ಆಸ್ಟ್ರೇಲಿಯನ್ ಓಪನ್: ಸೋತು ಸ್ಪರ್ಧೆಯಿಂದ ಹೊರಬಿದ್ದ ನವೋಮಿ ಒಸಾಕ: 5ನೇ ದಿನದ ಹೈಲೈಟ್ಸ್

ಟೆನಿಸ್‌ನ ಸ್ಟಾರ್ ಆಟಗಾರ್ತಿ ಆಸ್ಟ್ರೇಲಿಯನ್ ಓಪನ್‌ನ ಹಾಲಿ ಚಾಂಪಿಯನ್ ನವೋಮಿ ಒಸಾಕಾ ಆಸ್ಟ್ರೇಲಿಯನ್ ಓಪನ್‌ನಿಂದ ಸೋಲು ಕಂಡು ಹೊರಬಿದ್ದಿದ್ದಾರೆ. ವಿಶ್ವದ 60ನೇ ಶ್ರೇಯಾಂಕಿತ ಆಟಗಾರ್ತಿ ಅಮಂಡಾ ಅನಿಮಿಸೋವಾ ವಿರುದ್ಧ ಸೋಲು ಅನುಭವಿಸಿದ್ದಾರೆ. ಈ ಮಧ್ಯೆ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಆಶ್ ಬಾರ್ಟಿ 16ರ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಸ್ಪರ್ಧೆಯಿಂದ ಒಸಾಕ ಔಟ್: ಹಾಲಿ ಚಾಂಪಿಯನ್ ನವೋಮಿ ಒಸಾಕಾ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಬಿದ್ದಿದ್ದಾರೆ.. ಅವರು ಆಸ್ಟ್ರೇಲಿಯನ್ ಓಪನ್ 2022ರ 3ನೇ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವದ 60ನೇ ಶ್ರೇಯಾಂಕಿತೆ ಅಮಂಡಾ ಅನಿಸಿಮೊವಾ ವಿರುದ್ಧ ಆಘಾತ ಅನುಭವಿಸಿದ್ದಾರೆ. ಯುಎಸ್‌ಎಯ ಅಮಂಡಾ ರೋಚಕ ಸೆಣೆಸಾಟದಲ್ಲಿ ಟೈಬ್ರೇಕರ್‌ಅನ್ನು 7-6(10) ರಿಂದ ಗೆದ್ದುಕೊಂಡಿರು. ಒಸಾಕಾ ಆರಂಭಿಕ ಸೆಟ್ ಅನ್ನು 6-4 ರಿಂದ ಗೆದ್ದರು ಆದರೆ ಎರಡನೇ ಸೆಟ್ಟನ್ನು ಕಳೆದುಕೊರು. ಈ ರೋಚಕ ಸೆಣೆಸಾಟ 2 ಗಂಟೆ ಮತ್ತು 15 ನಿಮಿಷಗಳವರೆಗೆ ನಡೆಯಿತು.

ಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ಅಂತಿಮ 16ರ ಘಟ್ಟಕ್ಕೆ ಅಲೆಕ್ಸಾಂಡರ್ ಜ್ವೆರೆವ್: ವಿಶ್ವದ ನಂ.3 ಅಲೆಕ್ಸಾಂಡರ್ ಜ್ವೆರೆವ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್‌ಗಾಗಿ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಜ್ವೆರೆವ್ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಶುಕ್ರವಾರ ಅವರು ಕ್ವಾಲಿಫೈಯರ್ ರಾಡು ಅಲ್ಬೋಟ್ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿ 16ರ ಸುತ್ತಿಗೆ ತೇರ್ಗಡೆಯಾದರು. ಜಾನ್ ಕೇನ್ ಅರೆನಾದಲ್ಲಿ ಒಂದು ಗಂಟೆ ಮತ್ತು 57 ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ 6-3, 6-4, 6-4 ಅಂತರದಿಂದ ಜಯ ಸಾಧಿಸಿದ್ದಾರೆ.

ಮತ್ತೋರ್ವ ಸ್ಟಾರ್ ಆಟಗಾರ್ತಿ ಆಶ್ಲೀಗ್ ಬಾರ್ಟಿ 61 ನಿಮಿಷಗಳಲ್ಲಿ ಕ್ಯಾಮಿಲಿಯೊ ಗಿಯೊರ್ಗಿ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ನಂ.1 ರಾಡ್ ಲೇವರ್ ಅರೆನಾದಲ್ಲಿ ತನ್ನ ಎದುರಾಳಿಯನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಮಾಜಿ ವಿಶ್ವದ ನಂ.1 ಟೆನಿಸ್ ಆಟಗಾರ ಆ್ಯಂಡಿ ಮರ್ರೆ ಮತ್ತು ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕೇನು ನಾಲ್ಕನೇ ದಿನದಾಟದಲ್ಲಿಯೇ ಸೋಲಿ ಕಂಡು ಸ್ಪರ್ಧೆಯಿಂದ ಹೊರಬಿದ್ದಿದ್ದರು.

ವಿಶ್ವದ ಮಾಜಿ ನಂ.1 ಟೆನಿಸಿಗ ಆ್ಯಂಡಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಕನಸು ಗುರುವಾರ ಅಂತ್ಯವಾಯಿತು. ಎರಡನೇ ಸುತ್ತಿನಲ್ಲಿ ಕ್ವಾಲಿಫೈಯರ್ ತಾರೊ ಡೇನಿಯಲ್ ವಿರುದ್ಧ ಭಾರೀ ಅಂತರದ ಸೋಲು ಅನುಭವಿಸಿದರು. ಈ ಪಂದ್ಯದಲ್ಲಿ ಆಂಡಿ ಮರ್ರೆ 6-4, 6-4 ಮತ್ತು 6-4 ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು. ಈ ಸೆಣೆಸಾಟ ಜಾನ್ ಕೇನ್ ಅರೆನಾದಲ್ಲಿ 2 ಗಂಟೆ 48 ನಿಮಿಷಗಳ ಕಾಲ ನಡೆಯಿತು. ಮೊದಲ ಸುತ್ತಿನಲ್ಲಿ ಮರ್ರೆ ನಿಕೊಲೊಜ್ ಬಸಿಲಾಶ್ವಿಲಿ ಅವರನ್ನು 6-1, 3-6, 6-4, 6-7 (5), 6-4 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ತಲುಪಿದ್ದರು.

ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!

ವಿಶ್ವದ 18ನೇ ಶ್ರೇಯಾಂಕಿತ ಆಟಗಾರ್ತಿ ಮತ್ತು ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕೇನು ಆಸ್ಟ್ರೇಲಿಯನ್ ಓಪನ್‌ನಿಂದ ಗುರುವಾರವೇ ಹೊರಬಿದ್ದಿದ್ದಾರೆ. ಎರಡನೇ ಸುತ್ತಿನಲ್ಲಿ ರಾಡುಕೇನು 98ನೇ ಶ್ರೇಯಾಂಕದ ಮಾಂಟೆನೆಗ್ರೊದ ಡಂಕಾ ಕೊವಿನಿಕ್ ವಿರುದ್ಧ ಸೋಲು ಕಂಡಿದ್ದಾರೆ. 19 ವರ್ಷದ ರಾಡುಕೇನು ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಹೊರತಾಗಿಯೂ ಪಂದ್ಯದಲ್ಲಿ ಎದುರಾಳಿಯನ್ನು ಮೀರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 6-4, 4-6 ಮತ್ತು 6-3 ಅಂತರದಿಂದ ಕೋವಿನಿಕ್ ಗೆಲುವು ಸಾಧಿಸಿರು

For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 18:32 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X