ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆಸ್ಟ್ ಕ್ರಿಕೆಟ್ ನಂ. 1 ಶ್ರೇಯಾಂಕ ಸಚಿನ್ ಬದಲಿಗೆ ಫೆಡರರ್!

By Mahesh
Roger Federer Handed No.1 Test Ranking by ICC After Emulating Sachin Tendulkars

ಬೆಂಗಳೂರು, ಜುಲೈ 10: ವಿಶ್ವದ ನಂ 2 ಶ್ರೇಯಾಂಕಿತ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರಿಗೆ ಟೆಸ್ಟ್ ಕ್ರಿಕೆಟ್ ನ ಅಗ್ರ ಶ್ರೇಯಾಂಕ ಬಿರುದು ನೀಡಲಾಗಿದೆ. ಅರೇ! ಇದು ಹೇಗೆ ಸಾಧ್ಯ ಎನಿಸಬಹುದು.

ಆದರೆ, ವಿಂಬಲ್ಡನ್​ನ 4ನೇ ಸುತ್ತಿನ 16ನೇ ಪಂದ್ಯದಲ್ಲಿ ಎದುರಾಳಿ ಅಡ್ರಿಯಾನ್ ಮನ್ನಾರಿನೋ ಅವರನ್ನ 6-0, 7-5, 6-4 ಸೆಟ್​ಗಳಿಂದ ಮಣಿಸಿದರು. ಈ ಪಂದ್ಯದಲ್ಲಿ ಟೆನಿಸ್ ಚೆಂಡನ್ನು ಫೆಡರರ್ ಅಡಿದ ರೀತಿ ಈಗ ವೈರಲ್ ಆಗಿದೆ.

ಫೆಡರರ್ ಅವರು ಕ್ರಿಕೆಟ್ ಫಾರ್ವಡ್ ಡಿಫೆನ್ಸ್ ರೀತಿಯಲ್ಲಿ ಚೆಂಡನ್ನು ಎದುರಿಸಿದಂತೆ ಕಾಣುತ್ತದೆ. ಈ ದೃಶ್ಯವನ್ನು ಸೆರೆ ಹಿಡಿದು ವಿಂಬಲ್ಡನ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, ಹೇಗಿದೆ ಈ ಆಟ, ಏನು ರೇಟಿಂಗ್ ಕೊಡುತ್ತೀರಿ? ಎಂದು ಐಸಿಸಿಗೆ ಟ್ಯಾಗ್ ಮಾಡಲಾಗಿದೆ.



ಇದಕ್ಕೆ ಉತ್ತರಿಸಿದ ಐಸಿಸಿ, ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​ಮನ್ ಎಂದು ಟ್ವೀಟ್ ಮಾಡಿದೆ. ಇದರ ಜತೆಗೆ ರೋಜರ್ ಫೆಡರರ್ ಹೊಡೆತವನ್ನ ಸಚಿನ್ ತೆಂಡೂಲ್ಕರ್ ಡಿಫೆನ್ಸಿವ್ ಶಾಟ್​ಗೆ ಹೋಲಿಕೆ ಮಾಡಲಾಗಲಾಗಿದೆ.


ಯಾರು ಶ್ರೇಷ್ಠರು ಎಂಬ ಚರ್ಚೆ ನಡೆದಿದೆ. ಇದಲ್ಲದೆ, ಇಬ್ಬರು ದಿಗ್ಗಜರು ಸ್ಪೈಡರ್ ಮ್ಯಾನ್ ವೇಷ ತೊಟ್ಟು ಮುಖವಾಡ ಕಳಚಿ ನಿಂತ ಹಾಸ್ಯದ ಚಿತ್ರ ಟ್ವೀಟ್ ಮಾಡಲಾಗಿದೆ.

ಇದೆಲ್ಲವನ್ನು ಗಮಿಸಿರುವ ಸಚಿನ್, ಟ್ವೀಟ್ ಮಾಡಿ, ವಿಂಬಲ್ಡನ್ ಗೆದ್ದು ಬನ್ನಿ, ಒಟ್ಟಿಗೆ ಎರಡು ಆಟಗಳ ಸಂಭ್ರಮಾಚರಣೆಯಲ್ಲಿ ತೊಡಗೋಣ ಎಂದಿದ್ದಾರೆ.

Story first published: Tuesday, July 10, 2018, 18:06 [IST]
Other articles published on Jul 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X