ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್‌ನಲ್ಲಿ ಆಡಲು ಮಾಜಿ ಚಾಂಪಿಯನ್ ನವೋಮಿ ಒಸಾಕಾ ರೆಡಿ

Naomi Osakas participation at Flushing Meadows confirmed

ಬೆಂಗಳೂರು, ಜುಲೈ 31: ಎರಡು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಜಪಾನ್‌ನ ಬಲಿಷ್ಠ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಅವರು ಪ್ರತಿಷ್ಠಿತ ಯುಎಸ್ ಓಪನ್‌ನಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. 2018ರಲ್ಲಿ ಇದೇ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಆವರಿಸಿದ್ದ ಒಸಾಕಾ ಅವರ ಮ್ಯಾನೇಜ್ಮೆಂಟ್ ತಂಡ ಇದನ್ನು ಖಾತರಿಪಡಿಸಿದೆ.

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ

ನವೋಮಿ ಒಸಾಕಾ ಅವರು ಯುಎಸ್ ಓಪನ್‌ಗೆ ಇನ್ನೂ ದಾಖಲಾತಿ ಮಾಡಿಕೊಂಡಿಲ್ಲ, ಅವರು ಟೂರ್ನಿಯಿಂದ ದೂರ ಉಳಿಯಲಿದ್ದಾರೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಆದರೆ ಆಗಸ್ಟ್‌ 31ರಿಂದ ಆರಂಭವಾಗಲಿರುವ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳಲು 31ರ ಹರೆಯದ ಒಸಾಕಾ ಸಿದ್ಧರಿರುವುದಾಗಿ ತಿಳಿದುಬಂದಿದೆ.

ಸಿನಿಮಾ ಪರದೆಯಲ್ಲಿ ಮಿಂಚಲು ಹರ್ಭಜನ್ ರೆಡಿ: ಚಿತ್ರದ ಟೀಸರ್ ಬಿಡುಗಡೆಸಿನಿಮಾ ಪರದೆಯಲ್ಲಿ ಮಿಂಚಲು ಹರ್ಭಜನ್ ರೆಡಿ: ಚಿತ್ರದ ಟೀಸರ್ ಬಿಡುಗಡೆ

ವಿಶ್ವ ನಂ.1 ಟೆನಿಸ್ ಆಟಗಾರ್ತಿ, ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಯುಎಸ್ ಓಪನ್ ಟೂರ್ನಿಯಲ್ಲಿ ಆಡದಿರುವ ಬಗ್ಗೆ ಗುರುವಾರ ನಿಲುವು ಪ್ರಕಟಿಸಿದ್ದರು. ಇದು ಖ್ಯಾತ ಟೂರ್ನಿಗೆ ಹಿನ್ನಡೆಯಾಗಿ ಕಾಣಿಸಿತ್ತು. ಆದರೆ ವಿಶ್ವ ನಂ.10 ಶ್ರೇಯಾಂಕಿತೆ ಒಸಾಕಾ ನಿರ್ಧಾರ ಟೂರ್ನಿ ಆಯೋಜಕರಿಗೆ ಖುಷಿ ತಂದಿದೆ. ಯುಎಸ್ ಓಪನ್, ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ.

Story first published: Friday, July 31, 2020, 15:23 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X