ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನ್ನಿಸ್‌ಗೆ ಹಸಿರು ನಿಶಾನೆ: ಆಗಸ್ಟ್‌ನಲ್ಲಿ ಆರಂಭವಾಗಲಿದೆ ವೃತ್ತಿಪರ ಟೆನ್ನಿಸ್

Tennis Resume Ofter Coronavirus From August

ಕರೊನಾ ವೈರಸ್‌ನ ಕಾರಣದಿಂದಾಗಿ ಕಳೆದ ಮಾರ್ಚ್‌ನಿಂದ ಸ್ಥಗಿತವಾಗಿರುವ ವೃತ್ತಿಪರ ಟೆನಿಸ್ ಚಟುವಟಿಕೆಗಳು ಆಗಸ್ಟ್‌ನಿಂದ ಆರಂಭಗೊಳ್ಳುವುದು ಖಚಿತಗೊಂಡಿದೆ. ಮಹಿಳಾ ಮತ್ತು ಪುರುಷರ ವೃತ್ತಿಪರ ಟೆನಿಸ್ ಟೂರ್ನಿಗಳ ತಾತ್ಕಾಲಿಕ ಕ್ಯಾಲೆಂಡರ್ ಬಿಡುಗಡೆಗೊಂಡಿದೆ.

ಆಗಸ್ಟ್ 3ರಿಂದ ಇಟಲಿಯಲ್ಲಿ ಪಲೆರ್ಮೊ ಲೇಡಿಸ್ ಓಪನ್ ನಡೆಯಲಿದೆ ಎಂದು ಮಹಿಳೆಯರ ಟೆನಿಸ್ ಆಡಳಿತ ಸಂಸ್ಥೆ ಡಬ್ಲ್ಯುಟಿಎ ತಿಳಿಸಿದ್ದರೆ, ಆಗಸ್ಟ್ 14ರಿಂದ ವಾಷಿಂಗ್ಟನ್‌ನಲ್ಲಿ ಸಿಟಿ ಓಪನ್ ನಡೆಯಲಿದೆ ಎಂದು ಪುರುಷರ ಟೆನಿಸ್ ಆಡಳಿತ ಸಂಸ್ಥೆ ಎಟಿಪಿ ತಿಳಿಸಿದೆ.

ಯುಎಸ್ ಓಪನ್‌ಗೆ 23 ಗ್ರ್ಯಾಂಡ್‌ಸ್ಲ್ಯಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಸಿದ್ಧಯುಎಸ್ ಓಪನ್‌ಗೆ 23 ಗ್ರ್ಯಾಂಡ್‌ಸ್ಲ್ಯಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಸಿದ್ಧ

ಸಿಟಿ ಓಪನ್‌ನಲ್ಲಿ ಮಹಿಳಾ ವಿಭಾಗದ ಸ್ಪರ್ಧೆಗಳೂ ನಡೆಯಲಿವೆ. ನಂತರ ಆಗಸ್ಟ್ 31ರಿಂದ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂಗೆ ಪೂರ್ವಭಾವಿಯಾಗಿ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ ನ್ಯೂಯಾರ್ಕ್‌ನಲ್ಲೇ ನಡೆಯಲಿದೆ. ಇಲ್ಲಿ ಪುರುಷರ ಮತ್ತು ಮಹಿಳೆಯರ ಟೆನಿಸ್ ಸ್ಪರ್ಧೆಗಳೂ ನಡೆಯಲಿವೆ.

ಸೆಪ್ಟೆಂಬರ್‌ನಲ್ಲಿ ಕ್ಲೇಕೋರ್ಟ್ ಟೂರ್ನಿಗಳು ಯುರೋಪ್‌ನಲ್ಲಿ ನಡೆಯಲಿವೆ. ಸೆಪ್ಟೆಂಬರ್ 27ರಿಂದ ನಡೆಯಲಿರುವ ಫ್ರೆಂಚ್​ ಓಪನ್‌ಗೆ ಪೂರ್ವಭಾವಿಯಾಗಿ ಮ್ಯಾಡ್ರಿಡ್ ಮತ್ತು ರೋಮ್ ಟೆನಿಸ್ ಟೂರ್ನಿಗಳು ನಡೆಯಲಿವೆ. ಆದರೆ ಇವೆಲ್ಲಾ ಟೂರ್ನಿಗಳು ಪ್ರೇಕ್ಷಕರ ಗೈರುಹಾಜರಿಯಲ್ಲೇ ನಡೆಯಲಿವೆ.

ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್

ಕರೊನಾ ಭೀತಿಯಿಂದಾಗಿ ಪಂದ್ಯದ ವೇಳೆ ಅತ್ಯಂತ ಕಡಿಮೆ ಜನರು ಕ್ರೀಡಾಂಗಣದಲ್ಲಿರುವಂತೆ ಮಾಡುವ ಸಲುವಾಗಿ ಯುಎಸ್ ಓಪನ್ ಗ್ರಾಂಡ್ ಸ್ಲಾಂನಲ್ಲಿ ಲೈನ್ ಅಂಪೈರ್‌ಗಳು ಇರುವುದಿಲ್ಲ. ಅವರ ಬದಲಾಗಿ ಎಲೆಕ್ಟ್ರಾನಿಕ್ ಲೈನ್-ಕಾಲಿಂಗ್ ವ್ಯವಸ್ಥೆಯನ್ನು ಬಳಸಲಾಗುವುದು. ಆದರೆ ಟೂರ್ನಿಯ 2 ಪ್ರಮುಖ ಮತ್ತು ದೊಡ್ಡ ಕೋರ್ಟ್ ಅರೆನಾದಲ್ಲಿ ಮಾತ್ರ ಲೈನ್ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ ಪ್ರತಿ ಕೋರ್ಟ್‌ನಲ್ಲಿ 6ಕ್ಕೆ ಬದಲಾಗಿ 3 ಬಾಲ್ ಕಿಡ್‌ಗಳಷ್ಟೇ ಇರಲಿದ್ದಾರೆ.

Story first published: Friday, June 19, 2020, 15:53 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X