ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್ 2022: ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡ ರಾಫೆಲ್ ನಡಾಲ್

Australian Open 2022: Rafeal Nadal enter finals eye on record-breaking 21st Grand Slam

ವಿಶ್ವ ಟೆನ್ನಿಸ್‌ನ ಸ್ಟಾರ್ ಆಟಗಾರ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ 2022ರ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಸ್ಪೇನ್‌ನ ಈ ಆಟಗಾರ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿಸಿದ್ದಾರೆ. ಈ ಗೆಲುವು ರಾಫೆಲ್ ನಡಾಲ್ ಅವರ ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್‌ ಕನಸು ಜೀವಂತವಾಗಿರಿಸಿದೆ. 35ರ ಹರೆಯದ ರಾಫೆಲ್ ನಡಾಲ್ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಅಂತರದಿಂದ ಮಣಿಸಿದ್ದಾರೆ. ಈ ಸೆಮಿಫೈನಲ್ ಸೆಣೆಸಾಟ 2 ಗಂಟೆ 56 ನಿಮಿಷಗಳಲ್ಲಿ ಕಾಲ ನಡೆಯಿತು.

ಭಾನುವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಫೈನಲ್‌ ಮುಖಾಮುಖಿ ನಡೆಯಲಿದೆ. ಈ ಅಂತಿಮ ಸೆಣೆಸಾಟದಲ್ಲಿ ರಾಫೆಲ್ ನಡಾಲ್ ವಿಶ್ವ ದಾಖಲೆಯ ಟ್ರೋಫಿಗಾಗಿ 2ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮತ್ತು 4ನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ನಡುವಿನ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಎದುರಿಸಲಿದ್ದಾರೆ.

ಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿ

ರಾಫೆಲ್ ನಡಾಲ್ ಸದ್ಯ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರೊಂದಿಗೆ 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದು ಸಮನಾಗಿದ್ದಾರೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಳಿದ ಫೆಡರರ್ ಹಾಗೂ ಜೊಕೊವಿಕ್ ಭಾಗವಾಗದ ಕಾರಣ ನಡಾಲ್ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಮೊದಲ ಆಟಗಾರನೆನಿಸುವ ಅವಕಾಶವನ್ನು ಹೊಂದಿದ್ದಾರೆ.

ಇನ್ನು ಈ ಮಹತ್ವದ ದಾಖಲೆಯ ಜೊತೆಗೆ ಮತ್ತೊಂದು ಪ್ರಮುಖ ಸಾಧನೆ ಮಾಡುವ ಅವಕಾಶವೂ ರಾಫೆಲ್ ನಡಾಲ್‌ಗೆ ಇದೆ. ಜೊಕೊವಿಕ್, ರಾಯ್ ಎಮರ್ಸನ್ ಮತ್ತು ರಾಡ್ ಲೇವರ್ ನಂತರ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಎನಿಸುವ ಅವಕಾಶವೂ ನಡಾಲ್‌ಗೆ ಇದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ನಡಾಲ್ 2009ರಲ್ಲಿ ಕೊನೇಯ ಬಾರಿ ಗೆದ್ದಿದ್ದರು.

ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!

ಈ ಸೆಮಿಫೈನಲ್ ಗೆಲುವಿನ ಬಳಿಕ ರಾಫೆಲ್ ನಡಾಲ್ ಭಾವುರಾಗಿದ್ದು ಕಂಡು ಬಂತು. ಪಂದ್ಯ ಮುಕ್ತಾಯವಾಗಿ ಸಂಭ್ರಮಿಸಿದ ಬಳಿಕ ತಮ್ಮ ಕಿಟ್ ಬ್ಯಾಗ್ ಬಳಿ ಬಂದ ರಾಫೆಲ್ ನಡಾಲ್ ಕಿಟ್ ಬ್ಯಾಗ್‌ಗೆ ಮುಖವನ್ನು ಒತ್ತು ತಮ್ಮ ಸಂತಸದ ಕಣ್ಣೀರನ್ನು ಮರೆಮಾಚುವ ಪ್ರಯತ್ನ ಮಾಡಿದರು.

ಈ ಗೆಲುವಿನ ಬಳಿಕ ಮಾತನಾಡಿದ ರಾಫೆಲ್ ನಡಾಲ್ "ನಾನು 2009 ರಲ್ಲಿ ಒಮ್ಮೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಅದೃಷ್ಟವನ್ನು ಹೊಂದಿದ್ದೆ. ಆದರೆ 2022ರಲ್ಲಿ ನಾನು ಮತ್ತೊಂದು ಅವಕಾಶ ನನಗಾಗಿ ಬರಬಹುದೆಂದು ಯೋಚಿಸಿರಲಿಲ್ಲ. ಇಂದಿನ ಈ ಗೆಲುವನ್ನು ಆನಂದಿಸುತ್ತೇನೆ ಹಾಗೂ ನಂತರ ನನ್ನ ಕೈಲಾದ ಪ್ರಯತ್ನವನ್ನು ನಡೆಸಲಿದ್ದೇನೆ" ಎಂದು ರಾಫೆಲ್ ನಡಾಲ್ ಪ್ರತಿಕ್ರಿಯಿಸಿದ್ದಾರೆ.

Story first published: Friday, January 28, 2022, 22:56 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X