ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್‌: ಫ್ರೆಂಚ್‌ ಓಪನ್‌ನಲ್ಲಿ ರೋಜರ್‌ ಫೆಡರರ್‌ ಆಡುವುದು ಅನುಮಾನ!

Roger Federer out of Italian Open with right leg injury

ರೋಮ್‌, ಮೇ 17: ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌, ಇಲ್ಲಿ ನಡೆಯುತ್ತಿರುವ ರೋಮ್‌ ಮಾಸ್ಟರ್ಸ್‌ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ಸ್‌ ಪಂದ್ಯಕ್ಕೂ ಮುನ್ನ ಬಲಗಾಲಿನ ಗಾಯದ ಸಮಸ್ಯೆ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

<strong>ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!</strong>ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಇದರೊಂದಿಗೆ 37 ವರ್ಷದ ಅನುಭವಿ ಆಟಗಾರ ಹಾಗೂ 20 ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡೆಯ ರೋಜರ್‌, ಮೇ 25ರಂದು ಆರಂಭವಾಗಲಿರುವ ಪ್ರಸಕ್ತ ಸಾಲಿನ 2ನೇ ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿ ಕ್ಲೇ ಕೋರ್ಟ್‌ನಲ್ಲಿ ಆಡಲಾಗುವ ಫ್ರೆಂಚ್‌ ಓಪನ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವಾದಂತಿದೆ. ಫೆಡರರ್‌, 2015ರ ಬಳಿಕ ಇದೇ ಮೊದಲ ಬಾರಿ ಫ್ರೆಂಚ್‌ ಓಪನ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದರು.

ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

ರೋಮ್‌ ಮಾಸ್ಟರ್ಸ್‌ನಲ್ಲಿ ಪ್ರೆಂಚ್‌ ಓಪನ್‌ ಪೂರ್ವ ಸಿದ್ಧತೆ ಸಲುವಾಗಿ ಕಣಕ್ಕಿಳಿದಿದ್ದ ರೋಜರ್‌ ಫೆಡರರ್‌, ಪ್ರಿ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಆಟಗಾರ ಕ್ರೊಯೇಷ್ಯಾದ 22 ವರ್ಷದ ಪ್ರತಿಭಾನ್ವಿತ ಯುವ ಆಟಗಾರ ಬೋರ್ನಾ ಚೊರಿಚ್‌ ಎದುರು 2-6, 6-4, 7-6 (9/7) ಅಂತರದ ಸೆಟ್‌ಗಳ ಜಯ ದಾಖಲಿಸಿ ಅಂತಿಮ 8ರ ಘಟ್ಟಕ್ಕೆ ಮುನ್ನಡೆದಿದ್ದರು. ಇದಕ್ಕೂ ಮೊದಲು 32ರ ಘಟ್ಟದಲ್ಲಿ ಪೋರ್ಚುಗಲ್‌ನ ಜಾವೋ ಸೌಸಾ ಅವರನ್ನು ನೇರ ಸೆಟ್‌ಗಳ ಅಂತರದಲ್ಲಿ ಸುಲಭವಾಗಿ ಮಣಿಸಿದ್ದರು.

<strong>World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!</strong>World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

"ಸ್ಪರ್ಧೆಯಲ್ಲಿ ಮುಂದುವರಿಯಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಾಗಿದೆ. ದೈಹಿಕವಾಗಿ ನನ್ನ ಸ್ಥಿತಿ ಶೇ.100 ರಷ್ಟಿಲ್ಲ. ನನ್ನ ತಂಡದೊಂದಿಗೆ ಚರ್ಚಿಸಿದ ಬಳಿಕ ಆಡದೇ ಇರಲು ನಿರ್ಧರಿಸಿದ್ದೇನೆ. ಮುಂದಿನ ವರ್ಷ ಈ ಸುಂದರ ನಗರಿಗೆ ಮತ್ತೆ ಭೇಟಿ ನೀಡುವುದನ್ನು ಎದುರು ನೋಡುತ್ತೇನೆ,'' ಎಂದು ಫೆಡರರ್‌ ಹೇಳಿದ್ದಾರೆ.

<strong>ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!</strong>ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ರೋಜರ್‌ ಫೆಡರರ್‌ 2009ರಲ್ಲಿ ತಮ್ಮ ವೃತ್ತಿ ಜೀವನದ ಏಕಮಾತ್ರ ಫ್ರೆಂಚ್‌ ಓಪನ್‌ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ಫೆಡರರ್‌ ಅವರ ಕ್ವಾರ್ಟರ್‌ಫೈನಲ್ಸ್‌ ಎದುರಾಳಿ ಸ್ಟೆಫಾನೋಸ್‌ ಸಿಟ್ಸಿಪಾಸ್‌, ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಫೆಲ್‌ ನಡಾಲ್‌ ಅಥವಾ ಸ್ಪೇನ್‌ನ ಅನುಭವಿ ಆಟಗಾರ ಫರ್ನಾಂಡೊ ವರ್ಡಾಸ್ಕೋ ಅವರ ಸವಾಲನ್ನು ಎದುರಿಸಲಿದ್ದಾರೆ.

Story first published: Friday, May 17, 2019, 18:59 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X