ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲಬಲ್ಲರೆ ಹಾಲೆಪ್?

French Open 2018: Simona Halep aims for maiden Grand Slam title

ಪ್ಯಾರೀಸ್, ಜೂ. 9: ಕಳೆದ ಮೇ 21ರಿಂದ ಆರಂಭವಾಗಿರುವ ಪ್ರತಿಷ್ಠಿತ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ಟೆನಿಸ್ ಪಂದ್ಯಾಟಕ್ಕೆ ನಾಳೆ (ಜೂ. 10) ತೆರೆ ಬೀಳಲಿದ್ದು, ಇಂದು ವನಿತಾ ಸಿಂಗಲ್ಸ್ ಫೈನಲ್ ಕಾದಾಟ ನಡೆಯಲಿದೆ. ಪ್ರಶಸ್ತಿ ಸುತ್ತಿನಲ್ಲಿ ರುಮೇನಿಯಾದ ಸಿಮೋನಾ ಹಾಲೆಪ್ ಮತ್ತು ಅಮೆರಿಕದ ಸ್ಲೋಯೆನ್ ಸ್ಟೀಫನ್ಸ್ ಸೆಣಸಾಡಲಿದ್ದಾರೆ.

ಹಾಲೆಪ್ ಒಂದೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಇಂದಿನ ಹಣಾಹಣಿಯಲ್ಲಿ ಸ್ಟೀಫನ್ಸ್ ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಅದೂ ಅಲ್ಲದೆ ಹಾಲೆಪ್ ಸದ್ಯ ವಿಶ್ವ ನಂ. 1 ಸ್ಥಾನದಲ್ಲಿರುವುದರಿಂದ ಪ್ರತಿಷ್ಠಗಾಗಿಯಾದರೂ ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆಯಲೇಬೇಕಿದೆ.

ರುಮೇನಿಯನ್ ಆಟಗಾರ್ತಿ ಈ ಹಿಂದೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಎರಡು ಬಾರಿ ಫೈನಲ್‌ ಪ್ರವೇಶಿಸಿ ಸೋತಿದ್ದರು. ಈ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದರು. ಈ ಕಾರಣಕ್ಕಾಗಿಯೂ ಇಂದು ಹಾಲೆಪ್ ಉತ್ತಮ ಆಟ ಪ್ರದರ್ಶಿಸುವ ಸಾಧ್ಯತೆಯಿದೆ.

ಸ್ಟೀಫನ್ಸ್ ವಿರುದ್ಧ 5-2ರ ಗೆಲುವಿನ ದಾಖಲೆ ಹೊಂದಿರುವ ಹಾಲೆಪ್ ಈ ಬಾರಿ ಚೊಚ್ಚಲ ಪ್ರಶಸ್ತಿಯ ಕನಸು ಸಾಕಾರಗೊಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ. ಆದರೆ ವಿಶ್ವ 10ನೇ ಶ್ರೇಯಾಂಕಿತೆಯೂ ಅಷ್ಟೇ ಚತುರ ಆಟ ಪ್ರದರ್ಶಿಸುವ ಸಾಧ್ಯತೆಯಿದೆ. ಏಕೆಂದರೆ ಪ್ರಶಸ್ತಿ ಸುತ್ತಿನಲ್ಲಿ ಅವರು ಸವಾಲೆಸೆಯುತ್ತಿರುವುದು ನಂ. 1 ಆಟಗಾರ್ತಿಗೆ ಎನ್ನುವ ಅರಿವು ಸ್ಟೀಫನ್ಸ್ ಗೂ ಇದ್ದೇ ಇದೆ.

ಇಂದು ಸಂಜೆ 6.30ಕ್ಕೆ ಪ್ಯಾರೀಸ್ ನ ಫಿಲಿಪ್ ಚಾಟ್ರಿಯಾರ್ ಅಂಕಣದಲ್ಲಿ ಪಂದ್ಯ ಆರಂಭಗೊಳ್ಳಲಿದ್ದು, ಈ ಬಾರಿಯ ವನಿತಾ ಫ್ರೆಂಚ್ ಓಪನ್ ವಿಜೇತರಿಗಾಗಿ ಕಾದು ನೋಡಬೇಕಿದೆ. ನಾಳೆ(ಭಾನುವಾರ) ಪುರುಷರ ಫೈನಲ್ಸ್ ನಡೆಯಲಿದೆ. ರಾಫೆಲ್ ನಡಾಲ್-ಡೊಮಿನಿಕ್ ಥೀಮ್ ಮುಖಾಮುಖಿಯಾಗಲಿದ್ದಾರೆ.

Story first published: Saturday, June 9, 2018, 17:58 [IST]
Other articles published on Jun 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X