ದೇಶದ ಹೆಮ್ಮೆಯ ಕ್ರೀಡಾಪಟು: ಭಾರತೀಯ ಟೆನ್ನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್

ಕ್ರೀಡಾಲೋಕದಲ್ಲಿ ಒಂದು ಪೀಳಿಗೆಯನ್ನು ಒಂದು ಕ್ರೀಡೆಯತ್ತ ಆಕರ್ಷಿಸುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ಆಟಗಾರರ ಪೈಕಿ ಲಿಯಾಂಡರ್ ಪೇಸ್ ಕೂಡ ಒಬ್ಬರು. ಕ್ರಿಕೆಟ್‌ನಲ್ಲಿ ಸಚಿನ್, ಹಾಕಿಯಲ್ಲಿ ಧ್ಯಾನ್‌ಚಂದ್ ಚೆಸ್‌ನಲ್ಲಿ ವಿಶ್ವನಾಥನ್ ಆನಂದ್ ಕ್ರೀಡಾಲೋಕದಲ್ಲಿ ಮೆರೆದಾಡಿಸಿದಂತೆಯೇ ಲಿಯಾಂಡರ್ ಪೇಸ್ ಭಾರತವನ್ನು ಟೆನ್ನಿಸ್ ಕೋರ್ಟ್‌ನಲ್ಲಿ ಹೆಮ್ಮೆಯಿಂದ ಬೀಗುವಂತೆ ಮಾಡಿದ ಆಟಗಾರ.

ಬರೊಬ್ಬರಿ 30 ವರ್ಷಗಳ ವೃತ್ತಿಜೀವನವನ್ನು ಈ ವರ್ಷ ಅಂತ್ಯಗೊಳಿಸುವ ನಿರ್ಧಾರವನ್ನು 2019ರ ವರ್ಷಾಂತ್ಯದಲ್ಲಿ ಘೋಷಿಸಿದ್ದಾರೆ . ಏಳು ಒಲಿಂಪಿಕ್ಸ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹೆಮ್ಮೆಯ ಆಟಗಾರ ಲಿಯಾಂಡರ್ ಪೇಸ್. ಇದರ ಜೊತೆಗೆ ಭಾರತಕ್ಕೆ ಟೆನ್ನಿಸ್‌ನಲ್ಲಿ ಒಲಿಂಪಿಕ್ಸ್ ಪದಕವನ್ನೂ ತಂದುಕೊಟ್ಟ ಸಾಧನೆ ಮಾಡಿದ್ದಾರೆ.

ಪ್ರತಿಷ್ಠಿತ ಡೆವಿಸ್‌ ಕಪ್‌ನಲ್ಲಿ ಲಿಯಾಂಡರ್ ಪೇಸ್ ಸತತ 43 ಗೆಲುವುಗಳನ್ನು ಸಾಧಿಸಿದ ವಿಶಿಷ್ಠ ದಾಖಲೆಯನ್ನು ಮಾಡಿದ್ದಾರೆ. 8 ಗ್ರ್ಯಾಂಡ್‌ಸ್ಲ್ಯಾಮ್ ಪುರುಷರ ಡಬಲ್ಸ್ ಪ್ರಶಸ್ತಿ, 10 ಗ್ರ್ಯಾಂಡ್ ಸ್ಲ್ಯಾಮ್ ಮಿಶ್ರ ಪ್ರಶಸ್ತಿಯನ್ನು ಪಡೆದು ಮಿಂಚಿದ್ದಾರೆ. ಒಟ್ಟಾರೆಯಾಗಿ 750ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೆಲುವುಗಳನ್ನು ಸಾಧಿಸಿದ ಹೆಮ್ಮೆಯ ಕ್ರೀಡಾಪಟು ಲಿಯಾಂಡರ್ ಪೇಸ್.

ಲಿಯಾಂಡರ್ ಪೇಸ್ ತಮ್ಮ ಟೆನ್ನಿಸ್ ವೃತ್ತಿಜೀವನವನ್ನು ಆರಂಭಿಸಿದ್ದು 1991ರಲ್ಲಿ. ಅಲ್ಲಿಂದ ನಿರಂತರವಾಗಿ ಟೆನ್ನಿಸ್ ಅಂಗಳದಲ್ಲಿ ಸಾಧನೆಯ ಮೇಲೆ ಸಾಧನೆಯನ್ನು ಮಾಡುತ್ತಾ ಬರೊಬ್ಬರಿ 30 ವರ್ಷಗಳನ್ನು ಟೆನ್ನಿಸ್ ಅಂಗಳದಲ್ಲಿ ಕಳೆದಿದ್ದಾರೆ. ಡಬಲ್ಸ್ ವಿಭಾಗದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

ಲಿಯಾಂಡರ್ ಪೇಸ್ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು:

ಆಸ್ಟ್ರೇಲಿಯಾ ಓಪನ್: 2012

ಫ್ರೆಂಚ್ ಓಪನ್: 1999, 2001, 2009

ವಿಂಬಲ್ಡನ್: 1999

ಅಮೆರಿಕನ್ ಓಪನ್: 2006, 2009, 2013

ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು:

ಆಸ್ಟ್ರೇಲಿಯಾ ಓಪನ್: 2003, 2010, 2015

ಫ್ರೆಂಚ್ ಓಪನ್: 2016

ವಿಂಬಲ್ಡನ್: 1999, 2003, 2010, 2015

ಅಮೆರಿಕನ್ ಓಪನ್: 2008, 2015

For Quick Alerts
ALLOW NOTIFICATIONS
For Daily Alerts
Story first published: Friday, August 14, 2020, 21:24 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X