ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಾಜಿ ವಿಶ್ವ ನಂ.4 ಟೆನಿಸ್ ಆಟಗಾರ್ತಿ ಡಚ್ಚಿನ ಕಿಕಿ ಬರ್ಟೆನ್ಸ್ ನಿವೃತ್ತಿ

Former World No. 4 Kiki Bertens announces retirement

ಆ್ಯಮ್ಸ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‌ನ ಸ್ಟಾರ್ ಆಟಗಾರ್ತಿ, ಮಾಜಿ ವಿಶ್ವ ನಂ.4 ಶ್ರೇಯಾಂಕಿತೆ ಕಿಕಿ ಬರ್ಟೆನ್ಸ್ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2021ರ ಸೀಸನ್ ಕೊನೆಯಾಗುತ್ತಲೇ ತನ್ನ ವೃತ್ತಿ ಬದುಕೂ ಕೊನೆಯಾಗಲಿದೆ ಎಂದು ಬರ್ಟೆನ್ಸ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಕುಲ್‌ದೀಪ್ ಯಾದವ್ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಕುಲ್‌ದೀಪ್ ಯಾದವ್

ಕಳೆದ ಅಕ್ಟೋಬರ್‌ನಲ್ಲಿ ಕಿಕಿ ಬರ್ಟೆನ್ಸ್ ಅಕಿಲೀಸ್ ಸರ್ಜರಿಗೆ (ಕೆಳ ಹಿಂಗಾಲಿನ ಶಸ್ತ್ರ ಚಿಕಿತ್ಸೆ) ಒಳಗಾಗಿದ್ದರು. ಈ ಸೀಸನ್‌ ನನ್ನ ಟೆನಿಸ್ ವೃತ್ತಿ ಬದುಕಿನ ಕೊನೆಯ ಸೀಸನ್‌ ಆಗಲಿದೆ ಎಂದು ನಾನು ನಿಮಗೆಲ್ಲರಿಗೂ ತಿಳಿಸಲು ಬಯಸುತ್ತೇನೆ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರ್ಟೆನ್ಸ್ ಹೇಳಿದ್ದಾರೆ.

ವರ್ಷದ ಅಂತ್ಯಕ್ಕೆ ನಡೆಯಲಿರುವ ಬೇರಾವುದೇ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮುನ್ನ ಈಸ್ಟ್‌ಬೋರ್ನ್, ವಿಂಬಲ್ಡನ್ ಮತ್ತು ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ತನಗೆ ಆಡಲು ಮನಸಿರುವುದಾಗಿ 29ರ ಹರೆಯದ ಬರ್ಟೆನ್ಸ್ ಹೇಳಿಕೊಂಡಿದ್ದಾರೆ.

ಐದು ಟೆಸ್ಟ್ ಪಂದ್ಯಗಳಲ್ಲಿ ಆತ 3 ಶತಕಗಳಿಸಲಿದ್ದಾರೆ: ಸುನಿಲ್ ಗವಾಸ್ಕರ್ಐದು ಟೆಸ್ಟ್ ಪಂದ್ಯಗಳಲ್ಲಿ ಆತ 3 ಶತಕಗಳಿಸಲಿದ್ದಾರೆ: ಸುನಿಲ್ ಗವಾಸ್ಕರ್

ವಿಶ್ವ ಶ್ರೇಯಾಂಕದಲ್ಲಿ ಸದ್ಯ 20ನೇ ಸ್ಥಾನದಲ್ಲಿರುವ ಬರ್ಟೆನ್ಸ್, ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ತೋರಿದ ಅತ್ಯುತ್ತಮ ಸಾಧನೆಯೆಂದರೆ 2016ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು. ಆದರೆ ಆ ಪಂದ್ಯದಲ್ಲಿ ಬರ್ಟೆನ್ಸ್ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು.

Story first published: Thursday, June 17, 2021, 12:22 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X