ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್: ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ನವೊಮಿ ಒಸಾಕಾ

Naomi Osaka Beats Victoria Azarenka To Win Us Open

ಜಪಾನ್‌ನ ನವೊಮಿ ಒಸಾಕಾ ಯುಎಸ್ ಓಪನ್‌ ಮಹಿಳಾ ಸಿಂಗಲ್ಸ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ನವೊಮಿ ಒಸಾಕಾ ಬೈಲೋರಷ್ಯಾದ ವಿಕ್ಟೋರಿಯಾ ಅಝರೆಂಕಾ ಅವರನ್ನು ಕಣಿಸಿ ಎರಡನೇ ಬಾರಿಗೆ ಯುಎಸ್ ಓಪನ್‌ನ ಚಾಂಪಿಯನ್ ಎನಿಸಿಕೊಂಡಿದ್ದರು. ನವೊಮಿ 2018 ರಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

ನವೊಮಿ ಒಸಾಕಾ ಅವರ ಅಂತಾರಾಷ್ಟ್ರೀಯ ಟೆನ್ನಿಸ್ ವೃತ್ತಿ ಜೀವನದಲ್ಲಿ ಇದು 3ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. 22ರ ಹರೆಯದ ನವೊಮಿ ಒಸಾಕಾ 2018ರ ಯುಎಸ್ ಗ್ರ್ಯಾಂಡ್ ಸ್ಲ್ಯಾಮ್ ಬಳಿಕ 2019ರಲ್ಲಿ ಆಸ್ಟ್ರೇಲಿಯನ್ ಓಪನ್‌ಗೆ ಮುತ್ತಿಕ್ಕಿದ್ದರು. ಇದೀಗ ಮತ್ತೊಮ್ಮೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಲೈನ್ ಜಡ್ಜ್‌ಗೆ ಚೆಂಡು ಹೊಡೆದು ಅನರ್ಹಗೊಂಡ ಜೊಕೋವಿಕ್: ವಿಡಿಯೋಲೈನ್ ಜಡ್ಜ್‌ಗೆ ಚೆಂಡು ಹೊಡೆದು ಅನರ್ಹಗೊಂಡ ಜೊಕೋವಿಕ್: ವಿಡಿಯೋ

ನಾಲ್ಕನೇ ಶ್ರೇಯಾಂಕವನ್ನು ಹೊಂದಿರುವ ನವೊಮಿ ಒಸಾಕಾ ಫೈನಲ್ ಪಂದ್ಯದಲ್ಲಿ ಅನುಭವಿ ಶ್ರೇಯಾಂಕ ರಹಿತ ಆಟಗಾರ್ತಿ ಅಝರೆಂಕಾ ಸವಾಲನ್ನು 1-6, 6-3, 6-3 ಸೆಟ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾದರು. 1 ಗಂಟೆ 53 ನಿಮಿಷಗಳ ಕಾಲ ನಡೆದ ಈ ಪೈಪೋಟಿಯಲ್ಲಿ ಜಪಾನ್‌ನ ಯುವ ಆಟಗಾರ್ತಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಮೊದಲ ಸೆಟ್‌ ಅನ್ನು ಅನುಭವಿ ಅಝರೆಂಕಾ ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಸುತ್ತಿನ ಆರಂಭದಲ್ಲಿ ಅಝರಿಂಕಾ 2-0 ಅಂತರದಿಂದ ಮುನ್ನಡೆಯನ್ನು ಕಾಯ್ಕುಕೊಂಡಿದ್ದರು, ಆದರೆ ಬಳಿಕ ನವೊಮಿ ಒಸಾಕಾ ತಿರುಗಿ ಬಿದ್ದರು. ಅಝರಿಂಕಾ ಸರ್ವಿಸ್ ಅನ್ನು ಎರಡು ಬಾರಿ ಮುರಿದು 4-3 ಮುನ್ನಡೆಯನ್ನು ಸಾಧಿಸಿದರು. ಬಳಿಕ ಸಂಪೂರ್ಣ ಸೆಟ್ ತಮ್ಮ ವಶವಾಗುವಂತೆ ಮಾಡಿ ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು.

ಥಾಮಸ್, ಉಬರ್‌ ಕಪ್‌ನಿಂದ ಹಿಂದೆ ಸರಿದ ವಿಶ್ವ ಚಾಂಪಿಯನ್ ಪಿವಿ ಸಿಂಧುಥಾಮಸ್, ಉಬರ್‌ ಕಪ್‌ನಿಂದ ಹಿಂದೆ ಸರಿದ ವಿಶ್ವ ಚಾಂಪಿಯನ್ ಪಿವಿ ಸಿಂಧು

ಮೂರನೇ ಸುತ್ತಿನಲ್ಲೂ ಜಪಾನ್‌ನ ನವೊಮಿ ಒಸಾಕಾ ಅದಭುತ ಪ್ರದರ್ಶನವನ್ನು ತೋರಿದರು. ಈ ಹಂತದಲ್ಲಿ ಅಝರಿಂಕಾ ಪಾಲಿಗೆ ಹಲವು ಅವಕಾಶಗಳು ದೊರೆತರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅವರು ವಿಫಲರಾದರು. ಅಂತಿಮವಾಗಿ ಪಂದ್ಯವನ್ಉ ಸಂಪೂರ್ಣವಾಗಿ ಎದುರಾಳಿಗೆ ಬಟ್ಟುಕೊಟ್ಟರು ಅಝರಿಂಕಾ. ಓ ಮೂಲಕ ಅವೊಮಿ ಒಸಾಕಾ ಎರಡನೆ ಬಾರಿಗೆ ಯುಎಸ್ ಚಾಂಪಿಯನ್ ಗರಿಯನ್ನು ಮುಡಿಗೇರಿಸಿಕೊಂಡದ್ದಾರೆ.

Story first published: Monday, September 14, 2020, 10:16 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X