ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಲಿಯಾಂಡರ್ ಪೇಸ್ ಅನುಪಸ್ಥಿತಿ ನಮಗೆ ದೊಡ್ಡ ಹೊಡೆತ: ಝೀಶನ್ ಆಲಿ

Leander’s absence is big blow for us, says India coach Zeeshan Ali

ಜಕಾರ್ತಾ, ಆಗಸ್ಟ್ 17: ಇಂಡೋನೇಷ್ಯಾದಲ್ಲಿ ನಡೆಯಲಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅನುಪಸ್ಥಿತಿ ನಮಗೆ (ಭಾರತೀಯರಿಗೆ) ದೊಡ್ಡ ಹೊಡೆತ ನೀಡಲಿದೆ ಎಂದು ಟೆನಿಸ್ ತಂಡದ ನಾಯಕ ಮತ್ತು ತರಬೇತುದಾರ ಝೀಶನ್ ಆಲಿ ಹೇಳಿದ್ದಾರೆ.

ಯುಎಇಗೆ ಏಷ್ಯಾ ಕಪ್ ಆತಿಥ್ಯ ಹಸ್ತಾಂತರಿಸಿದ ಬಿಸಿಸಿಐಯುಎಇಗೆ ಏಷ್ಯಾ ಕಪ್ ಆತಿಥ್ಯ ಹಸ್ತಾಂತರಿಸಿದ ಬಿಸಿಸಿಐ

ಡಬಲ್ಸ್ ಗಾಗಿ ತನ್ನೊಂದಿಗೆ ಪರಿಣಿತ ಆಟಗಾರನನ್ನು ಆರಿಸಿಲ್ಲವೆಂದು ಬೇಸರಗೊಂಡು ಲಿಯಾಂಡರ್ ಪೇಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದರಿಂದ ಭಾರತದ ಟೆನಿಸ್ ವಿಭಾಗಕ್ಕೆ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನಲ್ಲಿ ಹಿನ್ನಡೆಯಾಗುವ ಸಂಭವವಿದೆ ಎಂಬುದು ಆಲಿ ಆತಂಕ.

'ನಾನು ಪೇಸ್ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವರು ಒಪ್ಪಲಿಲ್ಲ. ಅವರ ಅನುಪಸ್ಥಿತಿ ನಿರಾಸೆ ಮೂಡಿಸಿದೆ. ಆದರೂ ಡಬಲ್ಸ್ ಗಾಗಿ ತಂಡವನ್ನು ಸಜ್ಜುಗೊಳಿಸುವತ್ತ ಗಮನ ಹರಿಸುತ್ತಿದ್ದೇನೆ' ಎಂದು ಶುಕ್ರವಾರ (ಆ.17) ತರಬೇತಿ ಅವಧಿಯಲ್ಲಿದ್ದ ಝೀಶನ್ ಹೇಳಿದರು.

ಚತುಷ್ಕೋನ ಸರಣಿಯ ಎರಡು ಪಂದ್ಯಗಳು ಮಳೆಗೆ ಆಹುತಿಚತುಷ್ಕೋನ ಸರಣಿಯ ಎರಡು ಪಂದ್ಯಗಳು ಮಳೆಗೆ ಆಹುತಿ

ಸಿಂಗಲ್ಸ್ ಸ್ಪೆಷಾಲಿಷ್ಟ್ ಗಳಾದ ರಾಮ್ ಕುಮಾರ್ ರಾಮನಾಥನ್ ಅಥವಾ ಸುಮಿತ್ ನಗಾಲ್ ಪೇಸ್ ಗೆ ಜೊತೆಯಾಗುವುದರಲ್ಲಿದ್ದರು. ಆದರೆ ಈಗ 18 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಲಿಯಾಂಡರ್ ಅವರೇ ಸ್ಪರ್ಧೆಗಿಲ್ಲ. ಹೀಗಾಗಿ ಸಿಂಗಲ್ಸ್ ವಿಭಾಗದ ರಾಮ್ ಕುಮಾರ್, ಪ್ರಜ್ಞೇಶ್ ಗುಣೇಶ್ವರನ್, ಅಂಕಿತ್ ರೈನಾ ಮತ್ತು ಕರ್ಮನ್ ಕೌರ್ ಅವರೇ ಡಬಲ್ಸ್ ನಲ್ಲಿ ಪಾಲ್ಗೊಳ್ಳಬೇಕಾಗಿದೆ.

Story first published: Saturday, August 18, 2018, 19:30 [IST]
Other articles published on Aug 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X