ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಜರ್ ಫೆಡರರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಕೊನೆ

Roger Federer to miss Australian Open 2021

ಸಿಡ್ನಿ: ಸ್ವಿಸ್ ದಂತಕತೆ ರೋಜರ್ ಫೆಡರರ್ 2021ರ ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಗಾಯಕ್ಕೀಡಾಗಿದ್ದ ಫೆಡರರ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಮುಂದಿನ ವರ್ಷ ಮತ್ತೆ ಫೆಡರರ್ ಸ್ಪರ್ಧೆಗಿಳಿಯುವುದಾಗಿ ಅವರ ಏಜೆಂಟ್ ತಿಳಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಭಾರತಕ್ಕೆ ಮತ್ತೆ ಗಾಯದ ಭೀತಿಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಭಾರತಕ್ಕೆ ಮತ್ತೆ ಗಾಯದ ಭೀತಿ

ಟೀಮ್ 8 ಕಂಪನಿಯ ಸಿಇಒ, ಫೆಡರರ್ ಅವರ ದೀರ್ಘ ಕಾಲದ ಪ್ರತಿನಿಧಿ ಟೋನಿ ಗಾಡ್ಸಿಕ್ ಮಾತನಾಡಿ, 20 ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ಅವರು 2021ರ ಕ್ರೀಡಾ ಕ್ಯಾಲೆಂಡರ್‌ನತ್ತ ಗಮನ ಹರಿಸಲು ಯತ್ನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

2021ರ ಆಸ್ಟ್ರೇಲಿಯಾ ಓಪನ್‌ನಿಂದ ಹಿಂದೆ ಸರಿಯುವ ಮೂಲಕ ಫೆಡರರ್ ದಾಖಲೆಯೊಂದನ್ನು ಕೊನೆಗೊಳಿಸಿದ್ದಾರೆ. ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸತತ 21 ಬಾರಿ ಪಾಲ್ಗೊಂಡ ದಾಖಲೆ ಪೆಡರರ್ ಹೆಸರಿನಲ್ಲಿತ್ತು. ಆದರೆ ಈ ದಾಖಲೆ ಮುಂದಿನ ವರ್ಷ ಕೊನೆಗೊಳ್ಳಲಿದೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಫೆಡರರ್ ಅವರು 2000 ಇಸವಿಯಿಂದಲೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಿಗೆ 6 ಬಾರಿ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿದ್ದಾರೆ. 2021ರ ಫೆಬ್ರವರಿ 8ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿ ಫೆಬ್ರವರಿ 21ಕ್ಕೆ ಕೊನೆಗೊಳ್ಳಲಿದೆ.

Story first published: Monday, December 28, 2020, 15:12 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X