ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್‌ ಓಪನ್‌ ಟೆನಿಸ್‌: ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಕೆರ್ಬರ್‌

French Open: Teenager stuns Angelique Kerber in first round

ಪ್ಯಾರಿಸ್‌, ಮೇ 26: ವಿಶ್ವದ ಮಾಜಿ ನಂ.1 ಆಟಗಾರ್ತಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌, ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲ್ಯಾಮ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ.

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿರುವ ಮೂರು ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡತಿ 31 ವರ್ಷದ ಕೆರ್ಬರ್‌, ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6-4, 6-2 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ರಷ್ಯಾದ ಯುವ ಪ್ರತಿಭೆ 18 ವರ್ಷದ ಅನಾಸ್ತೇಸಿಯಾ ಪೊಟಾಪೋವಾ ವಿರುದ್ಧ ಅಚ್ಚರಿಯ ಆಘಾತ ಅನುಭವಿಸಿದರು.

ಇದರೊಂದಿಗೆ ಫ್ರೆಂಚ್‌ ಓಪನ್‌ ಅಂಗಣದಲ್ಲಿ ಕೆರ್ಬರ್‌ ಒಟ್ಟು 6 ಬಾರಿ ಮೊದಲ ಸೊತ್ತಿನಲ್ಲೇ ಮುಗ್ಗರಿಸಿದಂತಾಗಿದೆ. ಪಾದದ ಗಾಯದ ಸಮಸ್ಯೆಯಿಂದ ಕಮ್‌ಬ್ಯಾಟ್‌ ಮಾಡಿದ್ದ ಕೆರ್ಬರ್‌, ಇದಕ್ಕೂ ಮುನ್ನ ಇಟಾಲಿಯನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಲ್ಲದೆ ಗಾಯದ ಸಮಸ್ಯೆ ಕಾರಣ ಮ್ಯಾಡ್ರಿಡ್‌ ಓಪನ್‌ನ 2ನೇ ಸುತ್ತಿನಲ್ಲಿ ನಿವೃತ್ತಿ ಹೊಂದಿದ್ದರು.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

"ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿತ್ತು. ಇದಕ್ಕಾಗಿ ನನ್ನ ಕೋಚ್‌ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ವಿಶ್ವದ 81ನೇ ಶ್ರೇಯಾಂಕಿತ ಆಟಗಾರ್ತಿ ಅನಾಸ್ತೇಸಿಯಾ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

"ಆಕೆ ಅತ್ಯುತ್ತಮ ಆಟವಾಡಿದಳು. ನನ್ನ ಶ್ರೇಷ್ಠ ಆಟವನ್ನಾಡಿದೆ. ಆದರೆ, ಟೂರ್ನಿಗೂ ಮುನ್ನ ಉತ್ತಮ ಸಿದ್ಧತೆ ನನ್ನದಾಗಿರಲಿಲ್ಲ. ಆದರೂ ಅಂಗಣಕ್ಕೆ ಇಳಿದು ಪಂದ್ಯವನ್ನು ಆಡಿರುವುದಕ್ಕೆ ಸಂತಸವಿದೆ,'' ಎಂದು ಸೋಲಿನ ಬಳಿಕ ತಮ್ಮ ಅನುಭವವನ್ನು ಕೆರ್ಬರ್‌ ಹಂಚಿಕೊಂಡಿದ್ದಾರೆ.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

ವಿಶ್ವದ ಅಗ್ರ 1ರ ಒಳಗಿನ ಆಟಗಾರ್ತಿ ಎದುರು ಇದೇ ಮೊದಲ ಬಾರಿ ಜಯ ದಾಖಲಿಸಿರುವ ಪೊಟಾಪೋವಾ ಮುಂದಿನ ಸುತ್ತಿನಲ್ಲಿ ಚೀನಾದ ಆಟಗಾರ್ತಿ ವ್ಯಾಂಗ್‌ ಯಫಾನ್‌ ಅಥವಾ ಜೆಕ್‌ ಗಣರಾಜ್ಯದ ಮಾರ್ಕೆಟಾ ವಾಂಡೊರೋಸೊವಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

Story first published: Sunday, May 26, 2019, 20:17 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X