ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚೆನ್ನಾಗಿ ಆಡಿದ್ದೀ, ಅಳಬೇಡ: ಆಸ್ಟ್ರೇಲಿಯಾ ಓಪನ್ನಲ್ಲೊಂದು ಭಾವುಕ ಕ್ಷಣ!

Australian Open: Serena Williams comforts teenager after third-round victory

ಮೆಲ್ಬರ್ನ್, ಜನವರಿ 19: ಮಹತ್ತರ ಪಂದ್ಯದಲ್ಲೋ ಸ್ಪರ್ಧೆಯಲ್ಲೋ ಗೆಲ್ಲಬೇಕೆಂದು ಕನಸು ಕಂಡಿದ್ದ ನಾವು ಸೋತಾಗ ಆ ಸೋಲನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲಾಗೋಲ್ಲ. ಸೋತಾಗ ಕಾಡೋ ಮನಸ್ಸಿನ ಭಾರ ಹೇಗಿರುತ್ತದೆ ಎಂಬುದು ಕ್ರೀಡಾಪಟುಗಳಿಗಂತೂ ಸ್ಪಷ್ಟವಾಗಿ ಅರಿವಿದ್ದೇ ಇರುತ್ತದೆ. ಇಂಥದ್ದೇ ಸೋಲಿನ ಭಾವುಕ ಕ್ಷಣ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮನಸ್ಸಿಗೆ ತಾಕಿದೆ.

ಭಾರತ vs ಆಸ್ಟ್ರೇಲಿಯಾ: 32 ವರ್ಷಗಳ ಹಿಂದಿನ ದಾಖಲೆ ಮುರಿದ ಧೋನಿ!ಭಾರತ vs ಆಸ್ಟ್ರೇಲಿಯಾ: 32 ವರ್ಷಗಳ ಹಿಂದಿನ ದಾಖಲೆ ಮುರಿದ ಧೋನಿ!

ಆಸ್ಟ್ರೇಲಿಯಾದ ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಟೆನಿಸ್ ಟೂರ್ನಿಯ ಶನಿವಾರದ (ಜ.19) ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯಕ್ಕಾಗಿ ಏಳು ಬಾರಿಯ ಚಾಂಪಿಯನ್, ಅಮೆರಿಕಾದ ಸೆರೆನಾ ವಿಲಿಯಮ್ಸ್ ಮತ್ತು ಉಕ್ರೇನಿನ ಯುವ ಆಟಗಾರ್ತಿ ದಯಾನ ಯಸ್ಟ್ರೆಮ್ಸ್ಕ ಮುಖಾಮುಖಿಯಾಗಿದ್ದರು.

ಆಸೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಏಕದಿನ ಸರಣಿಯೂ ವಶಕ್ಕೆಆಸೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಏಕದಿನ ಸರಣಿಯೂ ವಶಕ್ಕೆ

ಒಟ್ಟು 23 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿ 24ನೇ ದಾಖಲೆಯ ಗ್ರ್ಯಾಂಡ್‌ಸ್ಲ್ಯಾಮ್‌ನತ್ತ ದಾಪುಗಾಲು ಹಾಕುತ್ತಿರುವ ಅಮೆರಿಕಾ ಬಲಾಡ್ಯೆ, 37ರ ಹರೆಯದ ಅನುಭವಿ ಆಟಗಾರ್ತಿ ಸೆರೆನಾಗೆ 18ರ ಯುವತಿ ದಯಾನಾ ಸವಾಲಿನ ಆಟಗಾರ್ತಿ ಅನ್ನಿಸಲಿಲ್ಲ. ಹೀಗಾಗಿ 6-2, 6-1ರ ನೇರ ಸೆಟ್‌ನಿಂದ ಸೆರೆನಾ ಪಂದ್ಯ ಜಯಿಸಿಕೊಂಡರು.

ಬಲಿಷ್ಠ ವಿಲಿಯಮ್ಸ್ ಪಂದ್ಯವನ್ನೇನೋ ಗೆದ್ದುಕೊಂಡ್ರು. ಆದರೆ ಎದುರಾಳಿಯ ಕನಸು ಮುರಿದು ಬಿತ್ತಲ್ಲಾ? ಆಕೆ ಭಾವುಕಳಾದಳು. ಕಣ್ಣಂಚನ್ನು ಕರಗಿಸಿಕೊಂಡಳು. ಅಷ್ಟೊತ್ತಿಗೆ, ಪುಟಾಣಿ ಮಗುವಿನ ತಾಯಿಯಾಗಿರುವ ಸೆರೆನಾಗೂ ಹೃದಯ ಕರಗಿತು. ಎದುರಾಳಿಯನ್ನು ಅಪ್ಪಿಕೊಂಡು ಸಮಾಧಾನಿಸಿದರು.

ದಯಾನಾ ಅವರನ್ನು ಅಪ್ಪಿಕೊಂಡ ಸೆರೆನಾ, 'ನೀನು ಚೆನ್ನಾಗಿ ಆಡಿದ್ದೀಯೆ. ಅಳಬೇಡ' ಎನ್ನುತ ಆಕೆಯ ಬೆನ್ನು ದಡವಿದರು, ಸಾಂತ್ವನಿಸಿದರು. ಗ್ಯಾಲರಿಯಲ್ಲಿ ಇಬ್ಬರನ್ನೂ ನೋಡುತ್ತ ಕುಳಿತವರೂ ಒಂದು ಕ್ಷಣ ಕಣ್ಣು ಪಸೆಯಾಗಿಸಿಕೊಂಡರೋ ಏನೋ. ಆಟದ ವೇಳೆ ಅಷ್ಟರ ಮಟ್ಟಿಗೆ ಈ ಭಾವುಕ ಕ್ಷಣ ಎಲ್ಲರ ಮನಸ್ಸಿಗೆ ತಾಗಿತ್ತು.

Story first published: Saturday, January 19, 2019, 13:51 [IST]
Other articles published on Jan 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X