ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ ಹಿನ್ನೋಟ: ಲಿಯಾಂಡರ್, ಭೂಪತಿ ಅತ್ಯುತ್ತಮ ಸಾಧಕರು

ಕಳೆದ 20 ವರ್ಷಗಳಲ್ಲಿ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಯಸ್ ಹಾಗೂ ಮಹೇಶ್ ಭೂಪತಿ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಬ್ಬರು ತಲಾ 4 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಭಾರತೀಯ ಆಟಗಾರರ ಸಾಧನೆಯತ್ತ ಒಂದು ನೋಟ ಇಲ್ಲಿದೆ

By Mahesh

ಬೆಂಗಳೂರು, ಮೇ 26 : ಮೇ 28 ರಿಂದ ಜೂನ್ 11ರ ತನಕ ಆವೆ ಮಣ್ಣಿನ ಅಂಗಳದಲ್ಲಿ ಟೆನಿಸ್ ಕದನ ನಡೆಯಲಿದೆ. ಕಳೆದ 20 ವರ್ಷಗಳಲ್ಲಿ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಯಸ್ ಹಾಗೂ ಮಹೇಶ್ ಭೂಪತಿ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಬ್ಬರು ತಲಾ 4 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಭಾರತೀಯ ಆಟಗಾರರ ಸಾಧನೆಯತ್ತ ಒಂದು ನೋಟ ಇಲ್ಲಿದೆ...

ಮಹಿಳಾ ಆಟಗಾರ್ತಿಯರ ಪೈಕಿ ಸಾನಿ ಮಿರ್ಜಾ ಅವರು 2006ರಲ್ಲಿ ಮಹೇಶ್ ಭೂಪತಿ ಜತೆಗೂಡಿ ಮಿಶ್ರಡಬಲ್ಸ್ ಗೆದ್ದುಕೊಂಡಿದ್ದರು. ರೋಹನ್ ಭೋಪಣ್ಣ ಹಾಗೂ ಸೋಮದೇವ್ ದೇವರ್ ಮನ್ ಅವರು ಉತ್ತಮ ಪ್ರದರ್ಶನ ನೀಡಿದರೂ ಇನ್ನೂ ಪ್ರಶಸ್ತಿ ಗೆಲ್ಲುವ ಹಂತ ತಲುಪಿಲ್ಲ.[ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ]

ಉಳಿದಂತೆ, 10ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿರುವ ಸ್ಪೇನಿನ ರಾಫೆಲ್ ನಡಾಲ್ ಅವರು ಈ ಬಾರಿಯ ಫೇವರಿಟ್ ಎನಿಸಿಕೊಂಡಿದ್ದಾರೆ. 2014ರಲ್ಲಿ ಕಪ್ ಎತ್ತಿದ್ದ ಸ್ಪೇನಿನ ದಿಗ್ಗಜ ನಡಾಲ್ ಈ ಬಾರಿ ನಾಲ್ಕನೇ ಸೀಡೆಡ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ವಿಶ್ವದ ನಂ.2 ಆಟಗಾರ ನೊವಾಕ್ ಜೋಕೋವಿಕ್ ಅವರು ಫ್ರೆಂಚ್ ಓಪನ್ ಹಾಲಿ ಚಾಂಪಿಯನ್ ಆಗಿದ್ದು, ನಡಾಲ್ ಗೆ ಭಾರಿ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಮಾರ್ಟಿನಾ ಹಿಂಗೀಸ್ ಹಾಗೂ ಲಿಯಾಂಡರ್

ಮಾರ್ಟಿನಾ ಹಿಂಗೀಸ್ ಹಾಗೂ ಲಿಯಾಂಡರ್

ಲಿಯಾಂಡರ್ ಪೇಸ್ ಅವರು ಫ್ರೆಂಚ್ ಓಪನ್ ನಲ್ಲಿ ಉತ್ತಮ ಸಾಧನೆ ತೋರಿದ ಭಾರತೀಯ ಟೆನಿಸ್ ಪಟು. 4 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, 3 ಬಾರಿ ಡಬಲ್ಸ್ ಹಾಗೂ ಒಂದು ಬಾರಿ ಮಿಶ್ರ ಡಬಲ್ಸ್ ಗೆದ್ದುಕೊಂಡಿದ್ದಾರೆ. 2 ಬಾರಿ ಮಹೇಶ್ ಭೂಪತಿ ಜತೆ ಜೋಡಿಯಾಗಿದ್ದರು.

ಮಹೇಶ್ ಭೂಪತಿ

ಮಹೇಶ್ ಭೂಪತಿ

ಲಿಯಾಂಡರ್ ಪೇಸ್ ನಂತರ ಫ್ರೆಂಚ್ ಓಪನ್ ನಲ್ಲಿ ಮಹೇಶ್ ಭೂಪತಿ ಅವರು ಉತ್ತಮ ಸಾಧನೆ ತೋರಿದ್ದಾರೆ. ಮಹೇಶ್ ಕೂಡಾ 4 ಬಾರಿಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 2 ಬಾರಿ ಪೇಸ್ ಜತೆಗೂಡಿ ಪುರುಷರ ಡಬಲ್ಸ್ ಹಾಗೂ 2 ಬಾರಿ ಮಿಶ್ರ ಡಬಲ್ಸ್ ಗೆದ್ದಿದ್ದಾರೆ.

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

ಮಹಿಳಾ ಟೆನಿಸ್ ಗಾರ್ತಿಯಾಗಿ ಭಾರತದ ಅಗ್ರಗಣ್ಯರಾಗಿ ಸಾನಿಯಾ ಮಿರ್ಜಾ ಹೊರಹೊಮ್ಮಿದ್ದಾರೆ. ಮಹೇಶ್ ಭೂಪತಿ ಜತೆಗೂಡಿ 2012ರಲ್ಲಿ ಮಿಶ್ರ ಡಬಲ್ಸ್ ಗೆದ್ದುಕೊಂಡಿದ್ದಾರೆ.

ರೋಹನ್ ಬೋಪಣ್ಣ

ರೋಹನ್ ಬೋಪಣ್ಣ

ರೋಹನ್ ಬೋಪಣ್ಣ ಅವರು ಭಾರತದ ಉತ್ತಮ ಟೆನಿಸ್ ಪಟುವಾಗಿ ಹೊರ ಹೊಮ್ಮಿದ್ದು, ಡಬಲ್ಸ್ ನಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಫ್ರೆಂಚ್ ಓಪನ್ ಪ್ರಶಸ್ತಿ ಸುತ್ತಿನ ತನಕ ಇನ್ನೂ ತಲುಪಿಲ್ಲ. 2011, 2014 ಹಾಗೂ 2016ರ ಕ್ವಾರ್ಟರ್ ಫೈನಲ್ ತಲುಪಿದ್ದು ಇಲ್ಲಿತನಕದ ಶ್ರೇಷ್ಠ ಸಾಧನೆ.

ಸೋಮದೇವ್ ದೇವರ್ ಮನ್

ಸೋಮದೇವ್ ದೇವರ್ ಮನ್

ಸೋಮದೇವ್ ದೇವರ್ ಮನ್ ಅವರು ಫ್ರೆಂಚ್ ಓಪನ್ ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X