ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಒಂದೆರಡು ವಾರ ವಿಳಂಬ ಸಾಧ್ಯತೆ

Australian Open 2021 likely to be delayed by week or two due to coronavirus crisis

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಒಂದು ಅಥವಾ ಎರಡು ವಾರ ವಿಳಂಭವಾಗಿ ಆರಂಭವಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್‌ ಕಾರಣದಿಂದಾಗಿ ಟೂರ್ನಮೆಂಟ್ ವಿಳಂಬವಾಗಲಿದೆ ಎಂದು ವಿಕ್ಟೋರಿಯಾದ ಕ್ರೀಡಾ ಸಚಿವ ಮಾರ್ಟಿನ್ ಪಕುಲಾ ತಿಳಿಸಿದ್ದಾರೆ. ನಿಗದಿಯಂತೆ ಜನವರಿ 18ರಿಂದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಆರಂಭವಾಗಬೇಕಿತ್ತು.

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕ್ಯಾಲೆಂಡರ್ ವರ್ಷದ ಮೊದಲ ಟೆನ್ನಿಸ್ ಗ್ರ್ಯಾಂಡ್ ಸ್ಲ್ಯಾಮ್. ಈ ಬಾರಿ ಜನವರಿ 18 ರಿಂದ ಆರಂಭವಾಗಿ 31ರಂದು ಫೈನಲ್ ಪಂದ್ಯ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಇದು ವಿಳಂಬಕ್ಕೆ ಕಾರಣವಾಗಿದೆ.

ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟನೆಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟನೆ

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್‌ ಆರಂಭಕ್ಕಾಗಿ ಹಲವು ದಿನಾಂಕಗಳು ನಮ್ಮ ಮುಂದಿದೆ. ಒಂದೆರಡು ವಾರಗಳ ವಿಳಂಬಕ್ಕೆ ಸಲಹೆಗಳನ್ನು ನೀಡಿ ಕೆಲ ವರದಿಗಳನ್ನು ಗಮನಿಸಿದ್ದೇನೆ. ಅದು ನಡೆಯುವ ಸಂಭವ ಹೆಚ್ಚಿದೆ. ಆದರೆ ಅದು ಮಾತ್ರವೇ ನಮ್ಮ ಮುಂದಿರುವ ಆಯ್ಕೆಯಲ್ಲ. ಫ್ರೆಂಚ್ ಓಪನ್ ತಿಂಗಳುಗಳ ಕಾಲ ತಡಚಾಗಿ ಆರಂಭವಾಯಿತು. ವಿಂಬಲ್ಡನ್ ನಡೆಯಲೇ ಇಲ್ಲ" ಎಂದು ಮಾರ್ಟಿನ್ ಪಕುಲಾ ಹೇಳಿಕೆ ನೀಡಿದ್ದಾರೆ.

ತುಂಬಾ ತಡವಾಗುವ ಬದಲು ಕಡಿಮೆ ವಿಳಂಬವಾಗುವತ್ತ ನಾವು ಗಮನ ನೀಡುತ್ತಿದ್ದೇವೆ. ನಾನು ಅನಗತ್ಯವಾಗಿ ಪುನರಾವರ್ತಿಸಲು ಬಯಸುವುದಿಲ್ಲ. ಆದರೆ ಈ ಬಗ್ಗೆ ಸಂಕೀರ್ಣವಾದ ಮಾತುಕತೆಗಳು ನಡೆದಿದೆ. ಕ್ವಾರಂಟೈನ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಆರೋಗ್ಯ ಇಲಾಖೆ ಕಡೆಯಿಂದ ಒಪ್ಪಿಗೆಗಳು ದೊರೆಯಬೇಕು. ಆ ನಿಬಂಧನೆಗಳನ್ನು ಒಪ್ಪಿಕೊಳ್ಳುವುದು ಹಾಗೂ ತಿರಸ್ಕರಿಸುವುದು ಎಟಿಪಿ ಹಾಗೂ ಡಬ್ಲ್ಯುಟಿಎಗೆ ಸಂಬಂಧಿಸಿದ ವಿಚಾರವಾಗಿರಲಿದೆ ಎಮದು ಮಾರ್ಟಿನ್ ಹೇಳಿದ್ದಾರೆ.

ಸಹಸ್ರ ಗೆಲುವಿನ ಸರದಾರ ಎನಿಸಿದ ರಫೆಲ್ ನಡಾಲ್: 4ನೇ ಆಟಗಾರನಾಗಿ ಎಲೈಟ್ ಲಿಸ್ಟ್‌ಗೆ ಸೇರ್ಪಡೆಸಹಸ್ರ ಗೆಲುವಿನ ಸರದಾರ ಎನಿಸಿದ ರಫೆಲ್ ನಡಾಲ್: 4ನೇ ಆಟಗಾರನಾಗಿ ಎಲೈಟ್ ಲಿಸ್ಟ್‌ಗೆ ಸೇರ್ಪಡೆ

ಆಟಗಾರರು ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ಮತ್ತು ಅವರು ಬಂದಾಗ ಅವರು ಅತ್ಯಂತ ಕಠಿಣವಾದ ಪರೀಕ್ಷಾ ನಿಯಮವು ಅನ್ವಯಿಸುತ್ತದೆ ಎಂಬುದನ್ನು ಕೂಡ ವಿಕ್ಟೋರಿಯಾ ಕ್ರೀಡಾ ಸಚಿವ ಮಾರ್ವಟಿನ್ ಪಕುಲಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Story first published: Wednesday, November 25, 2020, 15:02 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X