ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್ ಟೂರ್ನಿ ಆಯೋಜಿಸಿದ್ದಕ್ಕೆ ಕ್ಷಮೆ ಯಾಚಿಸಿದ ನೊವಾಕ್ ಜೊಕೋವಿಕ್

Novak Djokovic apologises for hosting tennis event ‘too soon’ amid coronavirus

ಬೆಲ್ಗ್ರೇಡ್, ಜೂನ್ 24: ಕೊರೊನಾವೈರಸ್‌ಗೆ ತುತ್ತಾಗಿರುವ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್, ಬಹಳ ಬೇಗನೆ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದಾಗಿ ಕ್ಷಮೆ ಯಾಚಿಸಿದ್ದಾರೆ. ಜೊಕೋವಿಕ್ ಸೇರಿ, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್, ಕೊವೇಷಿಯಾದ ಬೊರ್ನಾ ಕೋರಿಕ್ ಮತ್ತು ಸರ್ಬಿಯಾದ ವಿಕ್ಟರ್ ಟ್ರಾಯ್ಕಿಗೆ ಕೊರೊನಾ ತಗುಲಿದೆ.

ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!

ಜೊಕೋವಿಕ್ ಅವರು ಬಾಲ್ಕನ್‌ನಲ್ಲಿ 'ಆ್ಯಂಡ್ರಿಯಾ ಟೂರ್' ಎನ್ನುವ ಪ್ರದರ್ಶನ ಟೂರ್ನಿ ಆಯೋಜಿಸಿದ್ದರು. ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಜೊಕೋವಿಕ್, ಡಿಮಿಟ್ರೋವ್, ಕೋರಿಕ್, ಟ್ರಾಯ್ಕಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಜೊಕೋವಿಕ್ ಅವರ ಫಿಟ್ನೆಸ್ ಕೋಚ್ ಮಾರ್ಕೊ ಪಾನಿಚಿ ಮತ್ತು ಡಿಮಿಟ್ರೋವ್ ಕೋಚ್ ಕ್ರಿಶ್ಚಿಯನ್ ಗ್ರೋಹ್ ಅವರೂ ಸೋಂಕಿಗೀಡಾಗಿದ್ದಾರೆ.

ಮನೆ ಸದಸ್ಯನಿಗೆ ಅನಾರೋಗ್ಯ: ಅರ್ಚರ್‌ಗೆ ಎರಡನೇ ಬಾರಿ ಕೊರೊನಾ ಪರೀಕ್ಷೆಮನೆ ಸದಸ್ಯನಿಗೆ ಅನಾರೋಗ್ಯ: ಅರ್ಚರ್‌ಗೆ ಎರಡನೇ ಬಾರಿ ಕೊರೊನಾ ಪರೀಕ್ಷೆ

'ಬಲ್ಗೇರಿಯಾಗೆ ಬಂದ ಕೂಡಲೇ ನಾವು ಪರೀಕ್ಷೆಗೆ ಒಳಗಾದೆವು. ಜೆಲೆನಾಳಂತೆ (ಜೊಕೋವಿಕ್ ಪತ್ನಿ) ನನ್ನ ಫಲಿತಾಂಶ ಕೂಡ ಪಾಸಿಟಿವ್ ಬಂದಿದೆ. ಆದರೆ ನಮ್ಮ ಮಕ್ಕಳಿಗೆ ನೆಗೆಟಿವ್ ಬಂದಿದೆ,' ಎಂದು ಮಂಗಳವಾರ (ಜೂನ್ 23) ಜೊಕೋವಿಕ್ ಹೇಳಿಕೆಯ ಮೂಲಕ ತಿಳಿಸಿದ್ದರು.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಕ್ರಿಸ್ ಗೇಲ್ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಕ್ರಿಸ್ ಗೇಲ್

'ಸೋಂಕಿನ ಪ್ರತೀ ಪ್ರಕರಣಕ್ಕೂ ನಾನು ವಿಷಾದಿಸುತ್ತೇನೆ. ಯಾರ ಆರೋಗ್ಯಸ್ಥಿತಿಯೂ ಗಂಭೀರವಾಗಿಲ್ಲ, ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮುಂದಿನ 14 ದಿನಗಳ ಕಾಲ ಸೆಲ್ಫ್ ಐಸೊಲೇಶನ್‌ನಲ್ಲಿ ಇರಲಿದ್ದೇನೆ. ಐದು ದಿನಗಳಲ್ಲಿ ಮತ್ತೆ ಪರೀಕ್ಷೆ ನಡೆಸುತ್ತೇನೆ,' ಎಂದು ಜೊಕೋವಿಕ್ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಜೊಕೋವಿಕ್, ಇಂಥ ಪರಿಸ್ಥಿತಿಯಲ್ಲಿ ಇಷ್ಟು ಬೇಗ ಟೂರ್ನಿ ಆಯೋಜಿಸಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Story first published: Thursday, June 25, 2020, 10:22 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X