ಸೆಮಿಫೈನಲ್‌ನಲ್ಲಿ ಸೋಲು: ವಿಂಬಲ್ಡನ್‌ಗೆ ಭಾವನಾತ್ಮಕ ವಿದಾಯ ಹೇಳಿದ ಸಾನಿಯಾ ಮಿರ್ಜಾ

ವಿಂಬಲ್ಡನ್‌ನ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಸಾನಿಯಾ ಮಿರ್ಜಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಈ ಬಾರಿಯ ಟೆನಿಸ್ ಆವೃತ್ತಿ ತನ್ನ ವೃತ್ತಿ ಜೀವನದ ಕೊನೆಯ ಆವೃತ್ತಿಯಾಗಲಿದೆ ಎಂದು ಈಗಾಗಲೇ ಸಾನಿಯಾ ಮಿರ್ಜಾ ಘೋಷಿಸಿದ್ದರು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್ ಸಾನಿಯಾ ಮಿರ್ಜಾ ಅವರ ಅಂತಿಮ ವಿಂಬಲ್ಡನ್ ಟೂರ್ನಿ ಆಗಿದ್ದು ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಹೊರಬಿದ್ದ ಬಳಿಕ ಸಾನಿಯಾ ಮಿರ್ಜಾ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಕಳೆದ 20 ವರ್ಷಗಳ ಅನುಭವಗಳನ್ನು ಭಾರತದ ಅನುಭವಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್ ಆಗಿರುವ ವಿಂಬಲ್ಡನ್ ಟೂರ್ನಿಯಲ್ಲಿ ಮಿಸ್ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!

ಬುಧವಾರ ರಾತ್ರಿ ನಡೆದ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸಾನಿಯಾ ಮತ್ತು ಅವರ ಕ್ರೊವೇಷಿಯಾದ ಜೊತೆಗಾರ ಮೆಟ್ ಪಾವಿಕ್ ಸೋಲುಂಡಿದ್ದಾರೆ. ಸಾನಿಯಾ ಮಿರ್ಜಾ ಹಾಗೂ ಮೆಟ್ ಪಾವಿಕ್ ಜೋಡಿ ಕಳೆದ ವರ್ಷದ ಮಿಶ್ರ ಡಬಲ್ಸ್ ಚಾಂಪಿಯನ್ ಜೋಡಿಯಾಗಿರುವ ನೀಲ್ ಸ್ಕುಪ್ಸ್ಕಿ ಮತ್ತು ದೇಸಿರೇ ವಿರುದ್ಧ ಸೋಲು ಕಾಣುವ ಮೂಲಕ ಸ್ಪರ್ಧೆಯಿಂ ಹೊರಬಿದ್ದಿದ್ದಾರೆ. 4-6, 6-5, 6-4 ಅಂತರದಿಂದ ಸಾನಿಯಾ-ಪಾವಿಕ್ ಜೋಡಿಯನ್ನು ಗ್ರೇಟ್ ಬ್ರಿಟನ್-ಯುಎಸ್ ಜೋಡಿ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಗಾಯ ಅಡ್ಡಿಯಾಗಬಾರದೆಂದು ಮೊಣಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಸಾನಿಯಾ ಕೆಳಗಿಳಿದ್ದರು. ಈ ಪಂದ್ಯ ಪಂದ್ಯ 2 ಗಂಟೆ 18 ನಿಮಿಷಗಳ ಕಾಲ ನಡೆಯಿತು.

35 ವರ್ಷದ ಸಾನಿಯಾ ಆರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ ಮೂರು ಮಿಶ್ರ ಡಬಲ್ಸ್ ಟ್ರೋಫಿಗಳಾಗಿವೆ. ಸಾನಿಯಾ 2009 ಆಸ್ಟ್ರೇಲಿಯನ್ ಓಪನ್ ಮತ್ತು 2012 ರ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ನಂತರ 2014ರಲ್ಲಿ ಯುಎಸ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಬ್ರೆಜಿಲ್ ಆಟಗಾರ ಬ್ರೂನೋ ಸೌರೆಜ್ ಜೊತೆಗೆ ಗೆದ್ದುಕೊಂಡಿದ್ದಾರೆ. ಆದರೆ ಸಾನಿಯಾ ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇದಕ್ಕೂ ಮುನ್ನ 2011, 2013 ಮತ್ತು 2015ರಲ್ಲಿ ಕ್ವಾರ್ಟರ್ ಹಂತಕ್ಕೆರಿದ್ದು ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಸಾಧನೆಯಾಗಿದೆ. ಆದರೆ ಸಾನಿಯಾ ಮಿರ್ಜಾ 2015ರಲ್ಲಿ ವಿಂಬಲ್ಡನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಮುಂದಿನ ತಿಂಗಳು ನಡೆಯಲಿದೆ ಭಾರತ vs ಪಾಕಿಸ್ತಾನ ಪಂದ್ಯ; ಈ ಮಹತ್ವದ ಪಂದ್ಯದ ದಿನಾಂಕ ಔಟ್ಮುಂದಿನ ತಿಂಗಳು ನಡೆಯಲಿದೆ ಭಾರತ vs ಪಾಕಿಸ್ತಾನ ಪಂದ್ಯ; ಈ ಮಹತ್ವದ ಪಂದ್ಯದ ದಿನಾಂಕ ಔಟ್

"ಕ್ರೀಡೆ ಆಟಗಾರನಿಂದ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಸಾಕಷ್ಟು ಪಡೆಯುತ್ತದೆ. ಇಲ್ಲಿ ಗೆಲುವುಗಳು ಹಾಗೂ ಸೋಲುಗಳು.. ಸಾಕಷ್ಟು ಗಂಟೆಗಳ ಪರಿಶ್ರಮ, ಕಠಿಣ ಸೋಲುಗಳ ನಂತರ ನಿದ್ದೆಯಿಲ್ಲದ ರಾತ್ರಿಗಳು ಇರುತ್ತವೆ. ಆದರೆ ಅದು ಇತರ ಯಾವುದೇ ಕೆಲಸದಲ್ಲೂ ದೊರೆಯದಂತಾ ಸಾಕಷ್ಟು ವಿಚಾರಗಳನ್ನು ಮರಳಿ ನೀಡುತ್ತದೆ. ಅದಕ್ಕಾಗಿ ನಾನು ಈ ಕ್ರೀಡೆಗೆ ಯಾವಾಗಲೂ ಆಭಾರಿಯಾಗಿದ್ದೇನೆ. ಕಣ್ಣೀರು, ಸಂತೋಷ, ಹೋರಾಟ, ಪರದಾಟ ಇಲ್ಲಿ ಸಾಮಾನ್ಯ. ಆದರೆ ಅಂತಿಮವಾಗಿ ಇವೆಲ್ಲದಕ್ಕೂ ಮೌಲ್ಯವಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಸಾನಿಯಾ ಮಿರ್ಜಾ. ಈ ಸಂದರ್ಬದಲ್ಲಿ ವಿಂಬಲ್ಡನ್‌ಅನ್ನು ನಾನು ಮಿಸ್ ಮಾಡಿಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಈ ಪೋಸ್ಟ್‌ಅನ್ನು ವಿಂಬಲ್ಡನ್ ಅಧಿಕೃತ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 8, 2022, 9:17 [IST]
Other articles published on Jul 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X