ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ

Rafael nadal reacts after loosing point against fabio fognini

ಕ್ಲೇ ಅಂಗಣದಲ್ಲಿ ನನ್ನ ಅತ್ಯಂತ ಕಳಪೆ ಪ್ರದರ್ಶನ: ನಡಾಲ್‌

ಪ್ಯಾರಿಸ್‌, ಏಪ್ರಿಲ್‌ 21: ಕಿಂಗ್‌ ಆಫ್‌ ಕ್ಲೇ ಖ್ಯಾತಿಯ ಆಟಗಾರ ಸ್ಪೇನ್‌ನ ದಿಗ್ಗಜ ರಾಫೆಲ್‌ ನಡಾಲ್‌ಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್ಸ್‌ನಲ್ಲಿ ಇಟಲಿಯ ಅನುಭವಿ ಆಟಗಾರ ಫಾಬಿಯೊ ಫಾಗ್ನಿನಿ ಆಘಾತ ನೀಡಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಫಾಗ್ನಿನಿ, 6-4, 6-2 ಅಂತರದ ನೇರ ಸೆಟ್‌ಗಳಿಂದ 17 ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡೆಯ 32 ವರ್ಷದ ನಡಾಲ್‌ಗೆ ಆಘಾತ ನೀಡಿದರು. ಫೈನಲ್‌ ಪಂದ್ಯದಲ್ಲಿ ಫಾಗ್ನಿನಿ ಸರ್ಬಿಯಾದ ಆಟಗಾರ ದುಸಾನ್‌ ಲಾಜೊವಿಚ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ನಡಾಲ್‌ ಎದುರು ಈವರೆಗೆ 15 ಬಾರಿ ಪೈಪೋಟಿ ನಡೆಸಿರುವ ವಿಶ್ವದ 18ನೇ ಶ್ರೇಯಾಂಕದ ಆಟಗಾರ ಫಾಬಿಯೊ ನಾಲ್ಕನೇ ಬಾರಿ ಗೆಲುವಿನ ಸಿಹಿಯುಂಡಿದ್ದಾರೆ. ಇದರೊಂದಿಗೆ ಮಾಂಟೆ ಕಾರ್ಲೊ ಅಂಗಣದಲ್ಲಿ ನಡಾಲ್‌ ಅವರ ಸತತ 18 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ನಡಾಲ್‌, ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲೂ ಎದುರಾಳಿ ಗೈಡೊ ಪೆಲ್ಲಾ ವಿರುದ್ಧ ತಿಣುಕಾಡಿ ಗೆದ್ದು ಉಪಾಂತ್ಯಕ್ಕೆ ಕಾಲಿಟ್ಟಿದ್ದರು. ಸೆಮಿಫೈನಲ್ಸ್‌ ಪಂದ್ಯದ ವೇಳೆ ಬೀಸುತ್ತಿದ್ದ ಗಾಳಿಯಿಂದಾಗಿ ವಿಚಲಿತರಾದ ನಡಾಲ್‌ ಎಲ್ಲಿಯೂ ತಮ್ಮ ನೈಜ ಶಕ್ತಿ ಪ್ರದರ್ಶಿಸಲು ಸಾಧ್ಯವಾಗದೆ ನೇರ ಸೆಟ್‌ಗಳ ಹೀನಾಯ ಸೋಲಿಗೆ ತಲೆಬಾಗಿದರು.

ಅತ್ಯಂತ ಕಳಪೆ ಪ್ರದರ್ಶನ

ಅತ್ಯಂತ ಕಳಪೆ ಪ್ರದರ್ಶನ

ಕ್ಲೇ ಕೋರ್ಟ್‌ ಟೂರ್ನಿಗಳಲ್ಲಿ ಕಳೆದ 14 ವರ್ಷಗಳಲ್ಲಿ ನೀಡಿದ ನನ್ನ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ ಎಂದು ರಾಫೆಲ್‌ ನಡಾಲ್‌ ಹೇಳಿಕೊಂಡಿದ್ದಾರೆ. "ನನ್ನ ವೃತ್ತಿಬದುಕಿನಲ್ಲಿ ಆಡಿದ ಅತ್ಯಂಕ ಕಳಪೆ ಪಂದ್ಯವಿದೆ. ಯಾವುದೂ ಸರಿಯಾಗಿರಲಿಲ್ಲ. ಒಬ್ಬ ಬಲಿಷ್ಠ ಎದುರಾಳಿ ವಿರುದ್ಧ ಅತ್ಯಂತ ಕಳಪೆ ಆಟವಾಡಿದೆ. ಹೀಗಾಗಿ ಸೋಲಿಗೆ ನಾನು ಅರ್ಹ,'' ಎಂದು ನಡಾಲ್‌ ಪಂದ್ಯದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು ನಡೆದ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಟೂರ್ನಿ ವೇಳೆ ಸೆಮಿಫೈನಲ್ಸ್‌ ಪಂದ್ಯಕ್ಕೂ ಮುನ್ನ ಮಂಡಿ ನೋವಿನ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿದ್ದ ನಡಾಲ್‌, ಮಾಂಟೆ ಕಾರ್ಲೊ ಅಂಗಣದಲ್ಲಿಆಟಕ್ಕೆ ಮರಳಿದ್ದರು.

ಮೆಡ್ವಡೆವ್‌ಗೆ ಸೋಲುಣಿಸಿದ ದುಸಾನ್‌

ಮೆಡ್ವಡೆವ್‌ಗೆ ಸೋಲುಣಿಸಿದ ದುಸಾನ್‌

ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ರಷ್ಯಾದ ಆಟಗಾರ 23 ವರ್ಷದ ಯುವ ಪ್ರತಿಭೆ ಡೇನಿಯಲ್‌ ಮೆಡ್ವೆಡೆವ್‌ಗೆ ಸರ್ಬಿಯಾದ ಅನುಭವಿ ಆಟಗಾರ ದುಸಾನ್‌ ಲಾಜೊವಿಕ್‌ ಸೋಲುಣಿಸಿದರು. 28 ವರ್ಷದ ಆಟಗಾರ ಲಾಜೊವಿಕ್‌, 7-5, 6-1ರ ನೇರ ಸೆಟ್‌ಗಳಿಂದ ಡೇನಿಯೆಲ್‌ ಸವಾಲನ್ನು ಮೆಟ್ಟಿನಿಂತರು. ಇದೀಗ ತಮ್ಮ ವೃತ್ತಿ ಬದುಕಿನ ಬಹುದೊಡ್ಡ ಪ್ರಶಸ್ತಿ ಗೆಲುವಿಗಾಗಿ ಇಟಲಿಯ ಫಾಬಿಯೊ ಫಾಗ್ನಿನಿ ಅವರ ಸವಾಲನ್ನು ಎದುರಿಸಲಿದ್ದಾರೆ.

ನೊವಾಕ್‌ಗೆ ಶಾಕ್‌ ನೀಡಿದ್ದ ಡೇನಿಯೆಲ್‌

ನೊವಾಕ್‌ಗೆ ಶಾಕ್‌ ನೀಡಿದ್ದ ಡೇನಿಯೆಲ್‌

ಭವಿಷ್ಯದ ತಾರೆಗಳಲ್ಲಿ ಒಬ್ಬರಾಗಿರುವ ರಷ್ಯಾದ ಆಟಗಾರ ಡೇನಿಯೆಲ್‌ ಮೆಡ್ವೆಡೆವ್‌ ಟೂರ್ನಿಯ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ಗೆ 6-3, 4-6, 6-2ರ ಪ್ರಬಲ ಪೈಪೋಟಿಯಲ್ಲಿ ಆಘಾತ ನೀಡಿದ್ದರು. ಆದರೆ, ಸೆಮಿಫೈನಲ್ಸ್‌ನಲ್ಲಿ ಮತ್ತೊಬ್ಬ ಸರ್ಬಿಯನ್‌ ಆಟಗಾರನಿಗೆ ಸೋಲುಣಿಸಲು ವಿಫಲರಾದರು. ಸ್ಥಿರ ಪ್ರದರ್ಶನ ನೀಡುತ್ತಿರುವ ಡೇನಿಯೆಲ್‌ ಕಳೆದ ತಿಂಗಳು ನಡೆದ ಮಿಯಾಮಿ ಓಪನ್‌ನಲ್ಲೂ ಪ್ರಿ ಕ್ವಾರ್ಟರ್‌ಫೈನಲ್ಸ್‌ ತಲುಪಿದ ಸಾಧನೆ ಮಾಡಿದ್ದರು. ಅಲ್ಲಿ ರೋಜರ್‌ ಫೆಡರರ್‌ ಎದುರು ನಿರಾಸೆ ಅನುಭವಿಸಿದ್ದರು.

ಪುರುಷರ ಡಬಲ್ಸ್‌ ಫೈನಲ್‌

ಪುರುಷರ ಡಬಲ್ಸ್‌ ಫೈನಲ್‌

ಮೂರನೇ ಶ್ರೇಯಾಂಕ ಪಡೆದಿದ್ದ ಬ್ರೆಜಿಲ್‌ನ ಬ್ರೂನೊ ಸ್ವಾರೆಸ್‌ ಮತ್ತು ಬ್ರಿಟನ್‌ನ ಜೇಮಿ ಮರ್ರೆ ಜೋಡಿಗೆ ಸೆಮಿಫೈನಲ್ಸ್‌ನಲ್ಲಿ ಸೋಲುಣಿಸಿದ (7-6, 6-4) ನೆದರ್ಲೆಂಡ್ಸ್‌ನ ಜೋಡಿ ರಾಬಿನ್‌ ಹಾಸ್‌ ಮತ್ತು ವೆಸ್ಲೀ ಕೂಲ್‌ಹಾಫ್‌ ಜೋಡಿ ಪುರುಷರ ಡಬಲ್ಸ್‌ನ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದೆ. ಇದೀಗ ಪ್ರಶಸ್ತಿಗಾಗಿ ಕ್ರೊಯೇಷ್ಯಾದ ಫ್ರಾಂಕೊ ಕುಗೊರ್‌ ಮತ್ತು ನಿಕೊಲಾ ಮೆಕ್‌ಟಿಚ್‌ ಜೋಡಿಯನ್ನು ಎದುರಾಗಲಿದೆ. ನಿಕೊಲಾ-ಫ್ರಾಂಕೊ ಜೋಡಿ ಸೆಮಿಫೈನಲ್ಸ್‌ನಲ್ಲಿ ಅರ್ಜೆಂಟೀನಾದ ಹೊರಾಸಿಯೊ ಝೆಬ್ಲೊಸ್‌ ಮತ್ತುಮ್ಯಾಕ್ಸಿಮೊ ಗೊನ್ಸಾಲೆಸ್‌ ಎದುರು (6-4, 6-3) ಎದುರು ಗೆದ್ದು ಫೈನಲ್ ತಲುಪಿದೆ.

Story first published: Sunday, April 21, 2019, 15:31 [IST]
Other articles published on Apr 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X