ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: ಫೈನಲ್‌ ಪ್ರವೇಶಿಸಿದ ಅತ್ಯಂತ ಕಿರಿಯ ಆಟಗಾರ್ತಿ ಕೊಕೊ ಗೌಫ್

French Open: Coco Gouff Enters The Final, Youngest Grand Slam Finalist In 18 Years

ಗುರುವಾರ ನಡೆದ ಫ್ರೆಂಚ್ ಓಪನ್ ಮಹಿಳೆಯರ ಸೆಮಿಫೈನಲ್ ಪಂದ್ಯದಲ್ಲಿ ಮಾರ್ಟಿನಾ ಟ್ರೆವಿಸನ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ಅತ್ಯಂತ ಕಿರಿಯ ಆಟಗಾರ್ತಿ ಕೊಕೊ ಗೌಫ್ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೆ ಪ್ರವೇಶಿಸಿದರು. ಫ್ರೆಂಚ್ ಓಪನ್ ಪ್ರಶಸ್ತಿ ಹಣಾಹಣಿಯಲ್ಲಿ ವಿಶ್ವದ ನಂಬರ್ ಒನ್ ಇಗಾ ಸ್ವಿಯಾಟೆಕ್ ಅವರನ್ನು ಎದುರಿಸಲಿದ್ದಾರೆ.

18 ವರ್ಷದ ಅಮೇರಿಕನ್ ಆಟಗಾರ್ತಿ ಕೊಕೊ ಗೌಫ್ ಅವರು ಮಾರ್ಟಿನಾ ಟ್ರೆವಿಸನ್ ವಿರುದ್ಧ 6-3, 6-1 ಅಂತರದ ಸುಲಭ ಗೆಲುವು ಸಾಧಿಸಿದರು. ಇದು ಇಬ್ಬರೂ ಆಟಗಾರರು ಮೊದಲ ಬಾರಿಗೆ ಪ್ರಮುಖ ಸೆಮಿಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು. ಮರಿಯಾ ಶರಪೋವಾ 2004ರಲ್ಲಿ ವಿಂಬಲ್ಡನ್ ಗೆದ್ದ ನಂತರ ಕೊಕೊ ಗೌಫ್ ಅತ್ಯಂತ ಕಿರಿಯ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್ ಆಗಿದ್ದಾರೆ.

ಫ್ರೆಂಚ್ ಓಪನ್: 7ನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್‌ರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಮರಿನ್ ಸಿಲಿಕ್ಫ್ರೆಂಚ್ ಓಪನ್: 7ನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್‌ರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಮರಿನ್ ಸಿಲಿಕ್

'ನಾನು ಈಗ ಸ್ವಲ್ಪ ಆಘಾತದಲ್ಲಿದ್ದೇನೆ ಎಂದು ನಾನು ಭಾವಿಸುತ್ತೇನೆ,' ಎಂದು ಕೊಕೊ ಗೌಫ್ ಹೇಳಿದರು. ಪಂದ್ಯದ ನಂತರ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿರಲಿಲ್ಲ. ನಾನು ಪದಗಳಿಗಾಗಿ ಕಳೆದುಹೋಗಿದ್ದೇನೆ ಎಂದು ತಿಳಿಸಿದರು.

French Open: Coco Gouff Enters The Final, Youngest Grand Slam Finalist In 18 Years

ಮೊದಲ ಸೆಟ್‌ನಲ್ಲಿ ಇಬ್ಬರು ಆಟಗಾರ್ತಿಯರು ತಮ್ಮ ನಡುವೆ 37 ಅನಗತ್ಯ ತಪ್ಪುಗಳನ್ನು ಮಾಡಿದರು. ಆದರೆ ಎರಡನೆಯದರಲ್ಲಿ ಕೊಕೊ ಗೌಫ್ ತಪ್ಪು ಸರಿಪಡಿಸಿಕೊಂಡು ಗೆಲುವಿನ ನಗೆ ಬೀರಿದರು.

ಶನಿವಾರ ನಡೆಯಲಿರುವ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ 34 ಪಂದ್ಯಗಳ ಗೆಲುವಿನ ನಾಗಾಲೋಟದಲ್ಲಿರುವ ಇಗಾ ಸ್ವಿಯಾಟೆಕ್ ವಿರುದ್ಧ 18ನೇ ಶ್ರೇಯಾಂಕದ ಆಟಗಾರ್ತಿ ಕೊಕೊ ಗೌಫ್ ಪ್ರಶಸ್ತಿಗಾಗಿ ಕಾಳಗ ನಡೆಸಲಿದ್ದಾರೆ.

18 ವರ್ಷಗಳ ಹಿಂದೆ ಲಂಡನ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಮರಿಯಾ ಶರಪೋವಾ ಸೋಲಿಸಿದ ನಂತರ ಅತ್ಯಂತ ಕಿರಿಯ ಸ್ಲಾಮ್ ವಿಜೇತೆ ಎಂಬ ಹೆಗ್ಗಳಿಕೆಗೆ ಕೊಕೊ ಗೌಫ್ ಪಾತ್ರವಾಗಲಿದ್ದಾಳೆ. 'ನಾನು ಇನ್ನೊಂದು ಪಂದ್ಯದಂತೆ ಫೈನಲ್‌ಗೆ ಹೋಗಲಿದ್ದೇನೆ' ಎಂದು ಗೌಫ್ ಹೇಳಿದ್ದಾರೆ.

ಫ್ರೆಂಚ್ ಓಪನ್‌ನಿಂದ ಆಘಾತಕಾರಿ ಸೋಲಿನೊಂದಿಗೆ ನಿರ್ಗಮಿಸಿದ ರೋಹನ್ ಬೋಪಣ್ಣ ಜೋಡಿಫ್ರೆಂಚ್ ಓಪನ್‌ನಿಂದ ಆಘಾತಕಾರಿ ಸೋಲಿನೊಂದಿಗೆ ನಿರ್ಗಮಿಸಿದ ರೋಹನ್ ಬೋಪಣ್ಣ ಜೋಡಿ

"ಹೌದು, ಇದು ಗ್ರ್ಯಾಂಡ್ ಸ್ಲಾಮ್ ಫೈನಲ್. ಆದರೆ ಪ್ರಸ್ತುತ ಜಗತ್ತಿನಲ್ಲಿ, ವಿಶೇಷವಾಗಿ ಯುಎಸ್‌ನಲ್ಲಿ ಹಲವಾರು ವಿಷಯಗಳು ನಡೆಯುತ್ತಿವೆ, ಆದ್ದರಿಂದ ಫೈನಲ್ ಬಗ್ಗೆ ಒತ್ತು ನೀಡುವುದು ಯೋಗ್ಯವಾಗಿದೆ ಎಂದು ನಾನು ಭಾವಿಸುವುದಿಲ್ಲ," ಎಂದಿದ್ದಾರೆ.

ಶ್ರೇಯಾಂಕ ರಹಿತ ಇಟಾಲಿಯನ್ ಮಾರ್ಟಿನಾ ಟ್ರೆವಿಸನ್ ತನ್ನ ಉತ್ತಮ ಪಂದ್ಯಾವಳಿ ಮತ್ತು 10 ಪಂದ್ಯಗಳ ಅಜೇಯ ಓಟವನ್ನು ಸೆಮಿಫೈನಲ್ ಸೋಲಿನೊಂದಿಗೆ ಕೊನೆಗೊಳಿಸಿದಳು. ಈ ಪಂದ್ಯದಲ್ಲಿ ನಾಲ್ಕು ಡಬಲ್ ಫಾಲ್ಟ್‌ಗಳನ್ನು ಪೂರೈಸಿದಳು ಮತ್ತು 36 ಅನಗತ್ಯ ತಪ್ಪುಗಳನ್ನು ಮಾಡಿದ್ದರಿಂದ ಸೋಲಬೇಕಾಯಿತು.

ಇನ್ನು ಕೊಕೊ ಗೌಫ್ ವೇಗದ ಆರಂಭವನ್ನು ಮಾಡಿದರು ಮತ್ತು ಆರಂಭಿಕ ಪ್ರಯೋಜನಕ್ಕಾಗಿ ಮೂರನೇ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದರು. ಎರಡೂ ಆಟಗಾರ್ತಿಯರ ರಾಕೆಟ್‌ಗಳಿಂದ ದೋಷಗಳು ಕಂಡುಬಂತು. ಆದರೆ ಕೊಕೊ ಗೌಫ್ ಮೂರು ನೇರ ಗೇಮ್‌ಗಳ ಓಟದೊಂದಿಗೆ ಸೆಟ್ ಅನ್ನು ಗೆದ್ದರು.

Story first published: Friday, June 3, 2022, 8:44 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X