ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇದು ನನ್ನ ಅಂತಿಮ ಸೀಸನ್: ನಿವೃತ್ತಿ ಬಗ್ಗೆ ಘೋಷಣೆ ಮಾಡಿದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ

India Tennis ace Sania Mirza announces retirement plans said 2022 will be last season

ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಆಸ್ಟ್ರೇಯನ್ ಓಪನ್‌ನ ಮಹಿಲೆಯರ ಡಬಲ್ಸ್‌ನಲ್ಲಿ ಭಾಗವಹಿಸಿದ ಸಾನಿಯಾ ಮಿರ್ಜಾ ಮೊಸಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದರು. ಈ ಸೋಲಿನ ಬಳಿಕ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದಾರೆ. 2022ರ ಟೆನಿಸ್ ಋತು ತನ್ನ ಕೊನೇಯ ಋತುವಾಗಿರಲಿದೆ. ಈ ಋತುವನ್ನು ಸಂಪೂರ್ಣಗೊಳಿಸಿದ ಬಳಿಕ ನಿವೃತ್ತರಾಗುವುದಾಗಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

"ನಾನು ಇದು ನನ್ನ ಕೊನೇಯ ಋತು ಎಂದು ನಿರ್ಧರಿಸಿದ್ದೇನೆ. ನಾನು ಇದನ್ನು ವಾರದಿಂದ ವಾರಕ್ಕೆ ಮುಂದುವರಿಯಲು ಬಯಸುತ್ತೇನೆ. ಈ ಋತುವನ್ನು ನಾನು ಕೊನೆಯಗೊಳಿತ್ತೇನೆಯೋ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಆ ಬಯಕೆ ನನಗಿದೆ" ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!

ಸಾನಿಯಾ ಮಿರ್ಜಾ ತಮ್ಮ 6ನೇ ವಯಸ್ಸಿನಿಂದ ಟೆನಿಸ್ ಆಡಲು ಆರಂಭಿಸಿದ್ದರು. 2003ರಲ್ಲಿ ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಅದಾದ ಬಳಿಕ ಭಾರತೀಯ ಟೆನ್ನಿಸ್ ಲೋಕದ ಸೂಪರ್‌ಸ್ಟಾರ್ ಆಗಿ ಮಿಂಚಿದರು ಸಾನಿಯಾ ಮಿರ್ಜಾ. ಹೈದರಾಬಾದ್ ಮೂಲದ ಈ ಆಟಗಾರ್ತಿ ಭಾರತದ ಪರವಾಗಿ ಅನೇಕ ಗ್ರ್ಯಾಂಡ್‌ ಸ್ಲ್ಯಾಮ್‌ಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಈ ಸಾಧನೆಯಿಂದಾಗಿ ಕೇವಲ ಟೆನಿಸ್ ಲೋಕದ ಸೂಪರ್ ಸ್ಟಾರ್ ಆಗಿ ಮಾತ್ರವೇ ಮೆರೆಯಲಿಲ್ಲ. ದೇಶದ ಕ್ರೀಡಾ ಐಕಾನ್ ಆಗಿ ಸಾನಿಯಾ ಮನೆ ಮಾತಾದರು.

2009ರಲ್ಲಿ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ವಿಜಯ: ಸಾನಿಯಾ ಮಿರ್ಜಾ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದು 2009ರಲ್ಲಿ. ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ ಜೊತೆಗೆ ಆಡಿದ ಸಾನಿಯಾ ಪ್ರಶಸ್ತಿ ಗೆದ್ದುಕೊಂಡಿದ್ದರು.

2012ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್: ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ಗ್ರ್ಯಾಂಡ್ಸ್ಲ್ಯಾಮ್ ಟ್ರೋಫಿಗೆ ಮುತ್ತಿಕ್ಕಿದ ಮೂರು ವರ್ಷದ ಬಳಿಕ ಫ್ರೆಂಚ್ ಓಪನ್‌ನಲ್ಲಿಯೂ ಟೈಟಲ್ ಗೆದ್ದುಕೊಂಡರು ಸಾನಿಯಾ. ಈ ಬಾರಿಯೂ ಸಾನಿಯಾಗೆ ಜೊತೆಯಾಗಿ ಮಹೇಶ್ ಭೂಪತಿಯಿದ್ದರು.

ಟೀಮ್ ಇಂಡಿಯಾಗೆ ಗೆಲ್ಲುವ ನಂಬಿಕೆ ಹೆಚ್ಚಿರುವುದು ಆ ಒಬ್ಬನಿಂದಲೇ ಎಂದ ನಾಯಕ ಕೆಎಲ್ ರಾಹುಲ್ಟೀಮ್ ಇಂಡಿಯಾಗೆ ಗೆಲ್ಲುವ ನಂಬಿಕೆ ಹೆಚ್ಚಿರುವುದು ಆ ಒಬ್ಬನಿಂದಲೇ ಎಂದ ನಾಯಕ ಕೆಎಲ್ ರಾಹುಲ್

2014ರಲ್ಲಿ ಯುಎಸ್ ಓಪನ್: ಸಾನಿಯಾ ಮಿರ್ಜಾ ತಮ್ಮ ಮೂರನೇ ಗ್ರ್ಯಾಂಡ್‌ ಸ್ಲ್ಯಾಮ್ ಗೆದ್ದುಕೊಂಡಿದ್ದು 2014ರಲ್ಲಿ. ಈ ಬಾರಿ ಸಾನಿಯಾಗೆ ಮಿಶ್ರ ಡಬಲ್ಸ್‌ನಲ್ಲಿ ಸಾಥ್ ನೀಡಿದ್ದು ಬ್ರೆಜಿಲ್‌ನ ಬ್ರುನೋ ಸೋಯೆರ್ಸ್.

ಮಾರ್ಟಿನಾ ಹಿಂಗಿಸ್ ಜೊತೆಗೆ ಸಾಲು ಸಾಲು ಸಾಧನೆ: 2015ರಲ್ಲಿ ಸಾನಿಯಾ ಡಬಲ್ಸ್ ವಿಭಾಗದಲ್ಲಿ ಸ್ವಿಜಲ್ಯಾಂಡ್ ದಿಗ್ಗಜ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಕಣಕ್ಕಿಳಿದರು. ಈ ಜೋಡಿಗೆ ಯಶಸ್ಸಿನ ಮೇಲೆ ಯಶಸ್ಸು ದೊರೆಯಿತು. ಒಂದರ ಹೊಂದೊಂದರಂತೆ ಡಬಲ್ಸ್ ಟೈಟಲ್‌ಗಳನ್ನು ಈ ಜೋಡಿ ಗೆದ್ದುಕೊಂಡಿತು. ಮೊದಲಿಗೆ 2015ರಲ್ಲಿ ವಿಂಬಲ್ಡನ್ ಡಬಲ್ಸ್ ಟೂಟಲ್ ಗೆದ್ದ ಈ ಜೋಡಿ ನಂತರ 2015ರ ಯುಎಸ್ ಓಪನ್‌ನ ಡಬಲ್ಸ್‌ನಲ್ಲಿಯೂ ಪ್ರಶಸ್ತಿ ಗಳಿಸಿದರು. ನಂತರ 2016ರ ಆಸ್ಟ್ರೇಲಿಯನ್ ಓಪನ್‌ನಲ್ಲಿಯೂ ಡಬಲ್ಸ್ ಟೈಟಲ್ ಮುಡಿಗೇರಿಸಿಕೊಂಡ ಈ ಜೋಡಿ ಹ್ಯಾಟ್ರಿಕ್ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದರು.

ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಮೊದಲಾರ್ಧದಲ್ಲಿ ಸಮರ್ಥ ಸಿಂಗಲ್ಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಆದರೆ 2013ರಲ್ಲಿ ಮೋಣಕೈ ಗಾಯಕ್ಕೆ ತುತ್ತಾದ ಸಾನಿಯಾ ಬಳಿಕ ಕೇವಲ ಡಬಲ್ಸ್ ವಿಭಾಗದತ್ತ ಗಮನಹರಿಸಿದರು. ಇದಕ್ಕೂ ಮುನ್ನ 2007ರಲ್ಲಿ ಸಾನಿಯಾ ಮಿರ್ಜಾ ಸಿಂಗಲ್ಸ್‌ನಲ್ಲಿ ತಮ್ಮ ಅತ್ಯುನ್ನತ 27ನೇ ಶ್ರೇಯಾಂಕವನ್ನು ಗಳಿಸಿದ್ದರು. ಇದು ಭಾರತೀಯ ಟೆನಿಸ್ ಆಟಗಾರರ ಪೈಕಿ ಸಿಂಗಲ್ಸ್ ವಿಭಾಗದ ಅತ್ಯುತ್ತಮ ಸಾಧನೆಯೂ ಹೌದು.

Story first published: Wednesday, January 19, 2022, 15:48 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X