ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಭಾರತೀಯ ಕ್ರೀಡಾಪಟುಗಳಿಗೆ ದೈನಂದಿನ ಭತ್ಯೆ ಸಿಕ್ಕಿಲ್ಲ!

Asian Games 2018: India athletes yet to get daily allowance

ಜಕಾರ್ತಾ, ಆಗಸ್ಟ್ 25: ಪ್ರತೀ ಪ್ರತಿಷ್ಠಿತ ಕ್ರೀಡಾಕೂಟಗಳಾಗುವಾಗಲೂ ಭಾರತ ಸಾಧನೆ ನಿಟ್ಟಿನಲ್ಲಿ ಗುರುತಿಸಿಕೊಳ್ಳುವ ಜೊತೆ ಜೊತೆಗೆ ಒಂದಿಲ್ಲೊಂದು ನಕಾರಾತ್ಮಕ ಸಂಗತಿಗೂ ಗುರುತಿಸಿಕೊಳ್ಳೋದಿದೆ. ಈ ಸಾರಿ ನಮ್ಮ ಕ್ರೀಡಾಪಟುಗಳಿಗೆ ದೈನಂದಿನ ಭತ್ಯೆ ನೀಡಲ್ಲವೆಂದು ಮೂಲವೊಂದರಿಂದ ತಿಳಿದು ಬಂದಿದೆ.

ಏಷ್ಯನ್ ಗೇಮ್ಸ್ 2018: ಮಹಿಳಾ ಸ್ಕ್ವ್ಯಾಷ್ ನಲ್ಲಿ ಕಂಚು ಗೆದ್ದ ದೀಪಿಕಾಏಷ್ಯನ್ ಗೇಮ್ಸ್ 2018: ಮಹಿಳಾ ಸ್ಕ್ವ್ಯಾಷ್ ನಲ್ಲಿ ಕಂಚು ಗೆದ್ದ ದೀಪಿಕಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ದೈನಂದಿನ ಭತ್ಯೆಯಾಗಿ ಯುಎಸ್ಡಿ 50 ( 3,488.75 ರೂ.) ಸಿಗಬೇಕು. ಟೆನಿಸ್ ನಂತ ಕೆಲ ಕ್ರೀಡಾಸ್ಪರ್ಧೆಗಳು ಮುಗಿಯುತ್ತ ಬಂತು, ಆದರೆ ಭಾರತೀಯ ಕ್ರೀಡಾಪಟುಗಳಿಗೆ ದೈನಂದಿನ ಭತ್ಯೆ ಇನ್ನಷ್ಟೇ ಸಿಗಬೇಕಿದೆ. ಭಾರತವೀಗ ಪದಕ ಪಟ್ಟಿಯಲ್ಲಿ 28 ಪದಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಈಗಾಗಲೇ ಶೂಟಿಂಗ್ ಮತ್ತು ಟೆನಿಸ್ ನಂತ ಸ್ಪರ್ಧೆಗಳು ಮುಕ್ತಾಯಗೊಂಡಿದೆ. ಶೂಟಿಂಗ್ ಮುಗಿಸಿರುವವರು ಚಾಂಗ್ವಾನ್ ನಲ್ಲಿ ನಡೆಯಲಿರುವ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ಗಾಗಿ ತೆರಳುವುದರಲ್ಲಿದ್ದಾರೆ. ಟೆನಿಸ್ ನಲ್ಲಿ ಚಿನ್ನ ಗೆದ್ದ ಬೋಪಣ್ಣ-ಶರಣ್ ಕೂಡ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಯೂಎಸ್ ಓಪನ್ ನತ್ತ ಹೊರಡಲಿದ್ದಾರೆ. ಆದರೆ ಏಷ್ಯನ್ ಗೇಮ್ಸ್ ಗಾಗಿ ಇವರಿಗೆ ಸಿಗಬೇಕಿದ್ದ ದೈನಂದಿನ ಭತ್ಯೆ ಇನ್ನೂ ಸಿಕ್ಕಿಲ್ಲ.

ಏಷ್ಯನ್ ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಫಾರೆಕ್ಸ್ ಕಾರ್ಡ್ ನೀಡಲಾಗಿದೆ. ಆದರೆ ಕ್ರೀಡಾಪಟುಗಳ (ದೈನಂದಿನ) ಖರ್ಚಿಗೆ ನೀಡಬೇಕಿದ್ದ ಹಣವನ್ನು ಇನ್ನೂ ಕಾರ್ಡಿಗೆ ತುಂಬಲಾಗಿಲ್ಲ. ಈ ಬಗ್ಗೆ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಅಧಿಕಾರಿಗಳಲ್ಲಿ ಮಾತನಾಡಿದರೆ, ಶೀಘ್ರ ಕಾರ್ಡಿಗೆ ಹಣ ತುಂಬಲಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಐಒಎ ಉಪ ಮುಖ್ಯಾಧಿಕಾರಿ ಬಿಎಸ್ ಕುಶ್ವಾಹ ಪ್ರತಿಕ್ರಿಯಿಸಿ, 'ಕ್ರೀಡಾಪಡುಗಳಿಗೆ ನೀಡಿರುವ ಕಾರ್ಡ್ ಗಳನ್ನು ದೆಹಲಿಯಲ್ಲೇ ಸಕ್ರಿಯಗೊಳಿಸಲಾಗಿದೆ. ಆದರೆ ಕಾರ್ಡಿಗೆ ಕಾರಣಾಂತರ ಹಣ ತುಂಬಲಾಗಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರ ಹಣ ತುಂಬುವಂತೆ ತಿಳಿಸಿದ್ದೇನೆ' ಎಂದಿದ್ದಾರೆ.

'ಕ್ರೀಡಾಪಟುಗಳ ದೈನಂದಿನ ಖರ್ಚಿಗೆ ಹಣ ನೀಡುವುದಿದ್ದರೆ ಕ್ರೀಡಾಕೂಟ ಆರಂಭವಾಗುವಾಗಲೇ ಇವರು ಯಾಕೆ ಹಣ ತುಂಬುವ ಕೆಲಸವನ್ನು ಮಾಡಿಲ್ಲ? ಟೆನಿಸ್ ನ ಹೆಚ್ಚಿನ ಆಟಗಾರರ ಕ್ರೀಡಾಕೂಟ ಮುಗಿಸಿ ತೆರಳಿದ್ದಾಗಿದೆ. ಈಗ ಹಣ ತುಂಬಿ ಏನುಲಾಭ?' ಎಂದು ಭಾರತೀಯ ಕ್ರೀಡಾಪಟುವೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Story first published: Saturday, August 25, 2018, 18:19 [IST]
Other articles published on Aug 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X