ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನವೋಮಿ ಒಸಾಕಾ ಮುಡಿಗೆ ಎರಡನೇ ಆಸ್ಟ್ರೇಲಿಯಾ ಓಪನ್ ಕಿರೀಟ

Australian Open: Naomi Osaka beats Jennifer Brady to win second title

ಮೆಲ್ಬರ್ನ್: ಜಪಾನ್‌ನ ಬಲಿಷ್ಠ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ (ಫೆಬ್ರವರಿ 20) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಜೆನಿಫರ್ ಬ್ರಾಡಿ ಅವರನ್ನು ಸೋಲಿಸಿ ಒಸಾಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅಚ್ಚರಿ ಮೂಡಿಸಿದ ಐದು ಸಂಗತಿಗಳುಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅಚ್ಚರಿ ಮೂಡಿಸಿದ ಐದು ಸಂಗತಿಗಳು

ಫೈನಲ್‌ ಪಂದ್ಯದಲ್ಲಿ ನವೋಮಿ ಒಸಾಕಾ, ಜೆನಿಫರ್ ಬ್ರಾಡಿ ಅವರನ್ನು 6-4, 6-3ರ ನೇರ ಸೆಟ್‌ನಿಂದ ಮಣಿಸಿದ್ದಾರೆ. 22ರ ಶ್ರೇಯಾಂಕಿತೆ ಬ್ರಾಡಿ ಅವರ ವಿರುದ್ಧ ಸುಲಭವಾಗಿ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಕಂಡುಬಂತು. ಮೆಲ್ಬರ್ನ್‌ನ ರೋಡ್ ಲ್ಯಾವರ್ ಅರೇನಾ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆದಿತ್ತು.

'ಈ ಗೆಲುವು ನನಗೆ ನಿಜಕ್ಕೂ ಅದ್ಭುತ ಖುಷಿ ನೀಡುತ್ತಿದೆ. ಹಿಂದಿನ ಗ್ರ್ಯಾಂಡ್‌ಸ್ಲ್ಯಾಮ್‌ ಪಂದ್ಯದಲ್ಲಿ ನನಗೆ ಅಭಿಮಾನಿಗಳ ಎದುರು ಆಡಲಾಗಿರಲಿಲ್ಲ. ಈ ಬಾರಿ ಫ್ಯಾನ್ಸ್ ಮುಂದೆ ಆಡಿದ್ದು ನನಗೆ ಇನ್ನಷ್ಟು ಶಕ್ತಿ ನೀಡಿತ್ತು,' ಎಂದು ಪಂದ್ಯದ ಬಳಿಕ ಒಸಾಕಾ ಹೇಳಿದ್ದಾರೆ.

ಐಪಿಎಲ್ ಹರಾಜಿನಿಂದ ಸಂತಸಗೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ ವಿರಾಟ್ ಕೊಹ್ಲಿಐಪಿಎಲ್ ಹರಾಜಿನಿಂದ ಸಂತಸಗೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ ವಿರಾಟ್ ಕೊಹ್ಲಿ

ವಿಶ್ವ ನಂ.3ನೇ ಶ್ರೇಯಾಂಕಿತೆ ಒಸಾಕಾ 2019ರಲ್ಲೂ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದಿದ್ದರು. ಆದರೆ 2020ರಲ್ಲಿ ಒಸಾಕಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಿರಲಿಲ್ಲ. 23ರ ಹರೆಯದ ಒಸಾಕಾ ಇಲ್ಲಿಗೆ ಒಟ್ಟಿಗೆ 4 ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಂತಾಗಿದೆ.

Story first published: Saturday, February 20, 2021, 19:01 [IST]
Other articles published on Feb 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X