ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್: ಸ್ಪರ್ಧೆಯಿಂದ ಹೊರಬಿದ್ದ ಹ್ಯಾಲೆಪ್, ಸಬಲೆಂಕಾ: ಕ್ವಾ. ಫೈನಲ್‌ಗೆ ಮಡ್ವಡೇವ್

Australian Open 2022: Halep, Sabalenka Knocked out, Medvedev enter R16, day 8 Highlights

ಆಸ್ಟ್ರೇಲಿಯನ್ ಓಪನ್‌ನ 8ನೇ ದಿನವೂ ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನರ ದೊರೆತಿದೆ. ಇಂದಿನ ಪಂದ್ಯದಲ್ಲಿ ಮಾಜಿ ನಂ.1 ಆಟಗಾರ್ತಿ ಸಿಮೋನಾ ಹ್ಯಾಲೆಪ್ ಮತ್ತು ಅರೀನಾ ಸಬಲೆಂಕಾ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ.

ಪುರುಷರ ವಿಭಾಗದಲ್ಲಿ ವಿಶ್ವದ ನಂ.2 ಡೇನಿಯಲ್ ಮೆಡ್ವೆಡೆವ್ ಮತ್ತು ಮೂರನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ 19ನೇ ಶ್ರೇಯಾಂಕದ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರನ್ನು 3 ಕಠಿಣ ಸೆಟ್‌ಗಳಲ್ಲಿ ಸೋಲಿಸಿ ಡೇನಿಯಲ್ ಕಾಲಿನ್ಸ್ ಕೂಡ ಅಂತಿಮ 8 ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ದ್ರಾವಿಡ್ ಕೇವಲ ಬಿಲ್ಡಪ್ ಕೋಚ್ ಎನಿಸಿಕೊಳ್ಳಬಾರದೆಂದರೆ ಈ ಕೆಲಸ ಮಾಡಲಿ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!ದ್ರಾವಿಡ್ ಕೇವಲ ಬಿಲ್ಡಪ್ ಕೋಚ್ ಎನಿಸಿಕೊಳ್ಳಬಾರದೆಂದರೆ ಈ ಕೆಲಸ ಮಾಡಲಿ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಅರೀನಾ ಸಬಲೆಂಕಾ ಆಘಾತಕಾರಿ ನಿರ್ಗಮನ: ಸೋಮವಾರ ನಡೆದ ಆಸ್ಟ್ರೇಲಿಯನ್ ಓಪನ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.2 ಅರಿನಾ ಸಬಲೆಂಕಾ ಅವರು ಎಸ್ಟೋನಿಯಾದ ಕೈಯಾ ಕನೋಪಿ ವಿರುದ್ಧ ಸೋಲು ಅನುಭವಿಸಿದ್ದಾರೆ ಆಘಾತಕಾರಿ ರೀತಿಯಲ್ಲಿ ಸೋತು ನಿರ್ಗಮಿಸಿದ್ದಾರೆ. ಆರಂಭಿಕ ಸೆಟ್ಟನ್ನು 7-5 ರಿಂದ ಗೆದ್ದ ಸಬಲೆಂಕಾ ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಮೂರನೇ ಸೆಟ್‌ನಲ್ಲಿಯೂ ಸಬಲೆಂಕಾ ಅವರನ್ನು ಕನೋಪಿ 7-6 (10) ರಿಂದ ಟೈ ಬ್ರೇಕರ್‌ನಲ್ಲಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಎರಡು ಗಂಟೆ 19 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಕೈಯಾ ಕನೋಪಿ 5-7, 6-2 ಮತ್ತು 7-6 (10) ಸೆಟ್‌ಗಳಿಂದ ಗೆದ್ದು ಬೀಗಿದರು.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಸಿಮೋನಾ ಹ್ಯಾಲೆಪ್ ಪತನ: ವಿಶ್ವದ ನಂ.15 ಆಟಗಾರ್ತಿ ಸಿಮೋನಾ ಹ್ಯಾಲೆಪ್ ಆಸ್ಟ್ರೇಲಿಯನ್ ಓಪನ್ ನಿಂದ ಹೊರ ಬಿದ್ದಿದ್ದಾರೆ. ಸೋಮವಾರ ನಡೆದ ಆಸ್ಟ್ರೇಲಿಯನ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಅವರು ಅಲೈಜ್ ಕಾರ್ನೆಟ್ ವಿರುದ್ಧ ಸೋಲು ಕಂಡಿದ್ದಾರೆ. ಆರಂಭಿಕ ಸೆಟ್‌ನಲ್ಲಿ ಸೋತ ನಂತರ ಹ್ಯಾಲೆಪ್ ತಿರುಗಿಬೀಳುವ ಪ್ರಯತ್ನ ನಡೆಸಿದರು. ಆದರೆ ಅಲೈಜ್ ಕಾರ್ನೆಟ್ ಸವಾಲಿನ ವಿರುದ್ಧ ಗೆಲುವಿನ ಹಾದಿಗೆ ಮರಳಲು ಸಾಧ್ಯವಾಗಲಿಲ್ಲ. 2 ಗಂಟೆ 33 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-4, 3-6 ಮತ್ತು 6-4 ರಿಂದ ವಿಶ್ವದ 61ನೇ ಶ್ರೇಯಾಂಕಿತೆ ಅಲೈಜ್ ಕಾರ್ನೆಟ್ ಪರವಾಗಿ ಅಂತ್ಯವಾಯಿತು. ಮಾಜಿ ವಿಶ್ವ ನಂ.1 ಆಟಗಾರ್ತಿ ಗಾಯದ ಕಾರಣದಿಂದ ಹಿಂದಿನ ಋತುವಿನ ಬಹುಪಾಲು ತಪ್ಪಿಸಿಕೊಂಡಿದ್ದರು.

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

ಯುಎಸ್ ಓಪನ್ ಸೆನ್ಸೇಷನ್ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ಮೆಲ್ಬೋರ್ನ್‌ನಲ್ಲಿಯೂ ತಮ್ಮ ಅಮೋಘ ಆಟವನ್ನು ಮುಮದಿವರಿಸಿದ್ದಾರೆ. ಸೋಮವಾರ 21ರ ಹರೆಯದ ಕೆನಡಾ ಮೂಲದ ಈ ಆಟಗಾರ ಮರಿನ್ ಸಿಲಿಕ್ ವಿರುದ್ಧ ಆರಂಭಿಕ ಸೆಟ್‌ನಲ್ಲಿ ಹಿನ್ನೆಡೆ ಅನುಭವಿಸಿದರೂ ಎದುರಾಳಿಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾದರು. 2-6, 7-6, 6-2 & 7-6 ರಲ್ಲಿ ಪಂದ್ಯವನ್ನು ಗೆದ್ದು ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ. 3 ಗಂಟೆ 35 ನಿಮಿಷಗಳ ಕಾಲ ನಡೆದ ಈ ಪೈಪೋಟಿಯ ಕಾದಾಟದಲ್ಲಿ ಅಲಿಯಾಸ್ಸಿಮ್ 2 ಮತ್ತು 4 ನೇ ಸೆಟ್ ಟೈ ಬ್ರೇಕರ್‌ನಲ್ಲಿ ಮರಿನ್ ಸಿಲಿಕ್ ಅವರನ್ನು ಸೋಲಿಸಲು ಭಾರೀ ಪೈಪೋಟಿಯನ್ನು ಎದುರಿಸಿದರು.

Story first published: Monday, January 24, 2022, 22:13 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X