ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

19ರ ಹರೆಯದ ಬಿಯಾಂಕಾಗೆ 'ಕೆನಡಾದ ವರ್ಷದ ಕ್ರೀಡಾಪಟು' ಗೌರವ

Bianca Andreescu named Canada’s athlete of the year

ಒಟ್ಟಾವಾ, ಡಿಸೆಂಬರ್ 11: ಟೆನಿಸ್ ಆಟಗಾರ್ತಿ, 19ರ ಹರೆಯದ ಬಿಯಾಂಕಾ ಆಂಡ್ರೀಸ್ಕುಗೆ ಕೆನಡಾದ ವರ್ಷದ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಇದು ಬಿಯಾಂಕಾಗೆ ಇದೇ ವರ್ಷ ದೊರೆಯುತ್ತಿರುವ 2ನೇ ಅತ್ಯುನ್ನತ ಗೌರವ. ಇದಕ್ಕೂ ಮುನ್ನ ಆಂಡ್ರೀಸ್ಕುಗೆ ಲೌ ಮಾರ್ಷ್ ಟ್ರೋಫಿ ಲಭಿಸಿತ್ತು.

ಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶ

ಸುಮಾರು 50 ವರ್ಷಗಳಲ್ಲಿ ರೋಜರ್ಸ್ ಕಪ್ ಗೆದ್ದ ಮೊದಲ ಕೆನಡಿಯನ್ ಟೆನಿಸ್‌ ಆಟಗಾರ್ತಿ ಎಂಬ ಹಿರಿಮೆಯೂ ಬಿಯಾಂಕಾ ಆಂಡ್ರೀಸ್ಕು ಅವರದ್ದು. ಅಷ್ಟೇ ಅಲ್ಲ; ರೋಜರ್ಸ್ ಕಪ್ ಫೈನಲ್‌ನಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಮಣಿಸಿದ ಮೊದಲ ಕೆನಡಾ ಆಟಗಾರ್ತಿ, ಅದರಲ್ಲೂ ಹದಿಹರೆಯದ ಆಟಗಾರ್ತಿಯೆಂಬ ಹೆಗ್ಗಳಿಕೆಗೂ ಬಿಯಾಂಕಾ ಪಾತ್ರರಾಗಿದ್ದರು.

'ಈ ಪ್ರಶಸ್ತಿಗೆ ನಾನು ಆಭಾರಿಯಾಗಿದ್ದೇನೆ. ನಾನಿದನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಈ ಪ್ರಶಸ್ತಿ ಗೆದ್ದ ಮೊದಲ ಟೆನಿಸ್ ಆಟಗಾರ್ತಿ ನಾನಾಗಿರುವುದಕ್ಕೆ ಅತೀವ ಖುಷಿಯಾಗಿದೆ. 2020 ನನಗೇನು ನೀಡಲಿದೆಯೆಂದು ಕಾಯುತ್ತಾ ಕುಳಿತುಕೊಳ್ಳಲಾರೆ. ಕೆನಡಾವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ನನಗೆ ಹೆಮ್ಮೆಯೆನಿಸಿದೆ,' ಎಂದು ಬಿಯಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ.

ಏಕದಿನ ಸರಣಿ: ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಮಯಾಂಕ್ ಆಯ್ಕೆ ಅಧಿಕೃತಏಕದಿನ ಸರಣಿ: ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಮಯಾಂಕ್ ಆಯ್ಕೆ ಅಧಿಕೃತ

ಕೆನಡಾದ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಬಿಯಾಂಕಾ ಅವರನ್ನು 30 ಜನ ಕ್ರೀಡಾಪತ್ರಕರ್ತರಿದ್ದ ಸಮೂಹ ಸರ್ವಾನುಮತದಿಂದ ಆರಿಸಿದೆ. ಈ ಪ್ರಶಸ್ತಿಗಾಗಿ ನೋಂದಾಯಿಸಿಕೊಂಡಿದ್ದ ಇನ್ನಿತರ ಕ್ರೀಡಾಪಟುಗಳೆಂದರೆ ಬ್ರೂಕ್ ಹೆಂಡರ್ಸನ್ (ಗಾಲ್ಫ್), ಜೋರ್ಡಾನ್ ಬಿನ್ನಿಂಗ್ಟನ್ (ಐಸ್ ಹಾಕಿ), ಆಂಡ್ರೆ ಡಿ ಗ್ರಾಸ್ (ಅಥ್ಲೆಟಿಕ್ಸ್), ಮೈಕ್ ಸೊರೊಕಾ (ಬೇಸ್ ಬಾಲ್).

Story first published: Wednesday, December 11, 2019, 17:09 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X