ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್‌ಗೆ ಸೋಲುಣಿಸಿದ ಇವಾನ್ಸ್

Novak Djokovic knocked out of Monte Carlo Masters by Evans in last 16

ಮಾಂಟೆ ಕಾರ್ಲೋ: ಮಾಂಟೆ ಕಾರ್ಲೋವಿನಲ್ಲಿ ಗುರುವಾರ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇಂಗ್ಲೆಂಡ್ ಆಟಗಾರ ಡಾನ್ ಇವಾನ್ಸ್ ಎದುರು ಸೋತಿರುವ ಜೊಕೋವಿಕ್ ಟೂರ್ನಿಯಿಂದ ಹೊರ ಬೀಳಬೇಕಾಗಿ ಬಂದಿದೆ.

ಐಟಿಎಫ್‌ ಪುರುಷರ ಟೆನಿಸ್‌ನಲ್ಲಿ ಕರ್ನಾಟಕದ ನಿಕಿ ಪೂಣಚ್ಚಗೆ ಪ್ರಶಸ್ತಿಐಟಿಎಫ್‌ ಪುರುಷರ ಟೆನಿಸ್‌ನಲ್ಲಿ ಕರ್ನಾಟಕದ ನಿಕಿ ಪೂಣಚ್ಚಗೆ ಪ್ರಶಸ್ತಿ

ಗುರುವಾರ (ಏಪ್ರಿಲ್ 15) ನಡೆದ ಪುರುಷರ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೋವಿಕ್ ಅವರು ಡಾನ್ ಇವಾನ್ಸ್ ಎದುರು 6-4, 7-5 ಅಂತರದ ನೇರ ಸೆಟ್ ಸೋಲನುಭವಿಸಿದರು. ಪಂದ್ಯದಲ್ಲಿ ಜಕೋವಿಕ್ ಯಾವುದೇ ರಿದಂ ಕಾಣದೆ ಪರದಾಡಿದ್ದು ಕಂಡುಬಂತು.

ಮಾಂಟೆ ಕಾರ್ಲೋ ಟೂರ್ನಿಯಲ್ಲಿ 2013 ಮತ್ತು 2015ರಲ್ಲಿ ಪ್ರಶಸ್ತಿ ಗೆದ್ದಿದ್ದ ಜೊಕೋವಿಕ್, ಈ ಬಾರಿ ವಿಶ್ವ ನಂ.33ನೇ ಶ್ರೇಯಾಂಕಿತ ಇವಾನ್ಸ್ ಎದುರು ತಲೆ ಬಾಗಬೇಕಾಯಿತು. ಕಳೆದ ಫೆಬ್ರವರಿಯಲ್ಲಷ್ಟೇ ಜೊಕೋವಿಕ್ ಆಸ್ಟ್ರೇಲಿಯಾ ಓಪನ್‌ನಲ್ಲಿ 9ನೇ ಬಾರಿಗೆ ಚಾಂಪಿಯನ್‌ ಆಗಿ ಮೂಡಿ ಬಂದಿದ್ದರು. ಆದರೆ ನೊವಾಕ್‌ ಈ ಸೋಲಿನೊಂದಿಗೆ ಈ ವರ್ಷದ ಮೊದಲ ಸೋಲು ಅನುಭವಿಸಬೇಕಾಗಿ ಬಂದಿದೆ.

ಮಿಲ್ಲರ್, ಮೋರಿಸ್ ಬ್ಯಾಟಿಂಗ್: ಡೆಲ್ಲಿ ವಿರುದ್ಧ ರಾಜಸ್ಥಾನ್‌ಗೆ ರೋಚಕ ಜಯಮಿಲ್ಲರ್, ಮೋರಿಸ್ ಬ್ಯಾಟಿಂಗ್: ಡೆಲ್ಲಿ ವಿರುದ್ಧ ರಾಜಸ್ಥಾನ್‌ಗೆ ರೋಚಕ ಜಯ

ಜೊಕೋವಿಕ್ ಎದುರು ಗೆದ್ದು ಮುನ್ನಡೆದಿರುವ ಇವಾನ್ಸ್ ಸೆಮಿಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕಿತ, ಬೆಲ್ಜಿಯಂನ ಡೇವಿಡ್ ಗೋಫಿನ್ ಸವಾಲು ಸ್ವೀಕರಿಸಲಿದ್ದಾರೆ.

Story first published: Friday, April 16, 2021, 9:48 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X