ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್ ಆಯೋಜಕರನ್ನು ಸ್ವಾರ್ಥಿಗಳು ಎಂದ ಆಸಿಸ್ ಟೆನ್ನಿಸಿಗ ನಿಕ್ ಕ್ರಿಗಿಯೋಸ್

Nick Kyrgios Criticises Selfish Us Open Organisers Over Tournament Plans

ಕೊರೊನಾ ವೈರಸ್‌ ಅಮೆರಿಕಾದಲ್ಲಿ ತನ್ನ ರುದ್ರಾವತಾರವನ್ನು ಮುಂದುವರಿಸಿದೆ. ನ್ಯೂಯಾರ್ಕ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ಬಾರಿಯ ಯುಎಸ್ ಓಪನ್ ನಡೆಸಲು ಯುಎಸ್‌ಟಿಎ ಸಿದ್ಧಗೊಳ್ಳುತ್ತಿದೆ. ನಿಗದಿತ ದಿನಾಂಕಕ್ಕೇ ನಡೆಯಲಿದೆ ಎಂದು ಹೇಳುತ್ತಿದೆ.

ಇದು ಟೆನ್ನಿಸ್ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಟೆನ್ನಿಸ್ ಆಟಗಾರರು ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾದ ನಿಕ್ ಕ್ರಿಗಿಯೋಸ್ ಯುನೈಟೆಟ್ ಸ್ಟೇಟ್ಸ್ ಟೆನ್ನಿಸ್ ಅಸೊಸಿಯೇಶನ್‌(ಯುಎಸ್‌ಟಿಎ)ಅನ್ನು ಸ್ವಾರ್ಥಿಗಳು ಎಂದು ಜರಿದಿದ್ದಾರೆ. ಕೊರೊನಾ ವೈರಸ್‌ನ ಭೀತಿಯ ಮಧ್ಯೆಯೂ ಯುಎಸ್ ಓಪನ್ ನಡೆಸಲು ಯೋಜನೆ ರೂಪಿಸುತ್ತಿರುವುದು ಆಯೋಜಕರು ಎಷ್ಟು ಸ್ವಾರ್ಥಿಗಳು ಎಂದು ನಿರೂಪಿಸುತ್ತದೆ ಎಂದಿದ್ದಾರೆ.

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರ

ನ್ಯೂಯಾರ್ಕ್ ನಗರದಲ್ಲಿ ನಿತ್ಯವೂ ನೂರಾರು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಲೇ ಇದೆ. ಹಾಗಿದ್ದರೂ ಕೂಡ ಅನೇಕ ಮಾಧ್ಯಮಗಳು ಯುಎಸ್‌ಟಿಎ ಪ್ರೇಕ್ಷಕರಿಲ್ಲದೆ ಯುಎಸ್‌ ಓಪನ್ ಗ್ರ್ಯಾಂಡ್ ಸ್ಲ್ಯಾಮ್‌ನ್ನು ನಡೆಸುವುದನ್ನು ಖಚಿತಪಡಿಸಿದೆ ಎಂದು ವರದಿ ಮಾಡಿದೆ.

ಇನ್ನೋರ್ವ ಆಸ್ಟ್ರೇಲಿಯಾದ ಟೆನ್ನಿಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಕುಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಅಮೆರಿಕಾದಲ್ಲಿ ಕೋವಿಡ್‌-19 ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಅದರಲ್ಲೂ ನ್ಯೂಯಾರ್ಕ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ, ಹೀಗಾಗಿ ಯು.ಎಸ್‌. ಓಪನ್‌ ಕೂಟನ್ನು ನಡೆಸಲು ಅವಸರ ಮಾಡಬಾರದು ಎಂಬುದಾಗಿ ಹೇಳಿದ್ದಾರೆ.

ಯುಎಸ್‌ ಓಪನ್ ನಡೆಯುವುದು ಅನುಮಾನ ಎಂದ ರಾಫೆಲ್ ನಡಾಲ್ಯುಎಸ್‌ ಓಪನ್ ನಡೆಯುವುದು ಅನುಮಾನ ಎಂದ ರಾಫೆಲ್ ನಡಾಲ್

"ಟೆನಿಸ್‌ ಮತ್ತೆ ಆರಂಭವಾಗುವುದನ್ನು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಇದಕ್ಕಾಗಿ ಅವಸರಪಡುವ ಅಗತ್ಯವಿಲ್ಲ. ಕೇವಲ ಆಟಗಾರರದಷ್ಟೇ ಅಲ್ಲ, ಎಲ್ಲರ ಆರೋಗ್ಯವೂ ಮುಖ್ಯ' ಎಂಬುದಾಗಿ ಬಾರ್ಟಿ ಹೇಳಿದರು. ರಾಫೆಲ್ ನಡಾಲ್, ಜಾಕೊವಿಕ್ ಸೇರಿದಂತೆ ಅನೇಕರು ಯುಎಸ್ ಓಪನ್‌ನಲ್ಲಿ ಭಾಗವಹಿಸುವುದರಿಂದ ಹಿಂದಕ್ಕೆ ಸರಿಯುವ ಬಗ್ಗೆ ಮಾತನಾಡಿದ್ದಾರೆ.

Story first published: Tuesday, June 16, 2020, 17:39 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X