ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ 2022: ಈಗಾ ಸ್ವಿಯಾಟಿಕ್ ಮುಡಿಗೆ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಕಿರೀಟ

French Open 2022: Iga Swiatek crowned champion after won against Coco Gauff

ಫ್ರೆಂಚ್ ಓಪನ್‌ 2022ರ ಆವೃತ್ತಿಯಲ್ಲಿ ಪೋಲೆಂಡ್ ಆಟಗಾರ್ತಿ ಈಗಾ ಸ್ವಿಯಾಟಿಕ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಹದಿಹರೆಯದ ಆಟಗಾರ್ತಿ ಕೊಕೊ ಗೌಫ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಪೋಲೆಂಡ್ ಆಟಗಾರ್ತಿ 6-1, 6-3 ನೇರ ಸೆಟ್‌ಗಳಿಂದ ಗೆದ್ದು ಬೀಗಿದ್ದಾರೆ.

ಪ್ಯಾರಿಸ್‌ನ ಆವೆಯಂಗಳದಲ್ಲಿ ಈಗಾ ಸ್ವಿಯಾಟಿಕ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಜೊತೆಗೆ ಸತತ ಗೆಲುವಿನ ಸಾಧನೆಯಲ್ಲಿ ದಿಗ್ಗಜ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನಂ. 1 ಶ್ರೇಯಾಂಕಿತ ಆಟಗಾರ್ತಿ ಈಗಾ ದಾಖಲೆಯ ಸತತ 35ನೇ ಗೆಲುವನ್ನು ಸಾಧಿಸಿದ್ದಾರೆ. 2020ರಲ್ಲಿಯೂ ಈಗಾ ಫ್ರೆಂಚ್ ಓಪನ್‌ನ ಟ್ರೋಫಿ ಗೆದ್ದು ಬೀಗಿದ್ದರು.

IPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆIPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆ

2020ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿಯಾಗಿ ಫ್ರೆಂಚ್ ಓಪನ್‌ನಲ್ಲಿ ಆಡಲಿಳಿದ ಈಗಾ ಸ್ವಿಯಾಟಿಕ್ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇನ್ನು ಈ ಬಾರಿ ಪೋಲೆಂಡ್ ಆಟಗಾರ್ತಿ ಸತತವಾಗಿ 35ನೇ ಪಂದ್ಯವನ್ನು ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಇನ್ನು WTA ಟೂರ್‌ನಲ್ಲಿ ಸ್ವಿಯಾಟಿಕ್ ಗೆದ್ದಿರುವ ಸತತ 6ನೇ ಟ್ರೋಫಿ ಇದು ಎಂಬುದು ಗಮನಾರ್ಹ ಸಂಗತಿ. ಇದಕ್ಕೂ ಮುನ್ನ ದೋಹಾ, ಇಂಡಿಯನ್ ವೆಲ್ಸ್, ಮಿಯಾಮಿ, ಸ್ಟಟ್‌ಗರ್ಟ್ ಹಾಗೂ ರೋಮ್ ಪಂದ್ಯಾವಳಿಯ ಟೈಟಲ್ ಗೆದ್ದಿದ್ದರು. 2007 ಹಾಗೂ 2008ರಲ್ಲಿ ಜಸ್ಟಿನ್ ಹೆನಿನ್ ಬಳಿಕ ಸತತ 6 ಟೈಟಲ್ ಗೆದ್ದ ಆಟಗಾರ್ತಿ ಎನಿಸಿಕೊಂಡಿದ್ದಾರೆ ಈಗಾ ಸ್ವಿಯಾಟಿಕ್.

18ನೇ ಶ್ರೇಯಾಂಕದ ಆಟಗಾರ್ತಿ ಗೌಫ್ ತನ್ನ ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡಿದರು. ಸೆಮಿಫೈನಲ್‌ನಲ್ಲಿ ಇವರು ಇಟಲಿಯ ಮಾರ್ಟಿನಾ ಟ್ರೆವಿಸನ್ ವಿರುದ್ಧ 6-3, 6-1 ಸೆಟ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದರು. ಆದರೆ ಮೊನ್ನೆಯಷ್ಟೇ 21 ನೇ ವರ್ಷಕ್ಕೆ ಕಾಲಿಟ್ಟ ಸ್ವಿಯಾಟೆಕ್ ವಿರುದ್ಧ ಫೈನಲ್‌ನಲ್ಲಿ ಗೆಲುವು ಸಾಧಿಸಲು ವಿಫಲವಾದರು. ಕೇವಲ 68 ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ ಈಗಾ ಸ್ವಿಯಾಟಿಕ್ ಚಾಂಪಿಯನ್ ಆಗಿ ಮೆರೆದಿದ್ದಾರೆ.

Story first published: Saturday, June 4, 2022, 21:23 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X