ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊನೇ ಗಳಿಗೆಯಲ್ಲಿ ಅಂತಿಮಗೊಂಡ ಭಾರತದ ಟೆನಿಸ್ ಡಬಲ್ಸ್ ತಂಡ

India finalise doubles combination after Paes pull-out

ಪಾಲೆಂಬಂಗ್, ಆಗಸ್ಟ್ 17: ಭಾನುವಾರ (ಆಗಸ್ಟ್ 19) ಇಂಡೋನೇಷ್ಯಾದ ಜಕಾರ್ತಾದಲ್ಲಿ ಟೆನಿಸ್ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯುವುದರಲ್ಲಿದೆ. ಆದರೆ ಕ್ರೀಡಾಕೂಟಕ್ಕೆ ಅಂತಿಮ ಕ್ಷಣ ಅಂದರೆ 24 ಗಂಟೆ ಮುಂಚೆಯಷ್ಟೇ ಭಾರತದ ಟೆನಿಸ್ ಡಬಲ್ಸ್ ತಂಡ ಅಂತಿಮಗೊಂಡು ಅಚ್ಚರಿ ಮೂಡಿಸಿದೆ.

ಲಿಯಾಂಡರ್ ಪೇಸ್ ಅನುಪಸ್ಥಿತಿ ನಮಗೆ ದೊಡ್ಡ ಹೊಡೆತ: ಝೀಶನ್ ಆಲಿಲಿಯಾಂಡರ್ ಪೇಸ್ ಅನುಪಸ್ಥಿತಿ ನಮಗೆ ದೊಡ್ಡ ಹೊಡೆತ: ಝೀಶನ್ ಆಲಿ

ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿರುವ ತಂಡವೊಂದು ತಿಂಗಳಿಗಿಂತ ಮೊದಲೇ ಅದಕ್ಕಾಗಿ ತಯಾರಿ ನಡೆಸುತ್ತಿರುತ್ತೆ. ಸ್ಪರ್ಧೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು, ಆಡಲಿರುವ ಆಟಗಾರರನ್ನೂ ಏನಿಲ್ಲವೆಂದರೂ ಒಂದುವಾರ ಮುಂಚಿತವಾಗಿಯಾದರೂ ನಿರ್ಧರಿಸಲಾಗುತ್ತದೆ. ಆದರೆ ಏಷ್ಯನ್ ಗೇಮ್ಸ್ ಟೆನಿಸ್ ನಲ್ಲಿ ಭಾರತದ ಡಬಲ್ಸ್ ತಂಡದಲ್ಲಿ ಇಂಥವರು ಆಡಬೇಕೆಂದು ನಿರ್ಧಾರವಾಗಿತ್ತು ಶುಕ್ರವಾರ (ಆಗಷ್ಟ್ 17) ಸಂಜೆ.

ಭಾರತದ ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಇದಕ್ಕೆ ಕಾರಣ. ಡಬಲ್ಸ್ ಸ್ಪರ್ಧೆಗಾಗಿ ತನ್ನೊಂದಿಗೆ ಪರಿಣಿತ ಆಟಗಾರರನ್ನು ಆರಿಸಿಲ್ಲವೆಂದು ಪೇಸ್ ಕೊನೇ ಗಳಿಗೆಯಲ್ಲಿ ಜಕಾರ್ತಾ ಸ್ಪರ್ಧೆಯಿಂದ ದೂರ ಸರಿದಿದ್ದರು. ಇದರಿಂದ ಡಬಲ್ಸ್ ತಂಡದಲ್ಲಿ ಯಾರಿರಬೇಕೆಂದು ನಿರ್ಧರಿಸಲು ವಿಳಂಬವಾಯಿತು.

ಆದರೆ ಅಂತಿಮವಾಗಿ ಭಾರತ ಡಬಲ್ಸ್ ತಂಡ ನಿರ್ಧಾರವಾಗಿದೆ. ರೋಹನ್ ಭೋಪಣ್ಣ ಮತ್ತು ದಿವಿಜ್ ಶರಣ್ ಒಂದು ಡಬಲ್ಸ್ ತಂಡವಾದರೆ, ಪ್ರಜ್ಞೇಶ್ ಗುಣೇಶ್ವರನ್ ಅವರೊಂದಿಗೆ ಸಿಂಗಲ್ಸ್ ನಲ್ಲಿ ಆಡಲಿರುವ ರಾಮ್ ಕುಮಾರ್ ರಾಮನಾಥನ್ ಡಬಲ್ಸ್ ನಲ್ಲಿ ಸುಮಿತ್ ನಗಾಲ್ ಅವರೊಂದಿಗೆ ಜೊತೆಗೂಡಲಿದ್ದಾರೆ.

ಪುರುಷ ತಂಡದಲ್ಲಿ ಪೇಸ್ ಅನುಪಸ್ಥಿತಿ ಕಾಡಿದರೆ, ಮಹಿಳಾ ತಂಡದಲ್ಲಿ ಸಾನಿಯಾ ಮಿರ್ಝಾ ಅವರ ಅನುಪಸ್ಥಿತಿ ಕಾಡಿದೆ. ಹೀಗಾಗಿ ಇಲ್ಲೂ ಸಿಂಗಲ್ಸ್ ಸ್ಪೆಶಾಲಿಸ್ಟ್ ಗಳು ಡಬಲ್ಸ್ ನಲ್ಲೂ ಪಾಲ್ಗೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಮಿಶ್ರ ಡಬಲ್ಸ್ ನಲ್ಲಿ ಅಂಕಿತಾ ರೈನಾ ಅವರು ರೋಹನ್ ಬೋಪಣ್ಣಾಗೆ ಜೊತೆಯಾದರೆ, ಕರ್ಮಾನ್ ಕೌರ್ ಅವರು ಶರಣ್ ಅವರಿಗೆ ಜೋಡಿಯಾಗಲಿದ್ದಾರೆ.

Story first published: Saturday, August 18, 2018, 20:25 [IST]
Other articles published on Aug 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X