2020ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಶ್ವದ ನಂಬರ್ 1 ಮತ್ತು ನಂಬರ್ 2 ಆಟಗಾರರಾದ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಮುಖಾಮುಖಿಯಾಗಲಿದ್ದಾರೆ.
ಸರ್ಬಿಯಾದ ನೊವಾಕ್, ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ 6-3, 6-2, 5-7, 4-6, 6-1 ಸೆಟ್ಗಳಿಂದ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಜಯಗಳಿಸಿದರು. ಈ ಮೂಲಕ ಜೊಕೊವಿಕ್ ಐದನೇ ಬಾರಿಗೆ ರೋಲ್ಯಾಂಡ್ ಗ್ಯಾರೊಸ್ ಫೈನಲ್ ಮತ್ತು 27 ನೇ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಅನ್ನು ತಲುಪಿದ್ದಾರೆ.
ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್ಗೆ ಹೋಗುವಾಗ ಎಷ್ಟು ರೂ. ವಾಚ್!
ಮತ್ತೊಂದೆಡೆ ಸ್ಪೇನ್ನ ನಡಾಲ್, ಸೆಮಿಫೈನಲ್ನಲ್ಲಿ ಡಿಯಾಗೋ ಶ್ವಾರ್ಟ್ಜ್ಮನ್ ವಿರುದ್ಧ 6-3, 6-3, 7-6 (0) ಅಂತರದಿಂದ 13 ನೇ ರೋಲ್ಯಾಂಡ್ ಗ್ಯಾರೊಸ್ ಫೈನಲ್ ತಲುಪಿದರು.
ಮೂರನೇ ಸೆಟ್ನಲ್ಲಿ ಶ್ವಾರ್ಟ್ಜ್ಮನ್ ನಡಾಲ್ ಅವರನ್ನು ಸಾಕಷ್ಟು ವಿಸ್ತರಿಸಿದರು ಆದರೆ ಸ್ಪೇನ್ ಆಟಗಾರ ನಡಾಲ್ ಟೈಬ್ರೇಕ್ನಲ್ಲಿ ಅಗ್ರಸ್ಥಾನದಲ್ಲಿದ್ದನು ಮತ್ತು ಅದರೊಂದಿಗೆ ಸಂಪೂರ್ಣವಾಗಿ ಪಂದ್ಯವನ್ನ ಗೆದ್ದು ಫೈನಲ್ಗೆ ಎಂಟ್ರಿಕೊಟ್ಟಿದ್ದಾರೆ.
12 ಬಾರಿ ಫ್ರೆಂಚ್ ಓಪನ್ ಕಿರೀಟ ತೊಟ್ಟಿರುವ ರಾಫೆಲ್ ನಡಾಲ್ ಇದುವರೆಗೆ 19 ಗ್ರ್ಯಾಂಡ್ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೀಗಾಗಿ ಟೆನಿಸ್ ದಿಗ್ಜಜ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ರ ಐತಿಹಾಸಿಕ ದಾಖಲೆ 20 ಗ್ರ್ಯಾಂಡ್ಸ್ಲ್ಯಾಮ್ ಪ್ರಶಸ್ತಿಗೆ ಸಮನಾಗಿ ನಿಲ್ಲಲು ಇನ್ನೊಂದೇ ಗೆಲುವು ಬಾಕಿ ಇದೆ. ಹಾಗೆ ಆಗಿದ್ದೇ ಆದಲ್ಲಿ ಫೆಡರರ್ ದಾಖಲೆಯನ್ನ ನಡಾಲ್ ಸರಿಗಟ್ಟಲಿದ್ದಾರೆ.
ಮತ್ತೊಂದೆಡೆ 17 ಗ್ರ್ಯಾಂಡ್ಸ್ಲ್ಯಾಮ್ಗಳ ಒಡೆಯ ನೊವಾಕ್ ಜೊಕೊವಿಕ್ಗೆ ಫೈನಲ್ನಲ್ಲಿ ಗೆಲುವು ಕಂಡರೆ 18ನೇ ಪ್ರಶಸ್ತಿಗೆ ಮುತ್ತಿಕ್ಕಲಿದ್ದಾರೆ. ಜೊತೆಗೆ ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಳ್ಳಲಿದ್ದಾರೆ.