ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

31ನೇ ಹರೆಯದಲ್ಲೇ ಟೆನಿಸ್ ನಿವೃತ್ತಿ ಘೋಷಿಸಿದ ಜೂಲಿಯಾ ಜಾರ್ಜ್ಸ್

Former Wimbledon semifinalist Julia Goerges retires from tennis at 31

ಬರ್ಲಿನ್: ವಿಂಬಲ್ಡನ್‌ ಮಾಜಿ ಸೆಮಿಫೈನಲಿಸ್ಟ್ ಜರ್ಮನಿಯ ಜೂಲಿಯಾ ಜಾರ್ಜ್ಸ್ ಟೆನಿಸ್ ವೃತ್ತಿ ಬದುಕಿಗೆ ಬೈ ಹೇಳಿದ್ದಾರೆ. 31ರ ಹರೆಯದ ಜೂಲಿಯಾ ಬುಧವಾರ (ಅಕ್ಟೋಬರ್ 21) ತನ್ನ ನಿರ್ಧಾರ ಪ್ರಕಟಿಸಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೂಲಿಯಾ 2018ರಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರು. ಇದು ಜೂಲಿಯಾ ವೃತ್ತಿ ಬದುಕಿನ ಒಳ್ಳೆಯ ಸಾಧನೆಯಾಗಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಸಂದೇಶ ಬರೆದ ರವೀಂದ್ರ ಜಡೇಜಾಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಸಂದೇಶ ಬರೆದ ರವೀಂದ್ರ ಜಡೇಜಾ

ನಿವೃತ್ತಿ ಹೊತ್ತಿನಲ್ಲಿ ಜೂಲಿಯಾ ಜಾರ್ಜ್ಸ್ 45ನೇ ಶ್ರೇಯಾಂಕಕ್ಕೆ ಕುಸಿದಿದ್ದರು. ಇತ್ತೀಚೆಗೆ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಂಡಿದ್ದ ಜೂಲಿಯಾ ದ್ವಿತೀಯ ಸುತ್ತಿನಲ್ಲಿ ಜರ್ಮನ್‌ನವರೇ ಆದ ಲಾರಾ ಸೀಗೆಮಂಡ್ ವಿರುದ್ಧ ಹಿನ್ನಡೆ ಅನುಭವಿಸಿದ್ದರು.

ಪತ್ರದ ಮೂಲಕ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿರುವ ಜೂಲಿಯಾ, 'ಗುಡ್ ಬೈ ಹೇಳಲು ತಯಾರಾಗಿದ್ದೇನೆ' ಎಂದು ಬರೆದುಕೊಂಡಿದ್ದರು. ಜೂಲಿಯಾ ಒಟ್ಟಿಗೆ 15 ವರ್ಷಗಳ ವೃತ್ತಿ ಬದುಕು ಕಂಡಿದ್ದಾರೆ.

IPL 2021ರ ಹರಾಜಿನಲ್ಲಿ ಫ್ರಾಂಚೈಸಿಗಳು ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆIPL 2021ರ ಹರಾಜಿನಲ್ಲಿ ಫ್ರಾಂಚೈಸಿಗಳು ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ

'ನಿಮಗೆ ಗುಡ್ ಬೈ ಹೇಳುವಾಗ ಯಾವ ರೀತಿಯ ಭಾವನೆ ಉಂಟಾಗುತ್ತದೆ ಅನ್ನೋದು ನನಗೆ ಯಾವಾಗಲೂ ಗೊತ್ತಿದೆ. ನನ್ನ ಟೆನಿಸ್ ಅಧ್ಯಾಯ ಕೊನೆಗೊಳಿಸಲು ನಾನು ತಯಾರಾಗಿದ್ದೇನೆ. ಹೊಸ ಬದುಕಿಗೆ ತೆರೆದುಕೊಳ್ಳುತ್ತಿದ್ದೇನೆ,' ಎಂದು ಜೂಲಿಯಾ ಹೇಳಿದ್ದಾರೆ.

Story first published: Thursday, October 22, 2020, 16:21 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X