ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್‌ ಓಪನ್ ನಡೆಯುವುದು ಅನುಮಾನ ಎಂದ ರಾಫೆಲ್ ನಡಾಲ್

“It’s Not An Ideal Situation” – Rafael Nadal Unsure About Us Open 2020

ಕೊರೊನಾ ವೈರಸ್‌ನ ನಂತರ ಟೆನಿಸ್ ತಾರೆ ರಾಫೆಲ್ ನಡಾಲ್ ಮತ್ತೆ ಅಭ್ಯಾಸವನ್ನು ಆರಂಭಿಸಿದ್ದಾರೆ. ತನ್ನ 20ನೇ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿ ಗೆಲುವಿಗೆ ನಡಾಲ್ ಸಿದ್ಧತೆಯನ್ನು ಆರಂಭಿಸಿದ್ದಾರೆ. ಆದರೆ ತನ್ನ 20ನೇ ಗ್ರಾಂಡ್‌ ಸ್ಲಾಮ್ ಯುಎಸ್ ಓಪನ್ ಆಗಿರುವುದಿಲ್ಲ ಎಂದು ನಡಾಲ್ ಹೇಳಿದ್ದಾರೆ. ಕೊರೊನಾ ವೈರಸ್‌ ಯುನೈಟೆಡ್ ಸ್ಟೇಟ್ಸ್ ಮೇಲೆ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಿರುವುದರಿಂದ ನಾನಿನ್ನೂ ಅದಕ್ಕಾಗಿ ಸಿದ್ದತೆ ನಡೆಸಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿ ಯುಎಸ್ ಓಪನ್ ನಡೆಯುವ ಸಂಭವ ಇಲ್ಲ ಎಂದು ನಡಾಲ್ ಅಭಿಪ್ರಾಯಪಟ್ಟಿದ್ದಾರೆ. ಲೈವ್‌ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ನಡಾಲ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಯೋಜಕರು ಈ ಬಗ್ಗೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.

ಚಾಂಪಿಯನ್ಸ್ ಲೀಗ್ ಫೈನಲ್‌ ಆತಿಥ್ಯ: ಅಂತಿಮ ರೇಸ್‌ನಲ್ಲಿ ಜರ್ಮನಿ, ಪೋರ್ಚುಗಲ್ಚಾಂಪಿಯನ್ಸ್ ಲೀಗ್ ಫೈನಲ್‌ ಆತಿಥ್ಯ: ಅಂತಿಮ ರೇಸ್‌ನಲ್ಲಿ ಜರ್ಮನಿ, ಪೋರ್ಚುಗಲ್

ಮುಂದಿನ ಗ್ರಾಂಡ್‌ ಸ್ಲಾಮ್ ಯುಎಸ್ ಓಪನ್ ನಡೆಯುತ್ತದೆಯೇ ಎಂದು ನನ್ನನ್ನು ಕೇಳಿದರೆ ಇಲ್ಲ ಎಂದೇ ಹೇಳುತ್ತೇನೆ. ಕೊರೊನಾ ವೈರಸ್‌ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ಹೇಗಿರಲಿದೆ ಎಂದು ಹೇಳಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ಸಂಪೂರ್ಣ ಸುರಕ್ಷಿತವಾಗಿರುವವರೆಗೆ ಆಟಕ್ಕೆ ವಾಪಾಸಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಆಟಗಾರರೂ ಸುರಕ್ಷಿತ ಸಂದರ್ಭಗಳಲ್ಲಿ ಮಾತ್ರವೇ ಟೂರ್ನಿಗಳಲ್ಲಿ ಭಾಗವಹಿಸಲು ಪ್ರಯಾಣಿಸಬಹುದು. ಎಂದು ಹೇಳಿದ್ದಾರೆ. ಟೆನಿಸ್ ಸೇರಿದಂತೆ ಬಹುತೇಕ ಎಲ್ಲಾ ಕ್ರೀಡೆಗಳು ಕಳೆದ ಮಾರ್ಚ್‌ನಿಂದ ಸ್ಥಗಿತವಾಗಿದೆ.

ಟಿ20 ವಿಶ್ವಕಪ್ ಆಯೋಜನಾ ಸಮಯದ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯೆಟಿ20 ವಿಶ್ವಕಪ್ ಆಯೋಜನಾ ಸಮಯದ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯೆ

ಎಟಿಪಿ ಡಬ್ಲ್ಯುಟಿಎ ಪ್ರವಾಸಗಳನ್ನು ಕನಿಷ್ಠ ಜುಲೈ ಅಂತ್ಯದವರೆಗೂ ಸ್ಥಗಿತಗೊಳಿಸಲಾಗಿದೆ. ಕಳೆದ 75ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಂಬಲ್ಡನ್ ರದ್ದುಗೊಂಡಿದೆ. ಈಗ ಆಸ್ಟ್ರೇಲಿಯನ್ ಓಪನ್ ನಡೆಯುವ ಬಗ್ಗೆಯೂ ನಡಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಟೆನಿಸ್‌ನಿಂದ ಸಂಪೂರ್ಣ ದೂರವಿದ್ದ ನಡಾಲ್ ಈಗ ಲಘು ಅಭ್ಯಾಸವನ್ನು ಆರಂಭಿಸಿದ್ದಾರೆ.

Story first published: Saturday, June 6, 2020, 10:14 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X