ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ಪರಿಹಾರಕ್ಕೆ 40,000 ಯೂರೋಸ್ ದೇಣಿಗೆ ನೀಡಿದ ಜೊಕೋವಿಕ್

Novak Djokovic donates 40,000 euros to Serbian town hit hard by virus

ಬೆಲ್ಗ್ರೇಡ್, ಜುಲೈ 2: ಕೊರೊನಾವೈರಸ್ ಪೀಡಿತ ಸರ್ಬಿಯಾ ನಗರಕ್ಕೆ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ 40,000 ಯೂರೋಸ್ (ಸುಮಾರು 33,79,415 ರೂ. ) ಅನ್ನು ದೇಣಿಗೆಯಾಗಿ ನೀಡಿದ್ದಾರೆ. ಸ್ಥಳೀಯ ಮಾಧ್ಯಮಗಳು ಬುಧವಾರ (ಜುಲೈ 1) ಇದನ್ನು ವರದಿ ಮಾಡಿವೆ.

ಮತ್ತೆ ಕ್ರಿಕೆಟ್ ಆರಂಭ, ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ಪಂದ್ಯದ ವೀಡಿಯೊ!ಮತ್ತೆ ಕ್ರಿಕೆಟ್ ಆರಂಭ, ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ಪಂದ್ಯದ ವೀಡಿಯೊ!

33ರ ಹರೆಯದ ಜೊಕೋವಿಕ್, ಸರ್ಬಿಯಾದ ನೊವಿ ಪಝರ್ ನಗರಕ್ಕೆ ಕೊರೊನಾವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಿದ್ದಾರೆ ಎಂದು ಅಲ್ಲಿನ 'ಸ್ಪೋರ್ಟ್ಸ್ ಕ್ಲಬ್ ಟಿವಿ' ಸ್ಪೋರ್ಟ್ಸ್ ಚಾನೆಲ್‌ ವರದಿ ಮಾಡಿದೆ. ಅಂದ್ಹಾಗೆ, ತಾನೇ ಆಯೋಜಿಸಿದ್ದ ಪ್ರದರ್ಶನ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೋವಿಗ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!

ಉಸಿರಾಟದ ತೊಂದರೆಯನ್ನುಂಟುಮಾಡುವ ಈ ಕೊರೊನಾವೈರಸ್ ಸೋಂಕು ಆತಂಕಕಾರಿಯಾಗಿ ಹಬ್ಬುತ್ತಿದ್ದರಿಂದ ನೊವಿ ಪಝರ್ ನಗರವನ್ನು ತುರ್ತು ಪರಿಸ್ಥಿತಿಯ ಕೇಂದ್ರವೆಂದು ಜೂನ್ ತಿಂಗಳಾಂತ್ಯದಲ್ಲಿ ಘೋಷಿಸಲಾಗಿತ್ತು. ತಿಂಗಳ ಹಿಂದೆ ಸರ್ಬಿಯಾದಲ್ಲಿ ದಿನಕ್ಕೆ 50ರಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಈಗ ದಿನಕ್ಕೆ 200ಕ್ಕೆ ಏರಿಕೆ ಕಂಡಿದೆ.

ಭಾರತ-ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ವಿಂಡೀಸ್ ದಿಗ್ಗಜ ಎವರ್ಟನ್ ವೀಕ್ಸ್ ನಿಧನಭಾರತ-ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ವಿಂಡೀಸ್ ದಿಗ್ಗಜ ಎವರ್ಟನ್ ವೀಕ್ಸ್ ನಿಧನ

ಬೆಲ್ಗ್ರೇಡ್‌ನಲ್ಲಿ ನೊವಾಕ್ ಜೊಕೋವಿಕ್ ಅವರು ಆ್ಯಂಡ್ರಿಯಾ ಎನ್ನುವ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಸರ್ಬಿಯಾವನ್ನು ಕೊರೊನಾದಿಂದ ಪಾರು ಮಾಡಲು ಟೂರ್ನಿಯ ಮೂಲಕ ದೇಣಿಗೆ ಸಂಗ್ರಹಿಸುವುದು ಜೊಕೋವಿಕ್ ಯೋಜನೆಯಾಗಿತ್ತು. ಆದರೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೊವಿಕ್‌ಗೂ ಸೇರಿ ಕೆಲ ಪ್ರಮುಖರಿಗೆ ಸೋಂಕು ತಗುಲಿತ್ತು.

Story first published: Thursday, July 2, 2020, 17:42 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X