ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್: ಫೈನಲ್‌ಗೆ ಪ್ರವೇಶಿಸಿದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ

Australian Open: Sania Mirza and Rohan Bopanna won semi finals and enter Mixed Doubles final

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿ ಜೀವನವನ್ನು ಅತ್ಯಂತ ಸ್ಮರಣೀಯವಾಗಿ ಮುಕ್ತಾಯಗೊಳಿಸುವ ಅವಕಾಶ ಸೃಷ್ಟಿಸಿಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯನ್ ಓಪನ್ ತನ್ನ ವೃತ್ತಿ ಜೀವನದ ಅಂತಿಮ ಗ್ರ್ಯಾನ್‌ಸ್ಲ್ಯಾಮ್ ಎಂದು ಘೋಷಿಸಿರುವ ಸಾನಿಯಾ ರೋಹನ್ ಬೋಪಣ್ಣ ಜೊತೆಗೆ ಈ ಟೂರ್ನಿಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ ಇದೀಗ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ನೀಲ್ ಸ್ಕುಪ್ಸ್ಕಿ-ದೇಸಿರೇ ಕ್ರಾವ್ಜಿಕ್ ವಿರುದ್ಧ ನಡೆದ ಸೆಮಿಫೈನಲ್ ಸೆಣೆಸಾಟದಲ್ಲಿ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ 7-6, 6-7 (10-6) ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್

ಇದಕ್ಕೂ ಮುನ್ನ ಭಾರತದ ಜೋಡಿ ತಮ್ಮ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಲಾಟ್ವಿಯಾ ಮತ್ತು ಸ್ಪೇನ್‌ ಜೋಡಿಯಾದ ಜೆಲೆನಾ ಒಸ್ಟಾಪೆಂಕೊ ಮತ್ತು ಡೇವಿಡ್ ವೆಗಾ ಹೆರ್ನಾಂಡೆಜ್ ವಿರುದ್ಧ ಸೆಣೆಸಾಡಬೇಕಾಗಿತ್ತು. ಆದರೆ ಆ ಜೋಡಿ ವಾಕ್ ಓವರ್ ಪಡೆದ ಕಾರಣ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಉರುಗ್ವೆ ಮತ್ತು ಜಪಾನಿನ ಜೋಡಿಯಾದ ಏರಿಯಲ್ ಬೆಹರ್ ಮತ್ತು ಮಕಿಟೊ ನಿನೋಮಿಯಾ ಅವರನ್ನು 6-4, 7-6 (11-9) ಅಂತರದಿಂದ ಮಣಿಸಿದ್ದರು.

ತನ್ನ ಅಂತಿಮ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಸಾನಿಯಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡು ಬಾರಿ ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟಕ್ಕೆರಿದ್ದರು. ಅದಕ್ಕೂ ಮುನ್ನ 2009 ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದರು. ಇದೀಗ ಮೂರನೇ ಬಾರಿಗೆ ಈ ಸಾಧನೆ ಮಾಡುವ ಅವಕಾಶ ಸಾನಿಯಾ ಮುಂದಿದೆ.

IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್

ಸಾನಿಯಾ ಮಿರ್ಜಾ ತಮ್ಮ ವರ್ಣರಂಜಿತ ಟೆನಿಸ್ ವೃತ್ತಿಜೀವನದಲ್ಲಿ ಒಟ್ಟು ಆರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ನಿವೃತ್ತಿಯ ಘೋಷಣೆ ಮಾಡಿರುವ ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್ ತನ್ನ ಕೊನೆಯ ಗ್ರ್ಯಾನ್‌ಸ್ಲ್ಯಾಮ್ ಆಗಿರಲಿದೆ ಎಂದಿದ್ದರು. ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯಲಿರುವ WTA 1000 ಟೂರ್ನಿಯ ಮೂಲಕ ಟೆನಿಸ್ ವೃತ್ತಿಜೀವನದಕ್ಕೆ ವಿದಾಯ ಹೇಳಲಿದ್ದಾರೆ

ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ WTA 1000 ಪಂದ್ಯಾವಳಿಯ ನಂತರ ನಿವೃತ್ತಿಯಾಗುವ ಮೊದಲು ಆಸ್ಟ್ರೇಲಿಯನ್ ಓಪನ್ ತನ್ನ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯವಾಗಿದೆ ಎಂದು 36 ವರ್ಷದ ಈ ವರ್ಷದ ಆರಂಭದಲ್ಲಿ ದೃಢಪಡಿಸಿದರು.

Story first published: Wednesday, January 25, 2023, 16:45 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X