ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಲೈನ್ ಜಡ್ಜ್‌ಗೆ ಚೆಂಡು ಹೊಡೆದು ಅನರ್ಹಗೊಂಡ ಜೊಕೋವಿಕ್: ವಿಡಿಯೋ

Novak Djokovic disqualified from US Open after hitting line judge with ball

ನ್ಯೂಯಾರ್ಕ್: ಲೈನ್ ಜಡ್ಜ್‌ಗೆ ಚೆಂಡು ಹೊಡೆದಿರುವ ವಿಶ್ವ ನಂ.1 ಆಟಗಾರ ನೊವಾಕ್ ಜಕೋವಿಕ್ ಯುಎಸ್ ಓಪನ್‌ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ. ಭಾನುವಾರ (ಸೆಪ್ಟೆಂಬರ್ 6) ನಡೆದ 4ನೇ ಸುತ್ತಿನ ಪಂದ್ಯದ ಮೊದಲ ಸೆಟ್‌ ವೇಳೆ ಈ ಘಟನೆ ಸಂಭವಿಸಿದೆ. 4ನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ ಮತ್ತು ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಮುಖಾಮುಖಿಯಾಗಿದ್ದರು. ಮೊದಲ ಸೆಟ್‌ನಲ್ಲಿ 5-6ರ ಹಿನ್ನಡೆ ಅನುಭವಿಸಿದ ಜೊಕೋವಿಕ್, ನಿರಾಶೆಗೊಂಡಿದ್ದರು.

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು ಬರೆದ ಜೋಸ್ ಬಟ್ಲರ್ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು ಬರೆದ ಜೋಸ್ ಬಟ್ಲರ್

ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಸರ್ವ್‌ಗೂ ಮುನ್ನ ಚೆಂಡನ್ನು ಲೈನ್‌ನಲ್ಲಿ ನಿಂತಿದ್ದ ಜಡ್ಜ್‌ನತ್ತ ಹೊಡೆದರು. ಜೊಕೋವಿಕ್ ಹೊಡೆದ ಚೆಂಡು ಲೈನ್‌ನಲ್ಲಿದ್ದ ಮಹಿಳಾ ಜಡ್ಜ್‌ನ ಭುಜದ ಮೇಲ್ಭಾಗಕ್ಕೆ ಬಲವಾಗಿ ಬಡಿಯಿತು.

ಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿ

ಅಚಾತುರ್ಯ ನಡೆದಿದ್ದು ಗಮನಕ್ಕೆ ಬರುತ್ತಲೇ ಜೊಕೋವಿಕ್ ಕೂಡಲೇ ಮಹಿಳೆಯತ್ತ ಧಾವಿಸಿದವರೇ ಮಹಿಳೆಯಲ್ಲಿ ಕ್ಷಮೆ ಕೇಳಿದರು. ಕುಸಿದು ಬಿದ್ದ ಮಹಿಳೆಯ ನೆರವಿಗೂ ಮುಂದಾದರು.

ಜೊಕೋವಿಕ್ ಜೊತೆ ಸುದೀರ್ಘ ಚರ್ಚೆ

ಜೊಕೋವಿಕ್ ಜೊತೆ ಸುದೀರ್ಘ ಚರ್ಚೆ

ಆ ಬಳಿಕ ಟೂರ್ನಮೆಂಟ್ ರೆಫರೀ ಸೊರೆನ್ ಫ್ರೀಮೆಲ್ ಆರ್ತರ್ ಆ್ಯಷ್ ಸ್ಟೇಡಿಯಂಗೆ ಬಂದು ಚೇರ್ ಅಂಪೈರ್ ಅರೆಲಿ ಟೂರ್ಟೆ ಜೊತೆ ಮಾತನಾಡಿದರು. ಮತ್ತೆ 33ರ ಹರೆಯದ ಸರ್ಬಿಯನ್, ಮೂರು ಬಾರಿಯ ಯುಎಸ್ ಓಪನ್ ಟ್ರೋಫಿ ಗೆದ್ದ ಜೊಕೋವಿಕ್‌ ಜೊತೆಗೂ ಸುದೀರ್ಘ ಚರ್ಚೆ ನಡೆಸಿದರು.

ಉದ್ದೇಶಪೂರ್ವಕವಾಗಿ ಹೊಡೆದಿಲ್ಲ

ತಾನು ಉದ್ದೇಶಪೂರ್ವಕವಾಗಿ ಚೆಂಡು ಹೊಡೆದಿಲ್ಲ ಎಂದು ಚರ್ಚೆಯ ವೇಳೆ ಜೊಕೋವಿಕ್ ಮನವರಿಕೆ ಮಾಡಿದರಾದರೂ ಟೆನಿಸ್ ನಿಯಮದ ಪ್ರಕಾರ ಜೊಕೋವಿಕ್‌ ಅವರನ್ನು ಟೂರ್ನಿಯಿಂದ ಅನರ್ಹಗೊಳಿಸಲಾಯಿತು. ಜೊಕೋವಿಕ್ ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಅನ್ನೋದು ವಿಡಿಯೋ ಗಮನಿಸಿದಾಗಲೂ ಅರಿವಾಗುತ್ತದೆ.

2020ರಲ್ಲಿ ಸಾಲು ಸಾಲು ಸಂಕಟ

2020ರಲ್ಲಿ ಸಾಲು ಸಾಲು ಸಂಕಟ

ಬೆಲ್ಗೇಡ್ ನಲ್ಲಿ ಆ್ಯಂಡ್ರಿಯಾ ಪ್ರದರ್ಶನ ಟೆನಿಸ್ ಟೂರ್ನಿಯನ್ನು ಜೊಕೋವಿಕ್ ಆಯೋಜಿಸಿದ್ದರು. ಕೊರೊನಾ ಬಾದಿತ ಪ್ರದೇಶಗಳಿಗೆ ಹಣ ಸಂಗ್ರಹಿಸಿ ನೆರವು ನೀಡೋದು ಜೊಕೋವಿಕ್ ಯೋಜನೆಯಾಗಿತ್ತು. ಆದರೆ ಟೂರ್ನಿಯಲ್ಲಿ ಭಾಗವಹಿಸಿದ್ದ ಜೊಕೋವಿಕ್ ಸೇರಿ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯನ್ ಆಟಗಾರ), ಬೊರ್ನಾ ಕೋರಿಕ್ (ಕ್ರೊವೇಷಿಯಾ) ಮತ್ತು ವಿಕ್ಟರ್ ಟ್ರಾಯ್ಕಿಗೆ (ಸರ್ಬಿಯಾ) ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಕೂಡ ಜೊಕೋವಿಕ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ವಿಶ್ವ ಚಾಂಪಿಯನ್ ಜೊಕೋವಿಕ್

ಸದ್ಯ ಟೆನಿಸ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ನೊವಾಕ್ ಜೊಕೋವಿಕ್ 10,860 ಅಂಕಗಳನ್ನು ಕಲೆ ಹಾಕಿದ್ದಾರೆ. ಜೊಕೋವಿಕ್ ಹೆಸರಿನಲ್ಲಿ 17 ಗ್ರ್ಯಾಂಡ್‌ಸ್ಲ್ಯಾಮ್‌ಗಳ ದಾಖಲೆಯಿದೆ. ಜೊಕೋವಿಕ್ ನಂತರದ ಸ್ಥಾನಗಳಲ್ಲಿ ಸ್ಪೇನ್‌ನ ರಾಫೆಲ್ ನಡಾಲ್, ಆಸ್ಟ್ರಿಯಾದ ಡೊಮಿನಿಕ್ ಥೀಮ್ ಇದ್ದಾರೆ.

Story first published: Monday, September 7, 2020, 21:21 [IST]
Other articles published on Sep 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X