ಫ್ರೆಂಚ್ ಓಪನ್: ಜೊಕೊವಿಕ್ vs ನಡಾಲ್: ದಿಗ್ಗಜರ ಸೆಣೆಸಾಟಕ್ಕೆ ವೇದಿಕೆ ಸಜ್ಜು

ಈ ಬಾರಿಯ ಫ್ರೆಂಚ್ ಓಪನ್‌ನ ಅತ್ಯಂತ ಕುತೂಹಲಕಾರಿ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ವಿಶ್ವದ ಎಲ್ಲಾ ಟೆನಿಸ್ ಪ್ರೇಮಿಗಳ ಚಿತ್ತ ಈಗ ಪ್ಯಾರಿಸ್‌ನ ಸ್ಟೇಡ್ ರೊಲ್ಯಾಂಡ್ ಗ್ಯಾರೋಸ್ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಟೆನಿಸ್ ಲೋಕದ ಇಬ್ಬರು ದಿಗ್ಗಜರಾದ ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನ ಕ್ವಾರ್ಟರ್‌ಫೈಬಲ್ ಹಂತದಲ್ಲಿ ಮುಖಾಮುಖಿಯಾಗಿದ್ದಾರೆ.

ಕ್ಲೇ ಕೋರ್ಟ್‌ನ ಕಿಂಗ್ ಎನಿಸಿರುವ ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ನಡುವಿನ ಈ ಕದನದಲ್ಲಿ ಗೆದ್ದ ಆಟಗಾರ ಈ ಬಾರಿಯ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ. ಹೀಗಾಗಿ ಈ ದಿಗ್ಗರ ಸ್ಪರ್ಧೆಯಲ್ಲಿ ಯಾರ ಹೋರಾಟ ಕ್ವಾರ್ಟರ್‌ಫೈನಲ್ ಹಂತಕ್ಕೆ ಮುಕ್ತಾಯವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ 2022: ತನ್ನದೇ ತಪ್ಪಿನಿಂದ ಚಾಂಪಿಯನ್ ಪಟ್ಟ ಕಳೆದುಕೊಂಡ ಆರ್‌ಆರ್: ರಾಜಸ್ಥಾನ್ ಸೋಲಿಗೆ 4 ಕಾರಣಗಳು!ಐಪಿಎಲ್ 2022: ತನ್ನದೇ ತಪ್ಪಿನಿಂದ ಚಾಂಪಿಯನ್ ಪಟ್ಟ ಕಳೆದುಕೊಂಡ ಆರ್‌ಆರ್: ರಾಜಸ್ಥಾನ್ ಸೋಲಿಗೆ 4 ಕಾರಣಗಳು!

ರಾಫೆಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ 17 ಬಾರಿ ಸ್ಪರ್ಧಿಸಿರುವ ಜೊಕೊವಿಕ್ 13 ಬಾರಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾ,್‌ನಲ್ಲಿ 109 ಗೆಲುವು ಸಾಧಿಸಿರುವ ನಡಾಲ್ ಸೋತಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಇಂಥಾ ಅದ್ಭುತ ದಾಖಲೆ ಹೊಂದಿರುವ ನಡಾಲ್ ಈ ಬಾರಿ ಮತ್ತೆ ಆವೆಯಂಗಳದಲ್ಲಿ ಮೋಡಿ ಮಾಡಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಫ್ರೆಂಚ್ ಓಪನ್‌ನಲ್ಲಿ ಈ ಇಬ್ಬರು ದಿಗ್ಗಜರು 2006ರಿಂದ ಮುಖಾಮುಖಿಯಾಗುತ್ತಿದ್ದಾರೆ. ಇದರಲ್ಲಿ ಎರಡು ಬಾರಿ ಮಾತ್ರ ನಿವಾಕ್ ಜೊಕೊವಿಕ್ ಗೆಲುವು ಸಾಧಿಸಿದ್ದಾರೆ. ಇದರಲ್ಲಿ 2021ರ ಸೆಮಿಫೈನಲ್ ಮುಖಾಮುಖಿ ಕೂಡ ಸೇರಿಕೊಂಡಿದೆ. ಉಳಿದ 7 ಮುಖಾಮುಖಿಯಲ್ಲಿ ರಾಫೆಲ್ ನಡಾಲ್ ಗೆದ್ದು ಬೀಗಿದ್ದಾರೆ.

ನಡಾಲ್ vs ಜೊಕೊವಿಕ್ ಕ್ವಾರ್ಟರ್‌ಫೈನಲ್ ಪಂದ್ಯ ಯಾವಾಗ: ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯ ಜೂನ್ 1 ಬುಧವಾರದಂದು ನಡೆಯಲಿದೆ. ಪ್ಯಾರಿಸ್‌ನಲ್ಲಿ ಈ ಪ್ರಬಲ ಪೈಪೋಟಿಯ ಪಂದ್ಯ ಆಯೋಜನೆಯಾಗಲಿದೆ.

IPL 2022: ಪ್ಲೇಆಫ್‌‍ನಲ್ಲಿ ಆರ್‌ಸಿಬಿ ಸೋಲಿಸಿದರೆ ಕಪ್ ಸಿಗುವುದಿಲ್ಲ; ಒಂದಲ್ಲ ಎರಡಲ್ಲ 5 ಬಾರಿ ಇದೇ ಕಥೆ!IPL 2022: ಪ್ಲೇಆಫ್‌‍ನಲ್ಲಿ ಆರ್‌ಸಿಬಿ ಸೋಲಿಸಿದರೆ ಕಪ್ ಸಿಗುವುದಿಲ್ಲ; ಒಂದಲ್ಲ ಎರಡಲ್ಲ 5 ಬಾರಿ ಇದೇ ಕಥೆ!

ಪಂದ್ಯದ ಸಮಯ: ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯ ಭಾರತೀಯ ಕಾಲಮಾನ ಬುಧವಾರ ಮಧ್ಯರಾತ್ರಿ 12:15ಕ್ಕೆ ಆರಂಭವಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಈ ರೋಚಕ ಪಂದ್ಯ ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಇನ್ನು ಸೋನಿ ಲಿವ್‌ನಲ್ಲಿ ಈ ಪಂದ್ಯ ಲೈವ್‌ಸ್ಟ್ರೀಮ್ ಆಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 30, 2022, 22:05 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X