|
ಅಂತಿಮ ಪಂದ್ಯವನ್ನಾಡಿದ ರೋಜರ್ ಫೆಡರರ್
ತನ್ನ ವೃತ್ತಿಜೀವನದ ಅಂತಿಮ ಪಂದ್ಯವನ್ನಾಡಿದ ರೋಜರ್ ಫೆಡರರ್ ಮೇಲೆ ಇಡೀ ಟೆನಿಸ್ ಲೋಕದ ಕಣ್ಣಿತ್ತು. ಇದರೊಂದಿಗೆ ಫೆಡರರ್ ಸ್ವಲ್ಪ ನಿರಾಸೆಯ ರೀತಿಯಲ್ಲಿ ವೃತ್ತಿಪರ ಟೆನಿಸ್ ನಿಂದ ಹೊರಬಿದ್ದರು. ಲೇವರ್ ಕಪ್ ಆರಂಭಕ್ಕೂ ಮುನ್ನ ಎಲ್ಲರ ಕಣ್ಣು ಸ್ವಿಟ್ಜರ್ಲೆಂಡ್ ನ ತಾರೆಯತ್ತ ನೆಟ್ಟಿದ್ದು, ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದ ಮುಂದೆ ಆಟಕ್ಕೆ ವಿದಾಯ ಹೇಳಿದರು.
ಈ ಮೂಲಕ ರೋಜರ್ ಫೆಡರರ್ ಶುಕ್ರವಾರ ಸೆಪ್ಟೆಂಬರ್ 23 ರಂದು ATP ಪ್ರವಾಸದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅವರು ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ 22 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ರಾಫೆಲ್ ನಡಾಲ್ ಅವರೊಂದಿಗೆ ಪಾಲುದಾರರಾದರು. ಫೆಡರರ್ ನಿರ್ಗಮನದ ಸಮಯದಲ್ಲಿ ನಡಾಲ್ ಸ್ವತಃ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇಬ್ಬರೂ ಆಟಗಾರರು ತುಂಬಾ ಭಾವುಕರಾಗಿದ್ದರು.
|
ಗೆಳೆಯನನ್ನು ನೆನೆದು ಕಣ್ಣೀರಿಟ್ಟ ರಾಫೆಲ್ ನಡಾಲ್
ಫೆಡರರ್ ಉನ್ನತ ಮಟ್ಟದ ಟೆನಿಸ್ಗೆ ಪ್ರವೇಶಿಸಿ 20 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ ಮತ್ತು ಇಷ್ಟು ವರ್ಷಗಳ ಕಾಲ ಅಭಿಮಾನಿಗಳನ್ನು ರಂಜಿಸಿದ್ದು, ಟೆನಿಸ್ ಲೋಕ ಕಂಡಂತಹ ಅದ್ಭುತ ಟೆನಿಸ್ ಪ್ಲೇಯರ್ ಆಗಿದ್ದಾರೆ.
ಫೆಡರರ್ ಮತ್ತು ನಡಾಲ್ ಪಂದ್ಯವನ್ನು ಸೋತ ಬಳಿಕ, ಸ್ವಿಸ್ ತಾರೆಗೆ ಕಿಕ್ಕಿರಿದ ಅಂಗಣದಿಂದ ಚಪ್ಪಾಳೆ ಗಿಟ್ಟಿಸಿದರು.ಏತನ್ಮಧ್ಯೆ, ಪಂದ್ಯದ ನಂತರದ ಸಂದರ್ಶನದಲ್ಲಿ ಫೆಡರರ್ ಕಣ್ಣೀರು ಹಾಕಿದರು. ಫೆಡರರ್ ಮಾತು ಕೇಳಿ ನಡಾಲ್ ಕೂಡ ಕಣ್ಣೀರು ಹಾಕುತ್ತಿರುವುದು ದೊಡ್ಡ ಸ್ಕ್ರೀನ್ನಲ್ಲಿ ಕಂಡುಬಂದಿತು. ನಂತರ ಇಬ್ಬರೂ ಕೂಡ ಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವುದು ಕಂಡುಬಂದಿತು.
ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್!
|
ಲೆಜೆಂಡ್ ಫೆಡರರ್ ನಿರ್ಗಮನ: ಕಣ್ಣೀರಿಟ್ಟ ಅಭಿಮಾನಿಗಳು
ಈ ಇಬ್ಬರು ಲೆಜೆಂಡ್ಗಳು ಅಳುತ್ತಿರುವುದನ್ನು ಕಂಡು ಅಭಿಮಾನಿಗಳು ಕೂಡ ರೋಜರ್ ವಿದಾಯಕ್ಕೆ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ನೋವನ್ನ ಹಂಚಿಕೊಂಡಿದ್ದಾರೆ. ನಾನು ಆಟಗಾರರಿಗಾಗಿ ಎಂದಿಗೂ ಕಣ್ಣೀರು ಹಾಕಿಲ್ಲ ಆದರೆ ಈ ಸಮಯದಲ್ಲಿ ನನ್ನ ಇಡೀ ಮುಖವು ಕಣ್ಣೀರಿನಿಂದ ಒದ್ದೆಯಾಗಿದೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು. ಆಟಕ್ಕಾಗಿ ನೀವು ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮೊಂದಿಗೆ ನಗುತ್ತಿದ್ದೆವು ಮತ್ತು ಅಳುತ್ತಿದ್ದೆವು. ನೀವು ಎಂದಿಗೂ ಭೇಟಿಯಾಗದವರ ಜೊತೆ ಅಳುವುದು ಮತ್ತು ನಗುವುದು ಮತ್ತು ಸಂತೋಷಪಡುವುದು ಕ್ರೀಡೆಯಾಗಿದೆ ಎಂದು ಇನ್ನೊಬ್ಬ ಅಭಿಮಾನಿ ಹೇಳಿದರು.
ಆತನನ್ನು ಓಪನಿಂಗ್ ಮಾಡಲು ಹೇಳಿದೆ, ಆದ್ರೆ ಸೆಂಚುರಿಯೇ ಸಿಡಿಸಿಬಿಟ್ಟ ಎಂದ ದಿಲೀಪ್ ವೆಂಗಸರ್ಕಾರ್
|
ನಡಾಲ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು
ನಡಾಲ್ ಕಣ್ಣಿರಿಟ್ಟ ದೃಶ್ಯವನ್ನು ನೋಡಿದ್ರೆ, ಫೆಡರರ್ ಅವರ ಶ್ರೇಷ್ಠತೆ ಏನು ಎಂಬುದು ಗೊತ್ತಾಗುತ್ತದೆ ಎಂದು ಅಭಿಮಾನಿಯೊಬ್ಬರು ಬಣ್ಣಿಸಿದ್ದಾರೆ. ಎದುರಾಳಿಯು ಯಾರ ವಿದಾಯಕ್ಕಾಗಿ ಅಳುತ್ತಾನೋ ಆ ಆಟಗಾರನು ತುಂಬಾ ಶ್ರೇಷ್ಠನಾಗಿರುತ್ತಾನೆ.
ಪಂದ್ಯವನ್ನು ಗೆದ್ದ ನಂತರ ಟೀಮ್ ವರ್ಲ್ಡ್ ಪಂದ್ಯಾವಳಿಯನ್ನು 2-2 ರಿಂದ ಸಮಬಲಗೊಳಿಸಿತು. ಇದಕ್ಕೂ ಮೊದಲು, ಸೆಂಟರ್ ಕೋರ್ಟ್ನಲ್ಲಿ ಮೂರು ಸೆಟ್ಗಳ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಂಡಿ ಮರ್ರೆ ಅವರನ್ನು ಸೋಲಿಸಿದ ನಂತರ ಟೀಮ್ ವರ್ಲ್ಡ್ ತನ್ನ ಖಾತೆಯನ್ನು ತೆರೆಯಿತು.