ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಖೇಲ್ ರತ್ನ ಪ್ರಶಸ್ತಿ ವಿವಾದ : ಸಾನಿಯಾ ಮಿರ್ಜಾ ಗೆ ನೋಟಿಸ್

By Mahesh

ಬೆಂಗಳೂರು, ಆಗಸ್ಟ್ 26: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದನ್ನು ಪ್ರಶ್ನಿಸಿದ್ದ ಲಂಡನ್ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಕನ್ನಡಿಗ ಎಚ್.ಎನ್. ಗಿರೀಶ್ ಅವರಿಗೆ ತಾತ್ಕಾಲಿಕ ಜಯ ಸಿಕ್ಕಿದೆ. ಸಾನಿಯಾ ಮಿರ್ಜಾ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಾನಿಯಾ ಮಿರ್ಜಾ ಅವರನ್ನು ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಹಾಗೂ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಎಚ್.ಎನ್. ಗಿರೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಾನಿಯಾ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆಯ್ಕೆ ಪಟ್ಟಿಯನ್ನು ಮರುಪರಿಶೀಲಿಸುವಂತೆ ಗಿರೀಶ್ ಅವರ ಕೋಚ್ ಮನವಿ ಮಾಡಿದ್ದರೂ ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿರಲಿಲ್ಲ. [ಬೆಳ್ಳಿ ಗೆದ್ದ ಕನ್ನಡಿಗ ಗಿರೀಶ್ ]

Karnataka HC stays Rajiv Gandhi Khel Ratna award to Sania Mirza


ಅಥ್ಲೆಟಿಕ್ಸ್ ​ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ತಮ್ಮ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಆದರೆ ಆಯ್ಕೆ ಸಮಿತಿ ಪ್ರಶಸ್ತಿಗೆ ನಿಗದಿಗೊಳಿಸಿದ್ದ ಸಾಧನೆ ಪಟ್ಟಿಯಲ್ಲಿಲ್ಲದ ಸಾನಿಯಾರನ್ನು ಆಯ್ಕೆ ಮಾಡಲಾಗಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ. ಆಗಸ್ಟ್ 29ರ ಕ್ರೀಡಾ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ತಡೆಯಾಜ್ಞೆ ನೀಡಬೇಕು ಎಂದು ಗಿರೀಶ್ ಅರ್ಜಿ ಸಲ್ಲಿಸಿದ್ದರು. [ಅರ್ಜುನ ಪ್ರಶಸ್ತಿಗೆ ಗಿರೀಶ್, ಮಮತಾ]

ಫೆ.24 ರಂದು ಕೇಂದ್ರ ಸರ್ಕಾರ ಖೇಲ್​ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದಾಗ ಗಿರೀಶ್ ತಮ್ಮ ಅರ್ಜಿ ಸಲ್ಲಿಸಿದ್ದರು. 2011 ರಿಂದ 2014ರವರೆಗಿನ ಅವಧಿಯಲ್ಲಿ ಒಟ್ಟು 90 ಅಂಕ (2012ರ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆಗೆ 70 ಅಂಕ, 2014ರ ಏಷ್ಯನ್ ಗೇಮ್ಸ್​ನ ಕಂಚಿನ ಸಾಧನೆಗೆ 20 ಅಂಕ) ಗಳಿಸಿದ್ದರು.

ದೇಶದ ಉಳಿದ ಯಾವ ಅಥ್ಲೀಟ್ ಕೂಡ ಇಷ್ಟು ಅಂಕ ಗಳಿಸಿರಲಿಲ್ಲ. ಆದರೆ, 2015 ಜುಲೈ 31ರಂದು ರಚನೆಯಾಗಿದ್ದ ಕೇರಳ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಾಲಿ ಅವರ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಈ ಅಂಕಗಳನ್ನು ಪರಿಗಣಿಸದೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದನ್ನು ಕೇಂದ್ರ ಸರ್ಕಾರ ಪರಿಗಣಿಸಿತ್ತು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X