ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್, ಸೆಮಿಫೈನಲ್: ಗಾಯಗೊಂಡು ಜ್ವೆರೆವ್ ನಿವೃತ್ತಿ: ಫೈನಲ್ ಹಂತಕ್ಕೇರಿದ ನಡಾಲ್

French Open 2022: Rafael Nadal enters final after Alexander Zverev retires with ankle injury

ಫ್ರೆಂಚ್ ಓಪನ್‌ನ ರೋಚಕ ಸೆಮಿಫೈನಲ್ ಪಂದ್ಯ ಅನಿರೀಕ್ಷಿತ ರೀತಿಯಲ್ಲಿ ಅಂತ್ಯಕಂಡಿದೆ. ಅಲೆಕ್ಸಾಂಡರ್ ಜ್ವೆರೇವ್ ಹಾಗೂ ರಾಫೆಲ್ ನಡಾಲ್ ನಡುವಿನ ಫೈನಲ್ ಹಂತಕ್ಕೇರುವ ಸೆಣೆಸಾಟದಲ್ಲಿ ಜ್ವೆರೇವ್ ಮೊಣಕಾಲು ಗಾಯಕ್ಕೆ ತುತ್ತಾದ ಕಾರಣ ಪಂದ್ಯದಲ್ಲಿ ಮುಂದುವರಿಯಲು ಅಸಮರ್ಥರಾದರು. ಹೀಗಾಗಿ ರಾಫೆಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಮಿಫೈನಲ್ ಕದನ ಮೊಟಕುಗೊಳ್ಳುವ ಸಂದರ್ಭದಲ್ಲಿ ನಡಾಲ್ 7-6(8), 6-6 ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ಈ ಹಂತದಲ್ಲಿ ಜ್ವೆರೇವ್ ಗಾಯಗೊಂಡು ನೆಲಕ್ಕುರುಳಿದರು. ಜರ್ಮನಿಯ ಆಟಗಾರ ಜ್ವೆರೇವ್ ತೀವ್ರ ನೋವಿನಿಂದ ನರಳುತ್ತಾ ಮೈದಾನಕ್ಕೆ ಬಿದ್ದರು. ಹೀಗಾಗಿ ಪಂದ್ಯದಲ್ಲಿ ಮುಂದುವರಿಯಲು ಅಸಾಧ್ಯವಾಯಿತು. ವೀಲ್‌ಚೇರ್‌ನಲ್ಲಿ ಜ್ವೆರೇವ್ ಅಂಗಳವನ್ನು ತೊರೆದರು.

ಜ್ವೆರೆವ್ ತೀವ್ರ ನೋವಿನೊಂದಿಗೆ ನರಳುತ್ತಿರುವುದನ್ನು ಕಂಡ ಎದುರಾಳಿ ರಾಫೆಲ್ ನಡಾಲ್ ಹಾಗು ಫಿಲಿಪ್ ಚಾಟ್ರಿಯಲ್‌ನಲ್ಲಿ ಕಿಕ್ಕಿರುದು ಸೇರಿದ್ದ ಪ್ರೇಕ್ಷಕರು ಅಕ್ಷರಶಃ ಆಘಾತಗೊಂಡರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಧಾವಿಸಿದರಾದರೂ ನೋವಿನ ತೀವ್ರತೆ ಹೆಚ್ಚಾಗಿತ್ತು. ವೂದ್ಯಕೀಯ ಸಿಬ್ಬಂದಿಗಳು ಪರೀಕ್ಷೆ ನಡೆಸಿದ ಬಳಿಕ ಆತ ಪಂದ್ಯದಲ್ಲಿ ಮುಂದುವರಿಯುವುದು ಅಸಾಧ್ಯ ಎಂಬುದನ್ನು ದೃಡಪಡಿಸಿದರು.

ಪ್ರೇಕ್ಷಕರಿಂದ ಎದ್ದು ನಿಂತು ಗೌರವ: 2022ರ ಯುಎಸ್ ಓಪನ್‌ನ ಫೈನಲ್ ಹಂತಕ್ಕೇರಿದ್ದ ಜರ್ಮನಿಯ ಸ್ಟಾರ್ ಆಟಗಾರ ಜ್ವೆರೇವ್ ಪಂದ್ಯದ ಮುಕ್ತಾಯದ ಪ್ರಕ್ರಿಯೆಗಳ ಬಳಿಕ ಅಂಗಳದಿಂದ ಹೊರನಡೆಯುತ್ತಿರುವ ಸಂದರ್ಭದಲ್ಲಿ ಫಿಲಿಪ್ ಚಾಟ್ರಿಯಲ್‌ನ ಪ್ರೇಕ್ಷಕರು ಎದ್ದು ನಿಂತು ಜರ್ಮನಿಯ ಆಟಗಾರನಿಗೆ ಗೌರವ ಸಲ್ಲಿಸಿದರು.

Story first published: Friday, June 3, 2022, 23:32 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X