ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

25 ಲಕ್ಷ ರು. ಬಹುಮಾನಕ್ಕೆ ಭಾಜನರಾಗಲಿದ್ದಾರಾ ಪೇಸ್?

ಅಂಟಾಲ್ಯ ಟೆನಿಸ್ ಟೂರ್ನಿಯ ಫೈನಲ್ ಗೆ ಕಾಲಿಟ್ಟಿರುವ ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್. ಬುಧವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು.

ಅಂಟಾಲ್ಯ (ಟರ್ಕಿ), ಜೂನ್ 29: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು, ಇಲ್ಲಿ ನಡೆಯುತ್ತಿರುವ ಅಂಟಾಲ್ಯ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದು, ಸುಮಾರು 25 ಲಕ್ಷ ರು. ಮೊತ್ತದ ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಏಗಾನ್ ಎಟಿಪಿ ಚಾಲೆಂಜರ್ಸ್ ಗೆದ್ದ ಲಿಯಾಂಡರ್ ಪೇಸ್ಏಗಾನ್ ಎಟಿಪಿ ಚಾಲೆಂಜರ್ಸ್ ಗೆದ್ದ ಲಿಯಾಂಡರ್ ಪೇಸ್

ಮಂಗಳವಾರ ರಾತ್ರಿ ನಡೆದ ಈ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಟೂರ್ನಿಯ 4ನೇ ಶ್ರೇಯಾಂಕಿತ ಜೋಡಿಯಾದ ಲಿಯಾಂಡರ್ ಪೇಸ್ ಹಾಗೂ ಆದಿಲ್ ಶಮಶ್ದಿನ್ (ಕೆನಡಾ), ಅರ್ಜೆಂಟೀನಾದ ಕಾರ್ಲೋಸ್ ಬೆರ್ಲಾಕ್ ಹಾಗೂ ಪೋರ್ಚುಗಲ್ ಜವಾವೊ ಸೌಸಾ ಜೋಡಿ ವಿರುದ್ಧ 6-1, 6-2 ಸೆಟ್ ಗಳ ಅಂತರದಲ್ಲಿ ಮಣಿಸಿ, ಫೈನಲ್ ಗೆ ಕಾಲಿಟ್ಟಿತು.

Leander Paes in semi-finals of Antalya Open

ಈ ವಿಭಾಗದಲ್ಲಿ ಜಯ ಗಳಿಸಿದವರಿಗೆ 50 ಲಕ್ಷ ರು. ಬಹುಮಾನವಿದ್ದು, ಫೈನಲ್ ಪಂದ್ಯ ಸೋತವರು ಅಂದಾಜು 26 ಲಕ್ಷ ರು.ಗಳ ನಗದು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಹಾಗಾಗಿ, ಪೇಸ್ ಜೋಡಿ ಈ ಫೈನಲ್ ಪಂದ್ಯ ಗೆದ್ದರೆ, ತಲಾ 25 ಲಕ್ಷ ರು. ಗಳಿಸಬಹುದಾಗಿದೆ.

ಮಂಗಳವಾರವೇ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರವ್ ರಾಜಾ ಹಾಗೂ ಡಿವಿಜ್ ಶರಣ್ ಜೋಡಿ ವೀರೋಚಿತ ಸೋಲು ಕಂಡಿದೆ. ಭಾರೀ ರೋಚಕವಾಗಿದ್ದ ಈ ಪಂದ್ಯದಲ್ಲಿ ಭಾರತದ ಜೋಡಿ, ಆಸ್ಟ್ರಿಯಾದ ಒಲಿವರ್ ಮರಾಕ್ ಹಾಗೂ ಕ್ರೊವೇಷಿಯಾದ ಮ್ಯಾಟೆ ಪೇವಿಕ್ ಜೋಡಿ ವಿರುದ್ಧ 6-7 (9-11), 7-6 (7-4) ಹಾಗೂ 4- 10 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X