21ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವುದಕ್ಕಿಂತ ನನಗೆ ಇದೇ ಮುಖ್ಯ: ರಾಫೆಲ್ ನಡಾಲ್

ಆಸ್ಟ್ರೇಲಿಯನ್ ಓಪನ್ ಅಂತಿಮ ಹಂತವನ್ನು ತಲುಪಿದ್ದು ಟೆನಿಸ್ ಪ್ರಿಯರ ಕುತೂಹಲ ಹೆಚ್ಚಿಸಿದೆ. ಅದರಲ್ಲೂ 20 ಗ್ರ್ಯಾಂಡ್‌ಸ್ಲ್ಯಾಮ್‌ಗಳ ಸರದಾರ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ತಲುಪಿದ್ದು ಐತಿಹಾಸಿಕ 21ನೇ ಗ್ರ್ಯಾಂಡ್‌ ಸ್ಲ್ಯಾಮ್ ಗೆಲ್ಲುವ ಸನಿಹದಲ್ಲಿದ್ದಾರೆ. ಭಾನುವಾರ ನಡೆಯುವ ಈ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್‌ಗೆ ಗೆಲುವು ಸಾಧ್ಯವಾದರೆ ಟೆನಿಸ್ ಇತಿಹಾಸದಲ್ಲಿ ಪುರುಷರ ವಿಭಾಗದಲ್ಲಿ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದು ಮೊದಲ ಟೆನಿಸಿಗ ಎನಿಸಿಕೊಳ್ಳಲಿದ್ದಾರೆ ಸ್ಪೈನ್‌ನ ಈ ಆಟಗಾರ. ಹೀಗಾಗಿ ಫೈನಲ್ ಪಂದ್ಯದ ಕುತೂಹಲ ಹೆಚ್ಚಾಗಿದೆ.

ಆದರೆ ಸ್ವತಃ ರಾಫೆಲ್ ನಡಾಲ್ ಈ ವಿಚಾರವಾಗಿ ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಮಿಫೈನಲ್ ಗೆದ್ದ ಬಳಿಕ ಮಾತನಾಡಿದ ನಡಾಲ್ ತಾನು 21ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವ ಬಗ್ಗೆ ಹೆಚ್ಚಾಗಿ ಯೋಚಿಸುವುದಿಲ್ಲ. ಸತತವಾಗಿ ಟೆನಿಸ್ ಆಡುವುದನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಡಾಲ್ ತಮ್ಮ ವೃತ್ತಿ ಜೀವನದಲ್ಲಿ 6ನೇ ಬಾರಿ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡರು.

ಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿ

"ನಾನು ಯಾವಾಗಲೂ ನನ್ನ ಅತ್ಯುತ್ತಮ ಆಟವನ್ನು ಆಡಲು ಬಯಸುತ್ತೇನೆ. ಖಂಡಿತವಾಗಿಯೂ ಈಗ ನನ್ನ ಗುರಿ ಗೆಲುವು ಸಾಧಿಸುವುದಾಗಿದೆ. ನಾನು ಮೊದಲೇ ಹೇಳಿದಂತೆ ನಾನು ಇಲ್ಲಿರುವುದು ಟೆನ್ನಿಸ್ ಆಡುವುದಕ್ಕೆ ಎಂಬುದು ಹೆಚ್ಚು ಪ್ರಸ್ತುತ. ನಾನು ವಿಷಯಗಳನ್ನು ವಿಭಿನ್ನವಾಗಿ ಯೋಚಿಸುತ್ತೇನೆ. ಖಂಡಿತವಾಗಿಯೂ ನಾನು ಯಾವಾಗಲೂ ಸ್ಪರ್ಧಾತ್ಮಕ ಯೋಜನೆಯಲ್ಲಿಯೇ ಇರುತ್ತೇನೆ. ಅದಕ್ಕೆ ವಿರುದ್ಧವಾಗಿ ಹೋಗಲು ನನ್ನಿಂದ ಸಾಧ್ಯವಿಲ್ಲ" ಎಂದು ರಾಫೆಲ್ ನಡಾಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

"ಅಂತಿಮವಾಗಿ ನನಗೆ 21ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವುದಕ್ಕಿಂತಲೂ ಟೆನ್ನಿಸ್ ಆಡುವುದೇ ಮುಖ್ಯವಾಗಿದೆ. ಯಾಕೆಂದರೆ ಅದು ನನಗೆ ಸಾಮಾನ್ಯ ಜೀವನದಲ್ಲಿ ಹೆಚ್ಚಿನ ಖುಷಿ ನೀಡುತ್ತದೆ. ನಾನು ಅತಿಯಾಗಿ ಇಷ್ಟಪಡುವುದನ್ನು ಮಾಡುವುದು ನಾನು ಮತ್ತೊಂದು ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ಗೆಲ್ಲುವುದಕ್ಕಿಂತ ಖುಷಿ ನೀಡುತ್ತದೆ. ಅಂತಿಮವಾಗಿ ನಮ್ಮ ಜೀವನವಿರುವುದು ಸಂತಸವಾಗಿರುವುದರಲ್ಲಿ. ನಾನು ಇಷ್ಟಪಡುವದನ್ನು ಮಾಡುವ ಅವಕಾಶವನ್ನು ಹೊಂದಿರುವುದು ನನಗೆ ಸಂತೋಷವನ್ನು ನೀಡುತ್ತದೆ" ಎಂದು ರಾಫೆಲ್ ನಡಾಲ್ ಹೇಳಿಕೊಂಡಿದ್ದಾರೆ.

ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ 2022ರ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ಸ್ಪೇನ್‌ನ ಈ ಆಟಗಾರ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿಸಿದ್ದಾರೆ. ಈ ಗೆಲುವು ರಾಫೆಲ್ ನಡಾಲ್ ಅವರ ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್‌ ಕನಸು ಜೀವಂತವಾಗಿರಿಸಿದೆ. 35ರ ಹರೆಯದ ರಾಫೆಲ್ ನಡಾಲ್ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಅಂತರದಿಂದ ಮಣಿಸಿದ್ದಾರೆ.

ರಾಫೆಲ್ ನಡಾಲ್ ಸದ್ಯ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರೊಂದಿಗೆ 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದು ಸಮನಾಗಿದ್ದಾರೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಳಿದ ಫೆಡರರ್ ಹಾಗೂ ಜೊಕೊವಿಕ್ ಭಾಗವಾಗದ ಕಾರಣ ನಡಾಲ್ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಮೊದಲ ಆಟಗಾರನೆನಿಸುವ ಅವಕಾಶವನ್ನು ಹೊಂದಿದ್ದಾರೆ.

ಇನ್ನು ಈ ಮಹತ್ವದ ದಾಖಲೆಯ ಜೊತೆಗೆ ಮತ್ತೊಂದು ಪ್ರಮುಖ ಸಾಧನೆ ಮಾಡುವ ಅವಕಾಶವೂ ರಾಫೆಲ್ ನಡಾಲ್‌ಗೆ ಇದೆ. ಜೊಕೊವಿಕ್, ರಾಯ್ ಎಮರ್ಸನ್ ಮತ್ತು ರಾಡ್ ಲೇವರ್ ನಂತರ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಎನಿಸುವ ಅವಕಾಶವೂ ನಡಾಲ್‌ಗೆ ಇದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ನಡಾಲ್ 2009ರಲ್ಲಿ ಕೊನೇಯ ಬಾರಿ ಗೆದ್ದಿದ್ದರು.

ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್‌ಗೆ ಡ್ಯಾನಿಲ್ ಮಡ್ವಡೇವ್ ಮುಖಾಮುಖಿಯಾಗಲಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ 7-6(5) 4-6 6-4 6-1 ಅಂತರದಲ್ಲಿ ಮಡ್ವಡೇವ್ ತನ್ನ ಎದುರಾಳಿ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಸೋಲಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, January 28, 2022, 22:07 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X