‌)-ಹ್ಯಾರಿ ಹೆಲಿಯೊವಾರಾ (ಫಿನ್‌ಲ್ಯಾಂಡ್‌) ಎದುರು ಸೋತರು. ಆದಾಗ್ಯೂ, ಕೊನೆಯ ಸೆಟ್‌ನಲ್ಲಿ ಲಾಯ್ಡ್ ಹೊಡೆದ ಹೊಡೆತದ ವಿರುದ್ಧ ಜ್ವೆರೆವ್ ಪ್ರತಿಭಟಿಸಿದರು, ಅದನ್ನು ಚೇರ್ ಅಂಪೈರ್ ತಿರಸ್ಕರಿಸಿದರು.

ಇದರಿಂದ ಕೆರಳಿದ ಜ್ವೆರೆವ್ ಅಂಪೈರ್‌ಗೆ ಥಳಿಸಿದ್ದಾರೆ. ಪಂದ್ಯದ ಕೊನೆಯಲ್ಲಿ, ಅಂಪೈರ್ ಕುರ್ಚಿಯ ಬಳಿಗೆ ಬಂದು, ರ್ಯಾಕೆಟ್ ಅನ್ನು ಪದೇ ಪದೇ ಬಲವಾಗಿ ಒಡೆದರು. ಅಂಪೈರ್ ತನ್ನ ಕಾಲುಗಳನ್ನು ಮೇಲೆತ್ತಿಕೊಳ್ಳದಿದ್ದರೆ ಗಾಯಗೊಳ್ಳುತ್ತಿದ್ದರು. ಜ್ವೆರೆವ್ ಅವರ ವರ್ತನೆಗೆ ಟೆನಿಸ್ ಗ್ರೂಪ್ ಆಕ್ರೋಶ ವ್ಯಕ್ತಪಡಿಸಿವೆ.

''ದುಷ್ಕೃತ್ಯಕ್ಕಾಗಿ ಜ್ವೆರೆವ್ ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ'' ಎಂದು ಟೆನಿಸ್ ವೃತ್ತಿಪರರ ಸಂಘ ತಿಳಿಸಿದೆ.

ಜ್ವೆರೆವ್ ಅವರ ಅತಿರೇಕದ ವರ್ತನೆಗೆ ಬುಧವಾರ ಪ್ರತಿಕ್ರಿಯಿಸಿದ್ದು, ಅಂಪೈರ್ ಹಾಗೂ ಪಂದ್ಯಾವಳಿಯ ಆಯೋಜಕರ ಬಳಿ ಕ್ಷಮೆಯಾಚಿಸಿದೆ. ಜ್ವೆರೆವ್ ಅವರ ವರ್ತನೆಯನ್ನು ಟೆನಿಸ್ ತಾರೆಗಳಾದ ನೊವಾಕ್ ಜೊಕೊವಿಕ್ ಮತ್ತು ಆಂಡಿ ಮರ್ರೆ ದೂಷಿಸಿದ್ದಾರೆ. ಅವರಿಗೆ ಮ್ಯಾನೇಜರ್ ಗಳು ವಿಧಿಸಿರುವ ಶಿಕ್ಷೆ ಸಮರ್ಥನೀಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಜ್ವೆರೆವ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಟೆನಿಸ್ ಅಭಿಮಾನಿಗಳು ಅಲೆಕ್ಸಾಂಡರ್ ವರ್ತನೆಯನ್ನ ತೀವ್ರವಾಗಿ ಟೀಕಿಸಿದ್ದಾರೆ.

Story first published: Thursday, February 24, 2022, 15:29 [IST]
Other articles published on Feb 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X