ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಗೆಳತಿಯಿಂದ ದೌರ್ಜನ್ಯದ ಆರೋಪ

ಬರ್ಲಿನ್: ಸ್ಟಾರ್ ಟೆನಿಸ್ ಆಟಗಾರ, ಜರ್ಮನ್‌ನ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಅವರ ಮಾಜಿ ಗೆಳತಿ ಒಲ್ಯಾ ಶರಿಪೋವಾ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಕಳೆದ ವರ್ಷ ಯುಎಸ್ ಓಪನ್‌ಗೂ ಮುನ್ನ ಅಲೆಕ್ಸಾಂಡರ್ ತನ್ನ ಮೇಲೆ ದಾಳಿ ಮಾಡಿದ್ದ ಎಂದು ಶರಿಪೋವಾ ದೂರಿದ್ದಾರೆ.

ಎಸ್‌ಆರ್‌ಎಚ್ ಆಲ್ ರೌಂಡರ್ ವಿಜಯ್ ಶಂಕರ್ ಐಪಿಎಲ್‌ನಿಂದ ಔಟ್!

ನ್ಯೂಯಾರ್ಕ್‌ನ ಹೋಟೆಲ್ ರೂಮೊಂದರಲ್ಲಿ ಅಲೆಕ್ಸಾಂಡರ್ ಜ್ವೆರೆವ್ ದಿಂಬಿನ ಸಹಾಯದಿಂದ ನನ್ನ ಕತ್ತು ಹಿಸುಕಲು ಪ್ರಯತ್ನಿಸಿದ್ದ. ಆದರೆ ತಾನು ಜೀವ ಭಯದಿಂದ ಅಲ್ಲಿಂದ ಬರಿಗಾಲಲ್ಲೇ ಓಡಿ ಬಂದೆ ಎಂದು ಒಲ್ಯಾ ಶರಿಪೋವಾ ಹೇಳಿಕೊಂಡಿದ್ದಾರೆ. ಆದರೆ ಈ ಆರೋಪವನ್ನು ಜ್ವೆರೆವ್ ತಳ್ಳಿ ಹಾಕಿದ್ದಾರೆ.

ಸಿಎನ್‌ಎನ್‌ಗೆ ಶರಿಪೋವಾ ಕೆಲ ವಾಟ್ಸ್‌ಆ್ಯಪ್ ಸ್ಕ್ರೀನ್‌ ಶಾಟ್‌ಗಳನ್ನು ತೋರಿಸಿದ್ದಾರೆ. ಇದರ ಪ್ರಕಾರ ಘಟನೆ ನಡೆದಿದ್ದು 2019ರ ಆಗಸ್ಟ್ 23ರಂದು ಎಂದು ತಿಳಿದು ಬಂದಿದೆ. ಜ್ವೆರೆವ್ ಹೆಸರು ಹೇಳದೆ ಶರಿಪೋವಾ ಇದೇ ಘಟನೆಗೆ ಸಂಬಂಧಿಸಿ ಇನ್‌ಸ್ಟಾಗ್ರಾಮ್ ಪೋಸ್ಟ್ ಕೂಡ ಹಾಕಿಕೊಂಡಿದ್ದರು ಎನ್ನಲಾಗಿದೆ.

ಐಪಿಎಲ್ 2020: ಎಲ್ಲೆ ಮೀರಿ ವರ್ತಿಸಿದ 'ಯೂನಿವರ್ಸ್ ಬಾಸ್‌'ಗೆ ದಂಡ

ಆದರೆ 23ರ ದಹರೆಯದ ಜ್ವೆರೆವ್, ಶರಿಪೋವಾ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. 'ಆಕೆ ಅಂತಹ ಹೇಳಿಕೆಗಳನ್ನು ನೀಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ಏಕೆಂದರೆ ಆ ಆರೋಪಗಳು ನಿಜವಲ್ಲ,' ಎಂದು ಜ್ವೆರೆವ್ ಸಾಮಾಜಿಕ ಜಾಲತಾಣದಲ್ಲಿ ಗುರುವಾರ (ಅಕ್ಟೋಬರ್ 29) ಪೋಸ್ಟ್ ಹಾಕಿಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Saturday, October 31, 2020, 12:51 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X