ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಯುಎಸ್ ಓಪನ್‌'ಗೆ ಒಲ್ಲೆಯೆಂದ ವಿಶ್ವ ನಂ.1 ಆಟಗಾರ್ತಿ ಆಶ್ಲೇ ಬಾರ್ಟಿ

Coronavirus: Ashleigh Barty pulls out of US Open

ಸಿಡ್ನಿ, ಜುಲೈ 30: ವಿಶ್ವ ನಂ.1 ಟೆನಿಸ್ ಆಟಗಾರ್ತಿ, ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಪ್ರತಿಷ್ಠಿತ ಯುಎಸ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ವಿಶ್ವ ಖ್ಯಾತಿಯ ನ್ಯೂಯಾರ್ಕ್ ಗ್ರ್ಯಾಂಡ್‌ಸ್ಲ್ಯಾಮ್ ಟೆನಿಸ್ ಟೂರ್ನಿಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್

ಆಶ್ಲೇ ಬಾರ್ಟಿ ಯುಎಸ್ ಓಪನ್‌ನಿಂದ ಹಿಂದೆ ಸರಿದಿರುವುದಕ್ಕೆ ಪ್ರಮುಖ ಕಾರಣ ಕೊರೊನಾವೈರಸ್ ಭೀತಿ. ಮಾರಕ ಸೋಂಕಿನ ಪಿಡುಗಿನ ಸಮಯದಲ್ಲಿ ವಿದೇಶಿ ಪ್ರಯಾಣ ಸರಿಯಲ್ಲ ಎಂದು ಬಾರ್ಟಿ ಈ ನಿರ್ಧಾರ ತಾಳಿದ್ದಾರೆ. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲಿ ಮುಖ್ಯ ಟೂರ್ನಿಯಿಂದ ದೂರ ಉಳಿದ ದೊಡ್ಡ ಹೆಸರು ಆಶ್ಲೇ ಬಾರ್ಟಿ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

'ಈ ವರ್ಷ ಯುಎಸ್ ಮತ್ತು ಪಾಶ್ಚಿಮಾತ್ಯ ಮತ್ತು ದಕ್ಷಿಣ ಓಪನ್ ಟೂರ್ನಿಗಳಿಗೆ ಹೋಗದಿರಲು ಮತ್ತು ಈ ವರ್ಷದ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳದಿರಲು ನಾನು ಮತ್ತು ನನ್ನ ತಂಡ ನಿರ್ಧರಿಸಿದೆ,' ಎಂದು ಬಾರ್ಟಿ ಮ್ಯಾನೇಜರ್ ನೀಡಿರುವ ಹೇಳಿಕೆಯಲ್ಲಿ ಬರೆಯಲಾಗಿದೆ.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಮೇ-ಜೂನ್‌ನಲ್ಲಿ ನಡೆಯಬೇಕಾಗಿದ್ದ ಯುಎಸ್ ಓಪನ್ ಕ್ಲೇ ಕೋರ್ಟ್ ಟೂರ್ನಿಯನ್ನು ಕೊರೊನಾವೈರಸ್ ಕಾರಣ 27 ಸೆಪ್ಟೆಂಬರ್ ಬಳಿಕ ಆರಂಭಿಸಲು ನಿರ್ಧರಿಸಲಾಗಿತ್ತು. ಟೂರ್ನಿ ಸದ್ಯ ಸೆಪ್ಟೆಂಬರ್ 27ರಿಂದ ಆರಂಭಗೊಳ್ಳುವುದರಲ್ಲಿದೆ.

Story first published: Thursday, July 30, 2020, 12:01 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X