ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಜರ್‌ ಫೆಡರರ್‌ಗೆ ಸೋಲುಣಿಸಿದ ನಡಾಲ್‌ ಫ್ರೆಂಚ್‌ ಓಪನ್‌ ಫೈನಲ್‌ಗೆ

Rafael Nadal crushes Federer to reach 12th French Open final

ಪ್ಯಾರಿಸ್‌, ಜೂನ್‌ 07: 'ಕಿಂಗ್‌ ಆಫ್‌ ಕ್ಲೇ' ಬಿರುದಿಗೆ ತಕ್ಕ ಆಟವಾಡಿದ ಸ್ಪೇನ್‌ನ ಅನುಭವಿ ಆಟಗಾರ ಹಾಗೂ ವಿಶ್ವದ 2ನೇ ಶ್ರೇಯಾಂಕ ಹೊಂದಿರುವ ರಾಫೆಲ್‌ ನಡಾಲ್‌, ತಮ್ಮ ದೀರ್ಘ ಕಾಲದ ಎದುರಾಳಿ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಅವರನ್ನು ನೇರ ಸೆಟ್‌ಗಳ ಅಂತರದಲ್ಲಿ ಮಣಿಸಿ ದಾಖಲೆಯ 12ನೇ ಬಾರಿ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ರೊಲ್ಯಾಂಡ್‌ ಗ್ಯಾರೊಸ್‌ ಅಂಗಣದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್ಸ್‌ ಪಂದ್ಯದಲ್ಲಿ ಅಕ್ಷರಶಃ ಮಿಂಚಿನ ಆಟವಾಡಿದ 33 ವರ್ಷದ ಎಡಗೈ ಆಟಗಾರ ನಡಾಲ್‌, ಎರಡೂವರೆ ಗಂಟೆಗಳ ಕಾಲ ಪೈಪೋಟಿಯಲ್ಲಿ 6-3, 6-4, 6-2 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಸುಲಭವಾಗಿ ಫೆಡರರ್‌ ಅವರ ಸವಾಲನ್ನು ಮೆಟ್ಟಿನಿಂತರು.

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

ಇದರೊಂದಿಗೆ 2015ರ ಬಳಿಕ ಇದೇ ಮೊದಲ ಬಾರಿ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಆಡಿದ್ದ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ರೋಜರ್‌ ಫೆಡರರ್‌ ಅವರ ಅಭಿಯಾನ ಸೆಮಿಫೈನಲ್ಸ್‌ಗೆ ಅಂತ್ಯಗೊಂಡಿದೆ. ಈ ಪಂದ್ಯ ನಡಾಲ್‌ ಮತ್ತು ಫೆಡರರ್‌ ನಡುವಣ 39ನೇ ಕಾದಾಟವಾಗಿದ್ದು, ಗೆಲುವಿನೊಂದಿಗೆ ಮುಖಾಮುಖಿ ದಾಖಲೆಯನ್ನು ನಡಾಲ್‌ 24-15ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಅಲ್ಲದೆ ಫೆಡರರ್‌ ಎದುರು ಅನುಭವಿಸಿದ್ದ ಸತತ 5 ಸೋಲಿನ ಸರಮಾಲೆಯಿಂದಲೂ ನಡಾಲ್‌ ಹೊರಬಂದಿದ್ದಾರೆ.

 ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 500 ರೂ. ದಂಡ ತೆತ್ತಿದ್ದೇಕೆ ಗೊತ್ತಾ? ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 500 ರೂ. ದಂಡ ತೆತ್ತಿದ್ದೇಕೆ ಗೊತ್ತಾ?

ಇದೀಗ ವೃತ್ತಿ ಬದುಕಿನ 18ನೇ ಗ್ರ್ಯಾನ್‌ ಸ್ಲ್ಯಾಮ್‌ ಹಾಗೂ ಪ್ರೆಂಚ್‌ ಓಪನ್‌ ಅಂಗಣದಲ್ಲಿ ವಿಶ್ವ ದಾಖಲೆಯ 12ನೇ ಟ್ರೋಫಿ ಗೆಲುವಿನ ವಿಶ್ವಾಸದೊಂದಿಗೆ ನಡಾಲ್‌ ಫೈನಲ್‌ಗೆ ದಾಪುಗಾಲಿಟ್ಟಿದ್ದು, ವಿಶ್ವದ ಹಾಲಿ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅಥವಾ ಆಸ್ಟ್ರಿಯಾದ ಯುವ ಪ್ರತಿಭೆ ಹಾಗೂ 4ನೇ ಶ್ರೇಯಾಂಕ ಹೊಂದಿರುವ ಡಾಮಿನಿಕ್‌ ಥೀಮ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

Story first published: Friday, June 7, 2019, 21:59 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X