ಇದು ನನ್ನ ವೃತ್ತಿ ಜೀವನದ ಅತ್ಯಂತ ಭಾವುಕ ಕ್ಷಣ: ಐತಿಹಾಸಿ ಸಾಧನೆ ಮಾಡಿದ ನಡಾಲ್ ಪ್ರತಿಕ್ರಿಯೆ

Rafael Nadal writes history with 21st Grand Slam win | Oneindia Kannada

ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ 2022ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು 21ನೇ ಗ್ರ್ಯಾಂಡ್‌ಸ್ಲ್ಯಾಮ್ ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಗ್ರ್ಯಾಂಡ್ ಸ್ಲ್ಯಾಂ್ ಇತಿಹಾಸದಲ್ಲಿ ನಡೆದ ಎರಡನೇ ಸುದೀರ್ಘ ಫೈನಲ್‌ನಲ್ಲಿ ರಾಫೆಲ್ ನಡಾಲ್ ಗೆದ್ದು ಬೀಗಿದ್ದಾರೆ. 5 ಗಂಟೆ 24 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ರಾಫೆಲ್ ನಡಾಲ್ ರಷ್ಯಾದ ಡೇನಿಲ್ ಮಡ್ವೆಡೇವ್ ಅವರನ್ನು ಮಣಿಸಿದ್ದಾರೆ.

ಈ ಫೈನಲ್ ಪಂದ್ಯದ ಬಳಿಕ ರಾಫೆಲ್ ನಡಾಲ್ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಇದು ತನ್ನ ವೃತ್ತಿ ಜೋವನದ ಅತ್ಯಂತ ಭಾವುಕ ಕ್ಷಣಗಳಲ್ಲಿ ಒಂದು ಎಂದು ನಡಾಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ. ಆರಂಭದಲ್ಲಿ ಎರಡು ಸೆಟ್‌ಗಳನ್ನು ಕಳೆದುಕೊಂಡಿದ್ದ ನಡಾಲ್ ಬಳಿಕ ಅಮೋಘ ರೀತಿಯಲ್ಲಿ ಪಂದ್ಯಕ್ಕೆ ಮರಳಿ ಗೆಲುವು ಸಾಧಿಸಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನನ್ನ ಬೆಂಬಲಿಸಿದ ಕೊಹ್ಲಿ ಬಾಲ್ಯದ ಕೋಚ್ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನನ್ನ ಬೆಂಬಲಿಸಿದ ಕೊಹ್ಲಿ ಬಾಲ್ಯದ ಕೋಚ್

ಮೊದಲಿಗೆ ರಾಫೆಡಲ್ ನಡಾಲ್ ತಮ್ಮ ಎದುರಾಳಿ ರಷ್ಯಾದ ಡೇನಿಲ್ ಮಡ್ವಡೇವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. "ಖಂಡಿತಾ ಇದು ಅತ್ಯಂತ ಕಠಿಣವಾದ ಸಂದರ್ಭ ಎಂಬುದು ನನಗೆ ಅರಿವಿದೆ ಡೇನಿಲ್, ನೋವೋರ್ವ ಅದ್ಭುತವಾದ ಚಾಂಪಿಯನ್. ಈ ಟೂರ್ನಮೆಂಟ್‌ನಲ್ಲಿ ನಾನು ಕುಡ ಕೆಲ ಸಂದರ್ಭಗಳಲ್ಲಿ ನಿಮ್ಮ ಸ್ಥಾನದಲ್ಲಿದ್ದೆ. ಟ್ರೋಫಿಯನ್ನು ಗಳಿಸುವ ಅವಕಾಶವನ್ನು ಹೊಂದಿದ್ದೆ. ಆದರೆ ನೀವು ಕುಡ ಮುಂದೆ ಈ ಟೂರ್ನಮೆಂಟ್‌ನ ಕೆಲ ಟ್ರೋಫಿಗಳನ್ನು ನಿಮ್ಮಲ್ಲಿ ಹೊಂದಿರುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಯಾಕೆಂದರೆ ನೀವು ಅದ್ಭೂತ ಆಟಗಾರ. ಹಾಗಾಗಿ ನಿಮ್ಮನ್ನು ನಾನು ಅಭಿನಂದಿಸಲು ಬಯಸುತ್ತೇನೆ"

"ಇದು ನನ್ನ ಟೆನ್ನಿಸ್ ವೃತ್ತಿ ಜೀವನದಲ್ಲಿ ಅತ್ಯಂತ ಭಾವನಾತ್ಮಕ ಪಂದ್ಯಗಳಲ್ಲಿ ಒಂದು. ಈ ಹಂತದಲ್ಲಿ ನಿಮ್ಮೊಂದಿಗೆ ಕೋರ್ಟ್ ಹಂಚಿಕೊಂಡಿರುವುದು ನನಗೆ ಸಿಕ್ಕ ಗೌರವ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ" ಎಂದು ರಾಫೆಲ್ ನಡಾಲ್ ಎದುರಾಳಿ ಮಡ್ವಡೇವ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಐಪಿಎಲ್ 2022: ಧೋನಿ ಬದಲು ಜಡೇಜಾಗೆ ಸಿಎಸ್‌ಕೆ ನಾಯಕ ಸ್ಥಾನ; ಸ್ಪಷ್ಟನೆ ಕೊಟ್ಟ ಫ್ರಾಂಚೈಸಿಐಪಿಎಲ್ 2022: ಧೋನಿ ಬದಲು ಜಡೇಜಾಗೆ ಸಿಎಸ್‌ಕೆ ನಾಯಕ ಸ್ಥಾನ; ಸ್ಪಷ್ಟನೆ ಕೊಟ್ಟ ಫ್ರಾಂಚೈಸಿ

ಬಳಿಕ ನಡಾಲ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. "ನಿಮ್ಮ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ. ಇದೊಂದು ಅದ್ಭುತವಾದ ಅನುಭವವಾಗಿದೆ. ನಿಜ ಹೇಳಬೇಕೆಂದರೆ ಒಂದೂವರೆ ತಿಂಗಳ ಹಿಂದೆ ನಾನು ಮತ್ತೆ ಟೆನ್ನಿಸ್‌ ಆಡಲು ಪ್ರವಾಸ ಕೈಗೊಳ್ಳುತ್ತೇನೆಯೇ ಎಂಬ ಭರವಸೆ ನನಗೆ ಇರಲಿಲ್ಲ. ಆದರೆ ಇಂದು ನಾನು ಈ ಟ್ರೋಫಿಯೊಂದಿಗೆ ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ. ಆದರೆ ನಾನು ಈ ಸ್ಥಾನಕ್ಕೆ ಬರಲು ಎಷ್ಟು ಹೋರಾಡಿದ್ದೇನೆ ಎಂದು ನಿಮಗೆ ತಿಳಿದಿಲ್ಲ. ಆದರೆ ನಾನು ಇಲ್ಲಿಗೆ ಬಂದು ಇಳಿದ ಬಳಿಕ ನನಗೆ ನೀವು ನೀಡಿದ ಬೆಂಬಲಕ್ಕೆ ಕೇವಲ ಧನ್ಯವಾದ ಹೇಳಲು ಮಾತ್ರ ಸಾಧ್ಯ. ನಿಮ್ಮ ಬೆಂಬಲ ನಿಜಕ್ಕೂ ಅದ್ಭುತ" ಎಂದು ರಾಫೆಲ್ ನಡಾಲ್ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.

ಈ ಗೆಲುವಿನೊಂದಿಗೆ ರಾಫೆಲ್ ನಡಾಲ್ ತಮ್ಮ ಸಮಕಾಲೀನ ಶ್ರೇಷ್ಠ ಆಟಗಾರರಾದ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದಾರೆ. ಈ ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಈ ಬಿಗ್ ತ್ರಿ ಆಟಗಾರರು 20 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದು ಸಮ ಸಾಧನೆ ಮಾಡಿದ್ದರು. ಆದರೆ ರಾಫೆಲ್ ನಡಾಲ್ ಈಗ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದು 21 ಗ್ರ್ಯಾಂಡ್ ಸ್ಲ್ಯಾಮ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, January 30, 2022, 21:34 [IST]
Other articles published on Jan 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X