ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆ ತೆಗೆದುಕೊಳ್ಳದಿದ್ರೆ, ಜೊಕೊವಿಕ್‌ಗೆ ಫೆಂಚ್ ಓಪನ್‌ಗೂ ಪ್ರವೇಶವಿಲ್ಲ!

Novak Djokovic

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ, ಸರ್ಬಿಯಾದ ಸ್ಟಾರ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ ಕಳೆದುಕೊಂಡ ಬೆನ್ನಲ್ಲೇ ಮತ್ತೊಂದು ಆಘಾತ ಅನುಭವಿಸಿದ್ದಾರೆ. ಕೊರೊನಾ ಲಸಿಕೆ ವಿರುದ್ಧ ಲಸಿಕೆ ಹಾಕದಿರುವ ಬಗ್ಗೆ ನಾಟಕೀಯ ಬೆಳವಣಿಗೆಗಳ ನಡುವೆ ಈಗಾಗಲೇ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿದಿರುವ ಜೊಕೊವಿಕ್ ಇತರೆ ಗ್ರ್ಯಾಂಡ್‌ಸ್ಲ್ಯಾಮ್‌ ರಾಷ್ಟ್ರಗಳ ಕಣ್ಣಿಗೂ ಬಿದ್ದಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿರುವ ಜೊಕೊವಿಕ್‌ಗೆ ಲಸಿಕೆ ಹಾಕದ ಹೊರತು ಫ್ರೆಂಚ್ ಓಪನ್ ಆಡಲು ಬಿಡುವುದಿಲ್ಲ ಎಂದು ಫ್ರೆಂಚ್ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ದೇಶದ ಕ್ರೀಡಾ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

IPL ಟೈಟಲ್ ಸ್ಪಾನ್ಸರ್‌ ಶುಲ್ಕ: 2008 ರಿಂದ 2022ರವರೆಗೆ ಎಷ್ಟು ಕೋಟಿ ರೂಪಾಯಿ?IPL ಟೈಟಲ್ ಸ್ಪಾನ್ಸರ್‌ ಶುಲ್ಕ: 2008 ರಿಂದ 2022ರವರೆಗೆ ಎಷ್ಟು ಕೋಟಿ ರೂಪಾಯಿ?

''ಲಸಿಕೆ ಇಲ್ಲ.. ಫ್ರೆಂಚ್ ಓಪನ್ ಇಲ್ಲ. ಇದು ಎಲ್ಲರಿಗೂ ಅನ್ವಯಿಸುತ್ತದೆ. ಇದೇ ನಿಯಮ ವಿಶ್ವದ ನಂಬರ್ ಒನ್ ಜೊಕೊವಿಕ್ ಅವರಿಗೂ ಅನ್ವಯಿಸುತ್ತದೆ. ನಾವು ಲಸಿಕೆ ಪಾಸ್ ನಿಯಮವನ್ನು ಜಾರಿಗೊಳಿಸಲಿದ್ದೇವೆ. ನಾವು ಈಗಾಗಲೇ ಒಂದು ಹೆಲ್ತ್ ಪಾಸ್ ಹೊಂದಿದ್ದೇವೆ. ಈ ನಿಯಮಗಳಿಗೆ ಯಾರೂ ಮೀರುವುದಿಲ್ಲ. ಇದು ಉದ್ಯಮದಲ್ಲಿನ ಯಾವುದೇ ಪ್ರಸಿದ್ಧ ವ್ಯಕ್ತಿಗೆ ಅನ್ವಯಿಸುತ್ತದೆ, "ಎಂದು ಕ್ರಿಶ್ಚಿಯನ್ ಸೈನ್ಸ್ ಮಾನಿಟರ್‌ನ ವಾಷಿಂಗ್ಟನ್ ಬ್ಯೂರೋದ ಮುಖ್ಯಸ್ಥ ಡೇವಿಡ್ ಕುಕ್ ಹೇಳಿದರು.

ಫ್ರೆಂಚ್ ಓಪನ್ ಇದೇ ವರ್ಷ ಮೇ 22 ರಂದು ಪ್ರಾರಂಭವಾಗುತ್ತದೆ. ರಾಫೆಲ್ ನಡಾಲ್ ಅತಿ ಹೆಚ್ಚು ಬಾರಿ ಫ್ರೆಂಚ್ ಓಪನ್ ಗೆದ್ದ ಸಾಧಕರಾಗಿದ್ದಾರೆ.

ವೀಸಾ ವಿಚಾರದಲ್ಲಿ ಜೊಕೊವಿಕ್ ಮತ್ತೊಮ್ಮೆ ಆಸ್ಟ್ರೇಲಿಯದ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಪ್ರಶಸ್ತಿ ಉಳಿಸಿಕೊಳ್ಳುವ ಅವರ ನಿರೀಕ್ಷೆ ಹುಸಿಯಾಗಿದೆ. ಆಸ್ಟ್ರೇಲಿಯನ್ ಓಪನ್ ಹಿನ್ನೆಲೆಯಲ್ಲಿ ಅವರು ಲಸಿಕೆ ಹಾಕದಿದ್ದರೂ, ವಿಶೇಷ ವಿನಾಯಿತಿಯೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದಿಳಿದರು. ಆದರೆ, ಆಸ್ಟ್ರೇಲಿಯ ಸರ್ಕಾರವು ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಿತು, ವ್ಯಾಕ್ಸಿನೇಷನ್ ಇಲ್ಲದೆ ಅವರನ್ನು ದೇಶಕ್ಕೆ ಅನುಮತಿಸಲಾಗುವುದಿಲ್ಲ ಎಂದು ಹೇಳಿತು.

ಆದಾಗ್ಯೂ, ಅವರು ನ್ಯಾಯಾಲಯದಲ್ಲಿ ಈ ಕುರಿತು ಪ್ರಶ್ನಿಸಿ ಗೆದ್ದರು. ಆದರೆ ಸರ್ಕಾರ ಮತ್ತೊಮ್ಮೆ ತನ್ನ ಸ್ವಂತ ಅಧಿಕಾರದೊಂದಿಗೆ ವೀಸಾವನ್ನು ರದ್ದುಗೊಳಿಸಿತು. ನಂತರ ಜೊಕೊವಿಕ್ ಎರಡನೇ ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಈ ಬಾರಿ ಅವರಿಗೆ ನಿರಾಸೆಯಾಯಿತು. ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಏಕಾಏಕಿ ಸಾರ್ವಜನಿಕ ಆರೋಗ್ಯ ಭದ್ರತೆಯ ಹಿನ್ನೆಲೆಯಲ್ಲಿ ವೀಸಾವನ್ನು ಹಿಂಪಡೆಯಲಾಗಿದೆ ಎಂಬ ಸರ್ಕಾರದ ಹೇಳಿಕೆಯನ್ನು ಕೋರ್ಟ್ ಒಪ್ಪಿಕೊಂಡಿದೆ. ಲಸಿಕೆ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಇದರೊಂದಿಗೆ ಜೊಕೊವಿಕ್ ನಿರಾಸೆಯಿಂದ ತಮ್ಮ ದೇಶಕ್ಕೆ ಹಿಂತಿರುಗಬೇಕಾಯಿತು.

Story first published: Tuesday, January 18, 2022, 14:17 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X