ಒಸ್ಟ್ರಾವಾದಲ್ಲಿ 2021ರ ಸೀಸನ್‌ನ ಚೊಚ್ಚಲ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಝಾ

ಒಸ್ಟ್ರಾವಾ: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ 2021ರ ಸೀಸನ್‌ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. ಒಸ್ಟ್ರಾವಾ ಓಪನ್‌ನಲ್ಲಿ ಪಾಲ್ಗೊಂಡಿದ್ದ ಸಾನಿಯಾ ಮಹಿಳಾ ಡಬಲ್ಸ್‌ನಲ್ಲಿ ತನ್ನ ಜೊತೆಗಾತಿ ಚೀನಾದ ಜಾಂಗ್ ಶುವಾಯ್ ಜೊತೆ ಸೇರಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

ಭಾನುವಾರ (ಸೆಪ್ಟೆಂಬರ್ 26) ನಡೆದ ಮಹಿಳಾ ಡಬಲ್ಸ್ ಫೈನಲ್‌ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಝಾ ಮತ್ತು ಜಾಂಗ್ ಶುವಾಯ್ ಜೋಡಿ ಕೈಟ್ಲಿನ್ ಕ್ರಿಶ್ಚಿಯನ್ (ಯುಎಸ್‌ಎ) ಮತ್ತು ಎರಿನ್ ರೌಟ್ಲಿಫ್ (ನ್ಯೂಜಿಲೆಂಡ್) ಎದುರು 6-3, 6-2ರ ಅಂತರದ ಗೆಲುವು ದಾಖಲಿಸಿದ್ದಾರೆ.

ಸಾನಿಯಾ-ಶುವಾಯ್ ಮತ್ತು ಕ್ರಿಶ್ಚಿಯನ್ ಮತ್ತು ಎರಿನ್ ರೌಟ್ಲಿಫ್ ಮಧ್ಯೆ 1 ಗಂಟೆ 4 ನಿಮಿಷಗಳ ಕಾಳಗ ನಡೆಯಿತು. ಇಂಡೋ-ಚೀನಾ ಜೋಡಿ ಅಮರಿಕನ್-ನ್ಯೂಜಿಲೆಂಡ್ ಜೋಡಿಯ ವಿರುದ್ಧ ಆರಂಭದಿಂದಲೂ ಉತ್ತಮ ಆಟ ನೀಡಿತು. ಹೀಗಾಗಿಯೇ ಇಂಡೋ-ಚೀನಾ ಜೋಡಿ ನೇರ ಸೆಟ್ ಜಯ ದಾಖಲಿಸಿದೆ.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

34ರ ಹರೆಯದ ಸಾನಿಯಾ ಮತ್ತು ಶುವಾಯ್ ಜೋಡಿ WTA 500 ಸೆಮಿಫೈನಲ್‌ನಲ್ಲಿ ಚೀನಾ ಜೋಡಿಯನ್ನು 6-2 7-5ರ ಅಂತರಿದಿಂದ ಸೋಲಿಸಿತ್ತು. ಡಬಲ್ಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಾನಿಯಾ ಮಾಜಿ ವಿಶ್ವ ನಂ.1 ಆಟಗಾರ್ತಿ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 26, 2021, 20:04 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X