ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೂರು ವರ್ಷಗಳ ಬಳಿಕ ಕ್ಲೇ ಕೋರ್ಟ್‌ ಕಣಕ್ಕೆ ರೋಜರ್‌ ಫೆಡರರ್‌

Roger Federer happy to return to clay after three-year hiatus

ಮ್ಯಾಡ್ರಿಡ್‌, ಮೇ 06: ವಿಶ್ವದ ಮಾಜಿ ನಂ.1 ಆಟಗಾರ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಮೂರು ವರ್ಷಗಳ ಸುದೀರ್ಘಾವಧಿಯ ಬಳಿಕ ಕ್ಲೇ ಕೋರ್ಟ್‌ ಟೂರ್ನಿಗಳಿಗೆ ಮರಳಲು ಸಜ್ಜಾಗಿದ್ದಾರೆ.

 ಟೆನಿಸ್‌: ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತರೂ 40 ಲಕ್ಷ ರೂ. ಬಹುಮಾನ! ಟೆನಿಸ್‌: ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತರೂ 40 ಲಕ್ಷ ರೂ. ಬಹುಮಾನ!

ವಿಶ್ವ ದಾಖಲೆಯ 20 ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದಿರುವ 37 ವರ್ಷದ ಅನುಭವಿ ಆಟಗಾರ ರೋಜರ್‌ ಫೆಡರರ್‌, ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡಲಿದ್ದು ನಾಲ್ಕನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

 ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್‌ ಚೋಪ್ರಾ ಪಾಲ್ಗೊಳುವುದು ಡೌಟ್‌! ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್‌ ಚೋಪ್ರಾ ಪಾಲ್ಗೊಳುವುದು ಡೌಟ್‌!

2016ರ ರೋಮ್‌ ಮಾಸ್ಟರ್ಸ್‌ನಲ್ಲಿ ಆಡಿದ ಬಳಿಕ ಕ್ಲೇ ಕೋರ್ಟ್‌ ಟೂರ್ನಿಗಳಿಮದ ಸಂಪೂರ್ಣ ದೂರ ಉಳಿದಿದ್ದ ರೋಜರ್‌ ಫೆಡರರ್‌, ಇದೀಗ ಮ್ಯಾಡ್ರಿಡ್‌ ಅಂಗಣದಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು ಎರಡನೇ ಸುತ್ತಿನಲ್ಲಿ ಅನುಭವಿ ಆಟಗಾರ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕೆಟ್‌ ಅಥವಾ ವೈಲ್ಡ್‌ ಕಾರ್ಡ್‌ ಆಟಗಾರ ಸ್ಪೇನ್‌ನ ಡಾವಿಡೊವಿಚ್‌ ಫೊಕಿನಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

 ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಜೋತ್ಸ್ನಾ, ಸೌರವ್‌ ಚಾಂಪಿಯನ್ಸ್‌ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಜೋತ್ಸ್ನಾ, ಸೌರವ್‌ ಚಾಂಪಿಯನ್ಸ್‌

ಫೆಡರರ್‌ ನಿರೀಕ್ಷೆಯಂತೆ ಗೆಲುವು ದಾಖಲಿಸಿದರೆ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಹಾಲಿ ಬಾರ್ಸಿಲೋನಾ ಓಪನ್‌ ಚಾಂಪಿಯನ್‌ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌, ಸೆಮಿಫೈನಲ್ಸ್‌ನಲ್ಲಿ ವಿಶ್ವದ ಹಾಲಿ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಮತ್ತು ಫೈನಲ್‌ನಲ್ಲಿ ಕ್ಲೇ ಕಿಂಗ್‌ ಹಾಗೂ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ರಾಫೆಲ್‌ ನಡಾಲ್‌ ಅವರ ಸವಾಲನ್ನು ಎದುರಿಸುವ ಸಾಧ್ಯತೆ ಇದೆ.

 2010ರ ವಿಶ್ವ ಚಾಂಪಿಯನ್‌ ಗೋಲ್‌ಕೀಪರ್‌ಗೆ ಹೃದಯಾಘಾತ, ಅಪಾಯದಿಂದ ಪಾರು 2010ರ ವಿಶ್ವ ಚಾಂಪಿಯನ್‌ ಗೋಲ್‌ಕೀಪರ್‌ಗೆ ಹೃದಯಾಘಾತ, ಅಪಾಯದಿಂದ ಪಾರು

"ಕಳೆದ ಡಿಸೆಂಬರ್‌ನಲ್ಲೇ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಂತಸವಿದೆ. ಕ್ಲೇ ಕೋರ್ಟ್‌ನಲ್ಲಿ ಆಡಲೇ ಬೇಕೆಂಬ ಆಸೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಸಂಗತಿ,'' ಎಂದು ರೋಜರ್‌ ತಮ್ಮ ತುಡಿತ ವಿವರಿಸಿದ್ದಾರೆ.

Story first published: Monday, May 6, 2019, 16:14 [IST]
Other articles published on May 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X